ಕಾನೂನು ತಕ್ಕಡಿಯಲ್ಲಿ ಕವಿತೆಗಳ ಮೆರವಣಿಗೆ : ಸೈ ಜಾಹೀರ್

ಕಲಬುರಗಿ:ಮೇ.4:ಕಾನೂನು ಕ್ರಿಯಾತ್ಮಕ ವೇದಿಕೆಯ ನೇತೃತ್ವದಲ್ಲಿ ನಡೆದ ಬಹುಭಾಷಾ ಕವಿಗೋಷ್ಠಿಯಲ್ಲಿನ ಕವಿತೆಗಳು ಕೇಳಿದಾಗ ಕಾನೂನು ತಕ್ಕಡಿಯಲ್ಲಿ ಕವಿತೆಗಳ ಮೆರವಣೆಗೆ ಆದಂತೆ ಭಾವತುಂಬಿದವು ಎಂದು ಹಿರಿಯ ಅಂತರಾಷ್ಟ್ರೀಯ ಉರ್ದು ಸಾಹಿತಿ ,ಮುಶಾಯರಗಳ ಜನಕ ಸೈಯದ್ ಜಾಹೀರ ಆಹ್ಮದ್ ಫನ ಶಿವಮೊಗ್ಗ ಅವರು ಹೇಳಿದರು.

ಅವರು ಭೃಂಗಿಮಠ ಕ್ರಿಯಾತ್ಮಕ ವೇದಿಕೆ ,ಭೃಂಗಿಮಠ ಫೌಂಡೇಷನ್ ,ದಂಡೋತಿಯ ಭೃಂಗಿಮಠದಲ್ಲಿ ಪೂಜ್ಯ ಕಾಯಕಯೋಗಿ ಗದಿಗಯ್ಯ ಮಹಾ ಸ್ವಾಮಿಗಳು ಭೃಂಗಿಮಠ ಅವರ 16 ನೇ ಪುಣ್ಯಾರಾಧನೆ ನಿಮಿತ್ಯ ಹಮ್ಮಿಕೊಂಡಿದ್ದ ಬಹುಭಾಷಾ ಕವಿಗೋಷ್ಠಿಯಲ್ಲಿ ಮತನಾಡಿ ಕಲ್ಯಾಣ ಕರ್ನಾಟಕದ ಜನರು ಇಷ್ಟು ಬಿಸಿಲಲ್ಲಿ ಇದ್ದರೂ ಸಮಾಜದಲ್ಲಿ ಶಾಂತಿ ಸ್ಥಾಪನೆ ಇತಿಹಾಸ ಕಾಲದಿಂದಲೂ ಮಾಡುತ್ತಾ ಬಂದಿದ್ದಾರೆ, ಕಾನೂನು ವೇದಿಕೆಯಿಂದ ನಡೆಯುತ್ತಿರುವ ಈ ಬಹುಭಾಷಾ ಕವಿಗೋಷ್ಠಿ ವಿನೂತನ ವಿಶಿಷ್ಟವಾಗಿದೆ, ಇದು ಕಾನೂನು ತಕ್ಕಡಿಯಲ್ಲಿ ಕವಿತೆಗಳ ಮೆರವಣಿಗೆ ಆದಂತಾಗಿದೆ.ಕವಿತೆಗಳು ಕಾನೂನು ತಕ್ಕಡಿಯಲ್ಲಿ ತೂಗಿಸಿ ಜನರ ಹೃದಯಂಗಳಕ್ಕೆ ತಲುಪಿಸಿದ ಕೀರ್ತಿ ಕಲ್ಯಾಣ ಕರ್ನಾಟಕಕ್ಕೆ ಸಲ್ಲುತ್ತದೆ ಅದರಲ್ಲೂ ಭೃಂಗಿಮಠಕ್ಕೆ ಸಲ್ಲುತ್ತದೆ ಇಂತಹ ವಿಚಾರಗಳು ಸಮಾಜಕ್ಕೆ ಪೂರಕವಾಗುತ್ತವೆ ಎಂದರು.

