ಕಾನೂನು ಅರಿವು – ನೆರವು

ಭಾಲ್ಕಿ :ನ.12:ತಾಲೂಕಿನ ಮುರಂಬಿ, ಉಚ್ಚಾ, ವರವಟ್ಟಿ ಗ್ರಾಮದಲ್ಲಿ ಕಾನೂನು ಅರಿವು -ನೆರವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಕೀಲರಾದ ದಯಾನಂದ ಪವಾರ ಮಾತನಾಡಿ ಬಾಲ್ಯ ವಿವಾಹ ನಿಷೇಧ ಕಾಯ್ದೆ ಬಗ್ಗೆ ಮಾಹಿತಿ ನೀಡಿದರು.ಹೆಣ್ಣುಮಕ್ಕಳ ಬಾಲ್ಯ ವಿವಾಹ ಕಾನೂನು ಅಪರಾಧ .ಯಾರೂ ಕೂಡ ಹೆಣ್ಣು ಮಕ್ಕಳ ಮದುವೆ 18 ವರ್ಷಕ್ಕಿಂತ ಮುಂಚೆ ಮದುವೆ ಮಾಡಬಾರದು ಹೆಣ್ಣಿನ ಬದುಕು ಅಂಧಕಾರಕ್ಕೆ ದೂಡಿದಂತೆ ಆಗುವುದು
ಮತ್ತು ಜನನ -ಮರಣ, ವಿಮೆ, ಮಾಹಿತಿ ನೀಡಿ ,ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಿದರೆ ಸಮಸ್ಯೆ ಆಗುವುದಿಲ್ಲ ಎಂದರು.ಶ್ರೀ ದೀಪಕ ಮಾಶಟ್ಟೆ ವಕೀಲರು ಕಾನೂನು ಸೇವಾ ಸಮಿತಿಯಡಿಯಲ್ಲಿ ಬಡವರು ಶ್ರೀಮಂತ ಎನ್ನದೆ ಎಲ್ಲರೂ ಕಾನೂನಿನ ಲಾಭ ಪಡೆದುಕೊಳ್ಳಲು ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗನ್ನಾಥ್ ಪೂಜಾರಿ. ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.