ಕಾನೂನು ಬಾಹಿರ ಚಟುವಟಿಕೆ ಮಟ್ಟ ಹಾಕಲು ಕಠಿಣ ಕ್ರಮ

ಇಂಡಿ :ಡಿ.30:ತಾಲೂಕಿನಾಧ್ಯಂತ ಅಕ್ರಮ,ಕಾನೂನು ಬಾಹಿರ ಚಟುವಟಿಕೆಗಳನ್ನು ಮಟ್ಟಹಾಕಲು ಕಠಿಣ ಕ್ರಮ ಕೈಗೊಳ್ಳಲಾಗಿದೆ.ರೌಡಿಗಳ ಅಟ್ಟಡಿಗಿಸಲಾಗಿದೆ.ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದವರು ಯಾರೇ ಆಗಿದ್ದರು ಅಂತವರ ಮೇಲೆ ನಿರ್ದಾಕ್ಷಣ ಕ್ರಮ ಕೈಗೊಳ್ಳಲಾಗುತ್ತದೆ.ಅಪರಾಧಗಳನ್ನು ನಿಯಂತ್ರಿಸಲು ಪೆÇಲೀಸ್ ಇಲಾಖೆಯೊಂದಿಗೆ ಸಾರ್ವಜನಿಕರು ಕೈಜೊಡಿಸಬೇಕು ಎಂದು ಸಿಪಿಐ ರಾಜಶೇಖರ ಬಡದೇಸಾರ ಹೇಳಿದರು.

ಅವರು ಮಂಗಳವಾರ ಸುದ್ದಿಗಾರರಗೊಂದಿಗೆ ಮಾತನಾಡಿದರು.ಸಮಾಜದಲ್ಲಿ ಶಾಂತಿಯನ್ನು ಕದಡುತ್ತಿರುವ ಹಾಗೂ ಯುವ ಜನಾಂಗಕ್ಕೆ ಅಪರಾ„ಕ ಪ್ರಕರಣದಲ್ಲಿ ಭಾಗಿಮಾಡುತ್ತಿರುವ ಇಬ್ಬರನ್ನು ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.ರಸ್ತೆಯಲ್ಲಿ ರಾಬರಿ,ಅಪಘಾತ ಪ್ರಕರಣಗಳನ್ನು ಶೀಘ್ರ ಪತ್ತೆಹೆಚ್ಚಲು ಸಿಂದಗಿ,ತಾಂಬಾ,ವಿಜಯಪು ಸೇರಿದಂತೆ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಪೆÇಲೀಸ್ ಕಣ್ಗಾವಲು ಹೆಚ್ಚಿಸಲಾಗಿದೆ.

