ಕಾನೂನು ಕ್ರಮಕ್ಕೆ ಆಗ್ರಹ

ಬಾದಾಮಿ,ಜ17: ಸಂಸದ ಅನಂತಕುಮಾರ ಹೆಗಡೆಯವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಏಕವಚನ ಪದ ಬಳಕೆ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿರುವುದರಿಂದ ಅವರ ವಿರುದ್ಧ ಪ್ರಕರಣ ದಾಖಲಿಸಿ, ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ತಾಲೂಕಾ ಕಾಂಗ್ರೆಸ್ ಪಕ್ಷದ ವತಿಯಿಂದ ಅಧ್ಯಕ್ಷ ಹನಮಂತ ಯಕ್ಕಪ್ಪನ್ನವರ ನೇತೃತ್ವದಲ್ಲಿ ಸಿಪಿಐ ಡಿ.ಡಿ.ಧೂಳಖೇಡ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿ.ಪಂ.ಉಪಾಧ್ಯಕ್ಷ ಪಿ.ಆರ್.ಗೌಡರ, ಪುರಸಭೆ ಸದಸ್ಯ ರಾಜಮಹ್ಮದ ಬಾಗವಾನ, ಎಂ.ಡಿ.ಯಲಿಗಾರ, ನಾಗಪ್ಪ ಅಡಪಟ್ಟಿ, ಹೊಳಬಸು ಶೆಟ್ಟರ, ರೇವಣಸಿದ್ದಪ್ಪ ನೋಟಗಾರ, ಬಿ.ಎಚ್.ಕಟ್ಟೇಕಾರ, ಕರಿಗೌಡ ಮುಷ್ಟಿಗೇರಿ, ಎಸ್.ಎಸ್.ಪೂಜಾರ, ಮುತ್ತಪ್ಪ ಕೆ, ಶಿವು ಮಣ್ಣೂರ, ಎಂ.ಬಿ.ಹಂಗರಗಿ, ಶಶಿಕಾಂತ ಉದಗಟ್ಟಿ, ವೆಂಕಣ್ಣ ಹೊರಕೇರಿ, ಹನಮಂತ ನರಗುಂದ, ಶಿವಾನಂದ ದ್ಯಾವನ್ನವರ, ಸಿದ್ದು ಗೌಡರ, ರಂಗು ಗೌಡರ,ಶೇಖರ ಚಿಂತಾಕಲ್, ಸೇರಿದಂತೆ ಮುಖಂಡರು ಹಾಜರಿದ್ದರು.