ಕುರನಳ್ಳಿಯ ಪೂಜ್ಯನೀಯ ಕಾವೇರಿಮಾತೆ ಅವರು ಮಾತನಾಡಿ ಇತಿಹಾಸ ಪುಟಗಳನ್ನು ತೆಗೆದು ನೋಡಿದಾಗ ಭಾಷೆ,ಉತ್ತಮ ಸಂಸ್ಜಾರ, ಉಳಿಸಿ ಬೆಳೆಸಿಕೊಂಡು ಬಂದ್ದದ್ದು ಮಠ ಮಾನ್ಯಗಳು ಎಂಬುವುದು ಕಂಡು ಬರುತ್ತದೆ, ಸಮಾಜಕ್ಕೆ ಹಿತಬಯಸುವ ಸಂದೇಶಗಳನ್ನು ಬಹುಭಾಷಾ ಕವಿತೆಗ ಳ ಮೂಲಕ ಸಾರುವ ಕಾರ್ಯ ಇಂದಿನ ದಿನಮಾನಗಳಲ್ಲಿ ಅಗತ್ಯವಾಗಿದೆ , ಚಿತ್ತಾಪುರ ತಾಲೂಕಿನ ದಂಡೋತಿ ಗ್ರಾಮ ಇತಿಹಾಸಿಕ ಗ್ರಾಮವಾಗಿದೆ ,ಈ ಗ್ರಾಮ ರಾಷ್ಟ್ರಕೂಟರ ಸೈನ್ಯ ನೆಲೆಸುವ ತಾಣವಾಗಿತ್ತು ,ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಈ ಊರಲ್ಲಿ ಜೈನ ಬಸದಿ ಇದೆ ಅಲ್ಲಿಂದ ಮಳಖೇಡಕ್ಕೆ ಕುದುರೆ ಓಡಲು ಕಲ್ಲಿಂದ ನಿರ್ಮಿಸಿದ್ದ ರಸ್ಥೆಗಳು ಇವೆ. ಇತಿಹಾಸ ಕಾರರು ಸಂಶೋಧಕರು ಈ ಗ್ರಮದ ಮೇಲೆ ಬೆಳಕು ಚಲ್ಲಬೇಕಿದೆ , ಪುರಾತನ ಗ್ರಾಮವಾದ ದಂಡೋತಿ ಗ್ರಾಮದ ಮೇಲೆ ಪರಕೀಯರು ಎಷ್ಟೇ ಆಕ್ರಮಣ ಮಾಡಿದರೂ ಈ ಗ್ರಾಮ ತನ್ಮಉತ್ತಮ ಸಂಸ್ಕಾರ ಬಿಟ್ಟಿಲ್ಲ, ಇಲ್ಲಿ ಪೂಜ್ಯನೀಯರಾದ ಶ್ರೀ ತೀರ್ಥಪ್ಪ ,ಅರ್ಜುನಪ್ಪ, ಪೂಜ್ಯನೀಯ ಗದಿಗಯ್ಯ ಸ್ಜಾಮೀಜೀ ಅಂತಹ ಪುಣ್ಯಾತ್ಮರು ಜನಿಸಿ ಸಮಾಜಕ್ಕೆ ಅತ್ಯುತ್ತಮ ಕೊಡುಗೆ ನೀಡಿ ಹೋಗಿದ್ದು ಸ್ಮರಣೀಯವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಪೂಜ್ಯ ಸೋಮಶೇಖರ ಶಿವಾಚಾರ್ಯರು ಆಶಿರ್ವಚನ ನೀಡಿ ಮಕ್ಕಳು ಹುಟ್ಟಿದರೆ ಅವರು ತಮ್ಮೂರು,ತಮ್ಮತಂದೆ ತಾಯಿ,ಗುರು, ಹಾಗೂ ದೇಶದ ಕೀರ್ತಿ ತರುವಂತಹವರಾಗಬೇಕು,ಸಮಾಜ ಬೆಳಗುವಂತಹವರಾಗಬೇಕು ,ದಂಡೋತಿಯ ಭೃಂಗಿಮಠ ಕಲ್ಯಾಣ ಕರ್ನಾಟಕದ ಕೀರ್ತೀ ವಿಶ್ವದಾದ್ಯಂತ ಹರಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ, ಆಧುನಿಕತೆಯ ಭರದಲ್ಲಿ ಗ್ರಾಮಗಳ ಬದಲಾಗಿ ನಗರ ,ಪಟ್ಟಣಗಳಲ್ಲಿ ಕಾರ್ಯಕ್ರಮ ಮಾಡುತ್ತಿರುವ ಇಂದಿನ ಸಮಾಜದ ನಡುವೆ ದಂಡೋತಿ ಗ್ರಾಮದಲ್ಲಿ ಸಾಹಿತ್ಯಿಕ,ಸಾಂಸ್ಖೃತಿಕ ,ಭಾವೈಕ್ಯತೆಯ ಕಾರ್ಯಕ್ರಮಗಳು ನಡೆಯುತ್ತಾ ಬರುತ್ತಿರುವುದು ಸಂತಸದ ಸಂಗತಿ ಎಂದ ಪೂಜ್ಯರು ಹಸು ಮೇವು ತಿಂದರೂ ಹಾಲು ಕೊಡುತ್ತದೆ ಆದರೆ ಈ ಮಾನವ ಏನು ಮಾಡುತ್ತಿದ್ದಾನೆ , ಈ ಬಗ್ಗೆ ಪ್ರತಿಯೊಬ್ಬರೂ ವಿಚಾರ ಮಾಡಬೇಕಿದೆ ,ಸದಾ ಸಮಾಜಕ್ಕೆ ಪೂರಕವಾಗುವ ವಾತವರಣ ಸೃಷ್ಠಿಸುತ್ತಲೇ ಇರಬೇಕು ಆ ಮೂಲಕ ಸಮಾಜದ ಸವಾರ್ಂಗಿಣ ಅಭಿವೃದ್ದಿಯಾಗಲಿ ಎಂದು ಅವರು ಆಶಿರ್ವಚನ ನೀಡಿದರು.
