ಕಾನೂನು ಅರಿವು ಎಲ್ಲರಿಗೂ ಅಗತ್ಯ: ನ್ಯಾಯಾಧೀಶರು

(ಸಂಜೆವಾಣಿ ವಾರ್ತೆ)
ಸೇಡಂ: ಅ.29:ಯಾವುದೇ ಒಂದು ವಿಷಯದ ವಾಸ್ತವಾಂಶ ಗೊತ್ತಿಲ್ಲ ಎಂದು ಹೇಳಿದರೆ ಕ್ಷಮೆಯಿದೆ. ಆದರೆ, ನನಗೆ ಕಾನೂನಿನ ಕುರಿತು ಗೊತ್ತಿಲ್ಲ ಎಂದು ಹೇಳಿದರೆ ಯಾರಿಗೂ ಕಾನೂನು ಕ್ಷಮಿಸುವುದಿಲ್ಲ ಎಂದು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕರಣ ಗುಜ್ಜರ್ ಕಾನೂನಿನ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿಯ ಜಸೋದಬಾಯಿ ನಾರಾಯಣದಾಸ ರಘುನಾಥದಾಸ ಲಡ್ಡ ಕಾನೂನು ಕಾಲೇಜು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹುಬ್ಬಳ್ಳಿ ಮತ್ತು ತಾಲೂಕ ಕಾನೂನು ಸೇವಾ ಸಮಿತಿ ನ್ಯಾಯವಾದಿಗಳ ಸಂಘ ಸೇಡಂ ಹಾಗೂ ತಾಲೂಕಿನ ಎಲ್ಲಾ ವಿವಿಧ ಸರಕಾರಿ ಇಲಾಖೆಗಳ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಕಾನೂನು ಅರಿವು-ನೆರವೂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅವರು ಪ್ರತಿಯೊಬ್ಬರಿಗೂ ದೈನಂದಿನ ಜೀವನಕ್ಕೆ ಅನ್ವಯವಾಗುವ ಸಾಮಾನ್ಯ ಕಾನೂನು ಕುರಿತು ಮಾಹಿತಿ, ಅರಿವು ಇರಲೇಬೇಕು. ಕಾನೂನಿನ ಅರಿವು ಇಲ್ಲ ಎಂದು ಸಮಾಜದಲ್ಲಿ ಯಾರೂ ತಮಗೆ ಸಿಗಬೇಕಾದ ಹಕ್ಕು ಮತ್ತು ನ್ಯಾಯದಿಂದ ವಂಚಿತರಾಗಬಾರದು. ಅದಕ್ಕಾಗಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ರತಿಯೊಬ್ಬರಿಗೂ ಕಾನೂನಿನ ಅರಿವು ಮೂಡಿಸಲು ಜನರ ಮನೆ ಬಾಗಿಲಿಗೆ ಹೋಗಿ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ. ಜನರು ಇದನ್ನು ಸದುಪಯೋಗ ಮಾಡಿಕೊಂಡು ಕಾನೂನಿನ ಅರಿವು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಕೆಬಿಬಿಎಸ್ ಎಸ್ ಕಾರ್ಯದರ್ಶಿ ಸದಾನಂದ್ ಬೂದಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ವಿಜಯಕುಮಾರ್ ಜಟ್ಲಾ, ಸಿವಿಲ್ ನ್ಯಾಯಾಧೀಶರು ಸುನೀಲ್ ತಳವಾರ್, ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಸತೀಶ್ ಪಾಟೀಲ್, ಸಹಾಯಕ ಸರ್ಕಾರಿ ಅಭಿಯೋಜಕರು ರಾಜಕುಮಾರ ಸ್ವಾಮಿ, ನ್ಯಾಯವಾದಿಗಳು ಜಗನ್ನಾಥ ತರನಳ್ಳಿ, ಜೆಎನ್ ಆರ್ ಎಲ್ ಕಾಲೇಜಿನ ಪ್ರಾಂಶುಪಾಲರಾದ ಶರಣಗೌಡ ಪಾಟೀಲ್, ಶಿಕ್ಷಕರ ವೃಂದದವರಾದ ಶ್ರೀನಿವಾಸ್ ರೆಡ್ಡಿ, ಬೈರನಾಥ್ ಬಿರಾದರ್, ಬಸವರಾಜ್ ಅಪ್ರಾಳ್, ಕುಮಾರ ಪವಾರ್, ಶ್ರೀಮತಿ ಸುಜಾತ ಕಲಶೆಟ್ಟಿ,