ಇಂಡಿಯಿಂದ ವಿಜಯಪುರದವರೆಗೆ ಅಂದರೆ ಸುಮಾರು 60 ಕಿಮೀ,ಇಂಡಿಯಿಂದ ಆಲಮೇಲ ವರೆಗೆ ಸುಮಾರು 40 ಕಿಮೀ,ಇಂಡಿಯಿಂದ ದೇವರಹಿಪ್ಪರಗಿ ವರೆಗೆ ಸುಮಾರು 60 ಕಿಮೀ ವರೆಗೆ ರಸ್ತೆಯಲ್ಲಿ ಎನಾದರೂ ಹೆಚ್ಚುಕಡಿಮೆಯಾದರೆ ಶೀಘ್ರ ನಿಗಾ ಇಡಲು ಅಷ್ಟು ದೂರದವರೆಗೆ ಯಾವುದೆ ಪೆÇಲೀಸ್ ಸಿಬ್ಬಂದಿ ಕಾಣುವುದಿಲ್ಲ.ಇದನ್ನು ಅರಿತು ಇಂಡಿಯಿಂದ ಆಲಮೇಲ ಮಧ್ಯದ ನಾದ ಕೆಡಿ,ಇಂಡಿ ವಿಜಯಪುರ ಮಧ್ಯದ ಅಥರ್ಗಾ,ಇಂಡಿ ದೇವರಹಿಪ್ಪರಗಿ ಮಾರ್ಗ ಮಧ್ಯದ ತಾಂಬಾ ಗ್ರಾಮದಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು,ಪ್ರತಿನಿತ್ಯ ಇಬ್ಬರು ರಾತ್ರಿ ಪಾಳೆಯದಲ್ಲಿ ಪೆÇಲೀಸ್‍ರನ್ನು ನಿಯೋಜಿಸಲಾಗಿದೆ.ಇದರಿಂದ ಅಪರಾ„ಕ ಪ್ರಕರಣ,ಅಪಘಾತ ಪ್ರಕರಣಗಳನ್ನು ಶೀಘ್ರ ಪತ್ತೆಹಚ್ಚಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಇಂಡಿ ಪಟ್ಟಣದ ಸ್ಟೇಷನ್,ವಿಜಯಪುರ,ಸಿಂದಗಿ ರಸ್ತೆಗಳನ್ನು ಸಂದಿಸುವ ಪ್ರಮುಖ ಬಸವೇಶ್ವರ ವೃತ್ತದಲ್ಲಿ ಪೆÇಲೀಸ್ ಸಿಬ್ಬಂದಿ ಅಲ್ಲಲ್ಲಿ ಕುಳಿತು,ನಿಂತು ಟ್ರಾಫೀಕ್ ಕಂಟ್ರೋಲ್ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೃತ್ತಕ್ಕೆ ಒಂದು ಮೆರಗು ತರಬೇಕು. ಪೆÇಲೀಸ್ ಸಿಬ್ಬಂದಿಗೆ ಅನುಕೂಲವಾಗಬೇಕು.ಸಂಚಾರ ನಿಯಂತ್ರಣಕ್ಕಾಗಿ ಒಂದು ಪೆÇಲೀಸ್ ಚೌಕಿ ಆರಂಭಿಸಬೇಕು ತಿಳಿದು ಪೆÇಲೀಸ್ ಚೌಕಿ ಆರಂಭಿಸಲಾಗಿದೆ.ಇದರಿಂದ ಪೆÇಲೀಸ್ ಸಿಬ್ಬಂದಿಗೂ ಅನುಕೂಲವಾಗಿದೆ. ಅಲ್ಲದೆ ಸಂಚಾರ ನಿಯಂತ್ರಿಸಲು ಸರಳವಾಗಿದೆ,ಟ್ರಾಫೀಕ್ ಪೆÇಲೀಸರು ಒಂದೇಡೆ ನಿಲ್ಲಲು ಅನುಕೂಲವಾಗಿದೆ ಎಂದು ಹೇಳಿದರು.

ಸರ್ಕಾರಿ ನೌಕರಿಯಲ್ಲಿ ಎಷ್ಟು ದಿವಸ ಕರ್ತವ್ಯ ನಿರ್ವಹಿಸುವುದು ಮುಖ್ಯವಲ್ಲ. ಕರ್ತವ್ಯದಲ್ಲಿ ಇರುಷ್ಟು ದಿನ ಕಾನೂನು ಪಾಲನೆ ಮಾಡುವುದರ ಮೂಲಕ,ಸಮಾಜದಲ್ಲಿ ಶಾಂತತೆ ಕಾಪಾಡುವುದು,ಸಾರ್ವಜನಿಕರಿಗೆ ನ್ಯಾಯ ಒದಗಿಸಿಕೊಡುವ ಕೆಲಸ ಮಾಡಿದರೆ ಅದುವೇ ಪುಣ್ಯಕ್ಕೆ ಹಾದಿ ಮಾಡುಕೊಡುತ್ತದೆ ಎಂದು ಹೇಳಿದರು.ತಾಲೂಕಿನಾಧ್ಯಂತ ಯಾವುದೇ ಗ್ರಾಮದಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ನಡೆದರೆ ಕೂಡಲೆ ನನ್ನ ಗಮನಕ್ಕೆ ತಂದರೆ ಅವುಗಳನ್ನು ಮಟ್ಟಹಾಕಲು ಕೂಡಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.