ಕಾನೂನು ಬಾಹಿರ ಸರಿಕಾರಿ ಜಾಗೆ ಹೊತ್ತುವರಿ- ಕರಮ್ಮ ಜಿ.ನಾಯಕ

ದೇವದುರ್ಗ.ನ.೧೫-ಕಾನೂನು ಬಾಹಿರವಾಗಿ ಸರಕಾರದ ಜಾಗವನ್ನು ಶಾಸಕ ಶಿವನಗೌಡ ನಾಯಕ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಲೋಕೊಪಯೋಗಿ ಇಲಾಖೆ ಕಾಂಪೌಂಡ್ ಹೊಡೆದು ತಮ್ಮ ಮನೆಗೆ ದಾರಿ ಮಾಡಿಕೋಳ್ಳುತ್ತಿದ್ದಾರೆ ಎಂದು ಜೆಡಿಎಸ್ ಪಕ್ಷದ ಮುಖಂಡ ಕರೆಮ್ಮ.ಜಿ.ನಾಯಕ ಆರೋಪಿಸಿದರು.
ಪಟ್ಟಣದ ಅವರ ನಿವಾಸದಲ್ಲಿ ಸುದ್ದಿಗೋಪ್ಠಿ ಉದ್ದೇಶಿ ಸೋಮವಾರ ಮಾತನಾಡಿದರು. ಲೋಕಪಯೋಗಿ ಕಟ್ಟಡ ಹಾಗೂ ಕಾಂಪೌಂಡ್ ಅನ್ನು ಅಕ್ರಮವಾಗಿ ಹೊಡೆದು ಭವ್ಯ ಭಂಗಲೆ ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಆಪಾದಿಸಿದರು.
ಈ ಕುರಿತು ಜಿಲ್ಲಾಧಿಕಾರಿ, ಜಿಪಂ ಸಿಇಒ, ತಹಸೀಲ್ದಾರ್ ಗೆ ಜೆಡಿಎಸ್ ಪಕ್ಷದ ವತಿಯಿಂದ ಮನವಿ ಮುಖಾಂತರ ದೂರು ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ, ಶಾಸಕರು ತಮ್ಮ ಅಧಿಕಾರ ಬಲದಿಂದ ಅಧಿಕಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ದೂರಿದರು.
ಕೂಡಲೇ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಾಗವನ್ನು ಸಂಬಂಧಿಸಿದ ಅಧಿಕಾರಿಗಳು ವಶಪಡಿಸಿಕೊಳ್ಳಬೇಕು. ಇಲ್ಲದೆ ನಿರ್ಲಕ್ಷ್ಯ ವಹಿಸಿದರೆ ಲೋಕಪಯೋಗಿ ಇಲಾಖೆ ಮುಂದೆ ಜೆಡಿಎಸ್ ಪಕ್ಷದಿಂದ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡರಾದ ಮಲ್ಲಣ್ಣ ಸಾಹುಕರ್, ಇಸಾಕ್ ಮೇಸ್ತ್ರಿ, ರಂಗಣ್ಣ, ರಾಮಣ್ಣ ನಾಯಕ ಸೇರಿದಂತೆ ಇತರರಿದ್ದರು.