ಕಾನೂನು ಅಸ್ತ್ರ ಆಡಿಯೋ  ಬಿಡುಗಡೆ

ಕಾನೂನಿನ ಬಗ್ಗೆ ಅರಿವಿಲ್ಲದವಿಗೆ ಜಾಗೃತಿ ಮೂಡಿಸುವ ಸಿನಿಮಾ ” ಕಾನೂನು ಅಸ್ತ್ರ”. ನಾಗರಾಜ್ ಎಂ.ಜಿ.ಗೌಡ , ಕಾನೂನು ಅಸ್ತ್ರ ಚಿತ್ರದ ಮೂಲಕ  ಕಾನೂನು ಎಂಬ ಅಸ್ತ್ರ ಬಳಸಿಕೊಂಡು ಹೇಗೆ ಪಾರಾಗಬಹುದು ಎನ್ನುವುದನ್ನು ಹೇಳ‌ಹೊರಟಿದ್ದಾರೆ.

ಪುಟ್ಟೇಗೌಡ ಎನ್.ನಿರ್ಮಾಣ ಮಾಡುವ ಜೊತೆಗೆ ಮುಖ್ಯ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಚಿತ್ರದ ಆಡಿಯೋ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ನಿರ್ದೇಶಕ ನಾಗರಾಜ್ ಮಾತನಾಡಿ ಜನರು  ವಾಹನ ಸಾಲ ಪಡೆದು, ಕಂತು ಕಟ್ಟಲು ಸ್ವಲ್ಪ ತಡವಾದರೂ ಅವರ ಮೇಲೆ ಸೀಜಿಂಗ್ ನವರ ನಡೆಸುವ  ದೌರ್ಜನ್ಯ, ಗೃಹ ಸಾಲ ಪಡೆದವರ ಮೇಲೆ ಬ್ಯಾಂಕ್ ಗಳು ಬೇಕಾಬಿಟ್ಟಿ ಬಡ್ಡಿ ವಿಧಿಸುವಿಕೆ, ಸಾಲ ಪಡೆಯುವಾಗ ಖಾಲಿ ಚೆಕ್ ನೀಡಿದರೆ ಆಗುವ ಪರಿಣಾಮಗಳು, ಗಂಡ ಹೆಂಡತಿ ಡೈವೊರ್ಸ್ ಗೆ ಕಾರಣಗಳು,  ನಿರಪರಾಧಿಯ ಮೇಲೆ  ಕೊಲೆ ಅಪರಾಧ ಬಂದಾಗ ಕಾನೂನು ಅಂತಹವರನ್ನು ಹೇಗೆ ಸಂರಕ್ಷಿಸುತ್ತದೆ ಎಂದು ಈ ಚಿತ್ರ ಹೇಳಲಿದೆ ಎಂದು ಹೇಳಿದ್ದಾರೆ.

ಕಾನೂನಿನಲ್ಲಿ ಶ್ರೀಮಂತ, ಬಡವ ಎನ್ನುವ ಬೇಧಭಾವ ಇರುವುದಿಲ್ಲ. ಸಮಾಜದಲ್ಲಿ ನಡೆಯುವ ಅನ್ಯಾಯಗಳಿಂದ ಪಾರಾಗುವುದಕ್ಕೆ ಇರೋದು ಒಂದೇ ಆಯುಧ ಎಂದರೆ ಅದು ’ಕಾನೂನು ಅಸ್ತ್ರ

ಸಕಲೇಶಪುರ, ಚಿಕ್ಕಮಗಳೂರು, ಬೆಂಗಳೂರು, ಕುಶಾಲನಗರ, ಮಡಕೇರಿ ಹಾಗೂ ಹೊರದೇಶಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎನ್ನುವ ಮಾಹಿತಿ ನೀಡಿದ್ದಾರೆ. ವಿನಯ್ ಗೌಡ ಅಛಾಯಾಗ್ರಹಣ, ವಿನಯ್‌ಪಾಂಡವಪುರ ಸಾಹಿತ್ಯದ ನಾಲ್ಕು ಹಾಡುಗಳಿಗೆ ಮಂಜು ಮಹದೇವ್  ಸಂಗೀತವಿದೆ.

ಪುಟ್ಟೇಗೌಡ. ಎನ್, ಜಗದೀಶ್. ಹೆಚ್.ಜಿ. ದೊಡ್ಡಿ, ಬಂಡೆಬಾಬು., ಲಕ್ಷ್ಮಿನಾರಾಯಣ್, ಸೌಮ್ಯರಾಜ್, ಯೋಗೇಶ್‌ಶೆಟ್ಟಿ,, ಬೇಬಿ ಸಾನ್ವಿ ಗೌಡ, ಯೋಗೇಶ್, ಅಂಜನ್,  ಚಂದನ,, ಸೌಂದರ್ಯ, ಗಿರೀಶ್,  ಮಂಜುನಾಥ್ ಹಿರಿಯೂರು, ಸೌಮ್ಯ ರಾಜ್, ಆನಂದ್,  ಮಾನ್ಯ ಗೌಡ,  ಇನ್ನೂ ಮುಂತಾದವರು ಚಿತ್ರದ  ಪ್ರಮುಖ ಪಾತ್ರಗಳಲ್ಲಿ ನಟಿಸುಸಿದ್ದು, ನವೆಂಬರ್ ವೇಳೆಗೆ ಚಿತ್ರಮಂದಿರಕ್ಕೆ ಬರುವ ಸಾಧ್ಯತೆ ಇದೆ.