ಕಾನೂನು ಅರಿವು ಅವಶ್ಯ


ಅಣ್ಣಿಗೇರಿ, ನ 19: ತಾಲ್ಲೂಕಿನ ದೂಂದುರ ಗ್ರಾಮದಲ್ಲಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯವಾದಿ ಪ್ರಕಾಶ ಅಂಗಡಿಯವರು ಉದ್ಘಾಟಿಸಿದರು.
ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಪ್ರತಿಯೊಬ್ಬ ಮನುಷ್ಯನಿಗೆ ಕಾನೂನು ಅರಿವು ಬಹಳ ಅವಶ್ಯ. ಹುಟ್ಟಿನಿಂದ ಪ್ರಾರಂಭವಾಗಿ ಮರಣದವರೆಗೆ ಕಾನೂನಿನಡಿಯ ಬದುಕು ನಮ್ಮೆಲ್ಲರದ್ದಾಗಿದೆ. ಆದ್ದರಿಂದ ಹೆಣ್ಣುಮಕ್ಕಳ ರಕ್ಷಣೆ, ವಿದ್ಯಾರ್ಥಿಗಳ ರಕ್ಷಣೆ, ನಾಗರಿಕರ ಸಂರಕ್ಷಣೆಯ ಬಗ್ಗೆ ಹಾಗೂ ವಾಹನಗಳ ಚಲಾವಣೆ ಮಾಡುವಾಗ ಪರವಾನಿಗೆ ಕಡ್ಡಾಯವಾಗಿ ಬೇಕು, ಮತ್ತು ವಿಮಾ ಮಾಡಿಸುವುದು ಕಡ್ಡಾಯ ಹೀಗೆ ಹಲವಾರು ವಿಷಯಗಳ ಬಗ್ಗೆ ಜನರಿಗೆ ತಿಳಿಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಓಲೇಕಾರ ಮತ್ತು ರಾಜು ಪಾಟೀಲ, ಕರಬುಡ್ಡಿ, ಅಸೂಂಡಿ, ಎಸ್ ಡಿ ಎಮ್ ಸಿ ಅದ್ಯಕ್ಷರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.