ಕಾನೂನು ಬಾಹಿರವಾಗಿ ನಡೆಯುತ್ತಿವೆ ಕೋಳಿ ಫಾರ್ಮ್…. ಅಧಿಕಾರಿಗಳ ಜಾಣ ಕುರುಡು….ಸಿದ್ದಲಿಂಗಯ್ಯ. ಹಿರೇಮಠ

ಕೊಪ್ಪಳ:ಡಿ.27-ಬೂದಗುಂಪ ನಡುವಿನ ಅಂತರದಲ್ಲಿ ಹಾಗೂ ಗಿಣಿಗೇರ ಬೈ ಪಾಸ್ ಕೊಪ್ಪಳಕ್ಕೆ ಹೋಗುವ ಎಡ ಮತ್ತು ಬಲ ರಸ್ತೆಯಲ್ಲಿ ಕೋಳಿ ಫಾರ್ಮ್ ಇದ್ದು ಜನರಿಗೆ ಕೋಳಿ ಫಾರ್ಮ್ ವಾಸನೆ, ಹಾಗೂ ನೊಣಗಳು, ಸೊಳ್ಳೆಗಳಿಂದ ರೋಗರುಜಿನಗಳು ಹರಡಿಕೊಳ್ಳು ವ ಭೀತಿಯಲ್ಲಿ ಜನಗಳು ಬದುಕುತ್ತಿದ್ದಾರೆ. ಈ ವಿಷಯದ ಬಗ್ಗೆ ಈಗಾಗಲೇ ಸಂಘಟನೆಗಳು ಚರ್ಚಿಸಿದ್ದು ಈಗಾಗಲೇ ಸ್ಥಳಾಂತರಿಸಲು ಮನವಿ ಮಾಡಿದರು ಹಲವು ಬಾರಿ ಈ ಕೋಳಿ ಫಾರ್ಮ್ ಅಕ್ರಮಗಳಿಂದ ಕಾನೂನು ಬಾಹಿರವಾಗಿ ಬಾಲ್ಯ ಮಕ್ಕಳಿಂದ ಕೆಲಸ ಮಾಡಿಸಿ ಕೊಳ್ಳುತ್ತಿರುವದು ಕಂಡುಬಂದಿದ್ದು ಅತಿ ಕಡಿಮೆ ಹಣನೀಡಿ ದುಡಿಸಿಕೊಳ್ಳುತ್ತಿದ್ದು ಇವರಿಗೆ ಕೋವಿಡ್19 ಇದ್ದರು, ಸಾಮಾಜಿಕ ಅಂತರ ಹಾಗೂ ಮಾಸ್ಕ್,ಸ್ಯಾನಿಟೈಜ್, ಬಳಸದೇ, ಇಂತಹ ಕೋವಿಡ್ ಸಂದರ್ಭ ದಲ್ಲೂ ಅಕ್ರಮವಾಗಿ ಕಾನೂನು ಬಾಹಿರವಾಗಿ ಕೋಳಿ ಫಾರ್ಮ್ ನಡೆಸುತ್ತಿದ್ದದ್ದು ಕಂಡುಬಂದಿದೆ, ತಕ್ಷಣವೇ ಈ ಕೋಳಿ ಫಾರ್ಮ್ಗಳ ಮೇಲೆ ಕ್ರಮ ಕೈಗೊಳ್ಳಿ ಎಂದು ಕನ್ನಡಪರ ಸಂಘಟನೆಗಳ ಆಗ್ರಹವಾಗಿದೆ .ಒಂದೊಮ್ಮೆ ನಿಗದಿತ ಕಾಲಾವಕಾಶದಲ್ಲಿ ಕ್ರಮಕ್ಕೆ ಮುಂದಾಗದಿದ್ದರೆ ಸಂಬಂಧಿಸಿದ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಲಾಗುವದು ಎಂದು ಕನ್ನಡಪರ ಸಂಘಟನೆಯ ಅಧ್ಯಕ್ಷರು ಹಾಗೂ ಸ್ಥಳೀಯರು ಆಗ್ರಹಿಸಿದ್ದಾರೆ.