ರಾಚಯ್ಯ ಸ್ವಾಮಿ ಮಠಪತಿ, ಎಸ್ .ಬಿ.ಪಟೀಲ ಬಟಗೇರಾ, ಮುಂತಾದವರು ಕವಿತೆಗಳಿಗೆ ರಾಗ ಸಂಯೋಜಿಸಿ ಹಾಡಿ ಮೆರಗು ತಂದರು. ಡಾ : ಚಂದು ಲಮಬು ಜಾಧವ್ ,
ರೇವಣಸಿದ್ದಯ್ಯ ಬೃಂಗಿಮಠ (ಕನ್ನಡ), ಸೈಯ್ಯದ್ ಜಾಹೀರ ಆಹ್ಮದ ಫನ (ಉರ್ದು) ಮ.ಗ.ಭೃಂಗಿಮಠ (ಹಿಂದಿ) ಚೈತ್ರ ಬಟಗೇರ ಇಂಗ್ಲೀಷ,ಬಸಲಿಂಗಮ್ಮ ಮಠ (ತೆಲಗು) ಮುಂತಾದವರು ಕವಿತೆ ವಾಚಿನೆ ಮಾಡಿದರು. ಬಾಲಯೋಗಿನಿ ಜೈಯಶ್ರೀ ಮಾತಾ ವೀರಯ್ಯ ಸ್ವಾಮಿ ಗುರುವಿನ , ಮುಂತದಾವರು ಪಾಲ್ಗೊಂಡಿದ್ದರು, ರಾಜು ಹಿರೇಮಠ ನಿರೂಪಿಸಿದರು, ಉಪನ್ಯಾಸಕಿ ಪವಿತ್ರ ವಂದಿಸಿದರು.ಗುರುಲಿಂಗಪ್ಪ ಯರಗಲ್,ಚನ್ನಪ್ಪ ಯರಗಲ್, ಡಾ: ಜಯಶ್ರೀ ಜಾಧವ ,ಜೇವಣಪ್ಪ ರೋಜದ್, ಮಲ್ಲಿಕಾರ್ಜುನ ಶಹಬಾದಕರ್,ನಾರಾಯಣ ಹಡಪದ,ಸಿದ್ದು ಕೊಂಚೂರ, ಮುನ್ನೆಪ್ಪ ದಾಯಿ,ಶಿವಲಿಂಗಪ್ಪ ತೆಲಗಾಣಿ,ಶಿಕರೆಪ್ಪ ತಿಮನಾಯಕ,ರವಿಕಾಳಗಿ ,ರಾಚಯ್ಯ ಸ್ವಾಮಿ ಮಠಪತಿ, ಮುಂತಾದವರು ಪಾಲ್ಗೊಂಡಿದ್ದರು.
ಅಂತರಾಷ್ಟ್ರೀಯ ಉರ್ದು ಕವಿ ಫನ ,ಹಾಗೂ ಬಿ.ಹೆಚ್ ನಿರಗುಡಿ ಅವರನ್ನು ವೇದಿಕೆಯ ಮೇಲೆ ಸನ್ಮಾನಿಸಲಾಯಿತು.