ಕಾನೂನು ಕಾರ್ಯ ಗಾರ ಸದುಪಯೋಗ ನ್ಯಾ ಜಕಾತಿ

ಸಿಂಧನೂರು,ಜೂ.೨೪- ನ್ಯಾಯ ವಾವಾದಿಗಳು ಹಿರಿಯ ವಕೀಲರ ಸಲಹೆ ಹಾಗೂ ಮಾರ್ಗದರ್ಶನ ಪಡೆದುಕೊಂಡು ನಿರಂತರ ಅಧ್ಯಯನ ಮಾಡುವ ಮೂಲಕ ಹೆಸರು ವಾಸಿ ವಕೀಲರಾಗಬೇಕು ಎಂದು ೩ ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ,ಬಿ, ಜಕಾತಿ ಹೇಳಿದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು ಹಾಗೂ ತಾಲುಕಾ ನ್ಯಾಯಾವಾದಿಗಳ ಸಂಘದ ಸಹಯೋಗ ದೊಂದಿಗೆ ನಗರದ ನ್ಯಾಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು ವಕೀಲರಿಗೆ ತರಗತಿ ಕಾರ್ಯಾಗಾರ ಮಾಡುತ್ತಿದ್ದು ಉತ್ತಮ ಬೆಳವಣೆಗೆ ಎಲ್ಲ ವಕೀಲರು ಕಾನೂನು ಕಾರ್ಯಾಗಾರದಲ್ಲಿ ಪಾಲ್ಗೊಂಡು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ವಕೀಲರು ಕೋರ್ಟ ಹಾಕಿಕೊಂಡು ಕೋರ್ಟಿಗೆ ಬಂದರೆ ಸಾಲದು ನ್ಯಾಯಾಲಯದ ಗ್ರಂಥಾಲಯದಲ್ಲಿರುವ ಪುಸ್ತಕಗಳನ್ನು ನಿರಂತರವಾಗಿ ಅಭ್ಯಾಸ ಮಾಡಬೇಕು ದಿನೆ ದಿನೆ ಕಾನೂನು ಗಳು ಬದಲಾವಣಿಯಾಗುತ್ತೀವೆ ಆವುಗಳ ಬಗ್ಗೆ ತಿಳಿದುಕೊಂಡರೆ ಉತ್ತಮ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಕೆ ಕೋಟೇಶ್ವರ ರಾವ್ ಹೇಳಿದರು.
ವಕೀಲರು ಜ್ಞಾನ ಹೆಚ್ಚಿಸಿಕೊಳ್ಳಲು ನಾನು ೨೫ ಸಾವಿರ, ರೂಪಾಯಿ ಗಳ ಹಣ ಸಹಾಯ ಮಾಡುವೆ ಆ ಹಣದಿಂದ ಉತ್ತಮ ಕಾನೂನಿನ ಪುಸ್ತಕಗಳನ್ನು ಖರೀದಿಸಿ ನಿಮ್ಮ ನ್ಯಾಯಾಲಯದ ಗ್ರಂಥಾಲಯದಲ್ಲಿ ಇಟ್ಟು ಎಲ್ಲರು ಅಭ್ಯಾಸ ಮಾಡುವ ಮೂಲಕ ಪ್ರಸಿದ್ಧ ವಕೀಲರಾಗಬೇಕು ಎಂದು ಅವರು ಮನವಿ ಮಾಡಿಕೊಂಡರು
ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಎಸ್ ಎಚ್ ಆಸೀಪ್ ಅಲಿ ಸೇರಿದಂತೆ ಇತರರು ಕಾನೂನು ಕಾರ್ಯ ಗಾರ ಸದುಪಯೋಗದ ಬಗ್ಗೆ ಮಾತನಾಡಿದರು ಕಾನೂನು ಕಾರ್ಯ ಗಾರದಲ್ಲಿ ಹಿರಿಯ ಹಾಗೂ ಕಿರಿಯ ವಕೀಲರು ಬಾಗವಸಿದ್ದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಕೋಟೆಪ್ಪ ಕಾಂಬಳೆ,೨ ನೇ ಅಪರ ಸಿವಿಲ್ ನ್ಯಾಯಾಧೀಶರಾದ ಆಚಪ್ಪ ದೊಡ್ಡ ಬಸವರಾಜ, ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಮಿಟ್ಟಲ ಕೋಡ, ಜಿಲ್ಲಾ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಮಲ್ಲಿಕಾರ್ಜುನ, ವಕೀಲರ ಸಂಘದ ಕಾರ್ಯ ದರ್ಶಿಯಾದ ವೀರೇಶ ಚಿಂಚಿ,ಖಜಾಂಚಿಯಾದ ವೀರಭದ್ರ ಗೌಡ ಸೇರಿದಂತೆ ಇತರರ ವೇದಿಕೆಯ ಮೇಲೆ ಉಪಸ್ತರಿದ್ದರು ವಕೀಲರ ಸಂಘದ ಅಧ್ಯಕ್ಷ ಬೀಮನಗೌಡ ವಕೀಲರು. ಸಭೆಯ ಅಧ್ಯಕ್ಷತೆ ವಹಿಸಿದ್ದರು.