ಕಾನೂನು ಉಲ್ಲಂಘಿಸುವವರ ವಿರುದ್ದ ಕ್ರಮ ಎಚ್ಚರಿಕೆ

(ಸಂಜೆವಾಣಿ ವಾರ್ತೆ)
ಇಂಡಿ :ನ.23:ಸಿಂದಗಿ,ಆಲಮೇಲ,ಚಡಚಣ, ಇಂಡಿ,ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ಮೇಲೆ ಪೆÇಲೀಸ್ ಇಲಾಖೆ ಹದ್ದಿನ ಕಣ್ಣು ಇಟ್ಟಿದ್ದು,ಕೋಲೆ,ಸುಲಿಗೆ,ಸಮಾಜ ಘಾತುಕ ಚಟುವಟಿಕೆಯಲ್ಲಿ ತೊಡಗುವವರ ವಿರುದ್ದ ಪೆÇಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುವಲ್ಲಿ ಹಿಂದೆ ಸರಿಯುವುದಿಲ್ಲ ಎಂದು ಡಿವೈಎಸ್ಪಿ ಶ್ರೀಧರ ದೊಡ್ಡಿ ಹೇಳಿದರು.
ಅವರು ಸೋಮವಾರ ಪಟ್ಟಣದ ಡಿವೈಎಸ್ಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಎಟಿಎಂ ಕಳ್ಳತನ,ಕೋಲೆ,ಸುಲಿಗೆಗಳಂತ ಅಪರಾಧ ಪ್ರಕರಣಗಳು ವರದಿಯಾಗುತ್ತಿದ್ದು,ಅಪರಾ„ಕ ಮನೋಭಾವದಿಂದ ದೂರ ಇರಬೇಕು.ಸಮಸ್ಯೆ ಇದ್ದಲ್ಲಿ ಪೆÇಲೀಸ್ ಠಾಣೆಗೆ ದೂರು ನೀಡಬೇಕು.ಕಾನೂನು ಕೈಗೆ ತಗೆದುಕೊಳ್ಳಬಾರದು.ಸಾರ್ವಜನಿಕ ಸೇವೆಗೆ ಇಲಾಖೆ 24 ಗಂಟೆಯು ಸೇವೆಗೆ ಸಿದ್ದವಾಗಿದೆ.ಅಪರಾ„ಕ ಸನ್ನೀವೇಶ ಎದುರಾದಲ್ಲಿ ತಕ್ಷಣ 112 ತುರ್ತು ವಾಹನಕ್ಕೆ ಕರೆ ಮಾಡಿ ತಿಳಿಸಿದರೆ,ಕೂಡಲೆ ವಾಹನ ನಿಮ್ಮ ಮನೆ ಬಾಗಿಲಿಗೆ ಬರುತ್ತದೆ ಎಂದು ಹೇಳಿದರು.ತಾಲೂಕಿನಲ್ಲಿ ಮಟ್ಕಾ,ಜೂಜು ನಡೆಸುವವರು,ಆಡುವವರ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಿಸಲು ಅವಕಾಶ ಇದೆ.ಇದಕ್ಕೆ ಅವಕಾಶ ಮಾಡಿ ಕೊಡಬಾರದು ಎಂದರು.ಟ್ರಾಫೀಕ ಸಮಸ್ಯೆ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು.ಸಿಸಿ ಟಿವಿ,ಸಿಗ್ನಲ್ ದೀಪ ಅಳವಡಿಸಲು ಪುರಸಭೆಗೆ ತಿಳಿಸಲಾಗಿದೆ .ಆಲಮೇಲ ಪ್ರಕರಣದ ಆರೋಪಿಗಳನ್ನು ಶೀಘ್ರ ಬಂ„ಸಲಾಗುವುದು ಎಂದು ಹೇಳಿದರು.