ಕಾನೂನಿನ್ವಯ ಕ್ರಮ ಬೊಮ್ಮಾಯಿ ಭರವಸೆ

ಬೆಂಗಳೂರು, ಮಾ. ೨೬- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿಗೆ ಸಂಬಂಧಿಸಿದಂತೆ ಯಾರೇ ಬಂದು ದೂರು ನೀಡಿದರೂ ವಿಶೇಷ ತನಿಖಾ ದಳ ಕಾನೂನಿನಂತೆ ಕ್ರಮ ಕೈಗೊಳ್ಳುತ್ತದೆ ಎಂದು ಗೃಹ ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಬಸವರಾಜಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತ ಸ್ವತಃ ಯುವತಿಯೇ ಬರಲಿ ಅಥವಾ ವಕೀಲರೆ ಆಗಲಿ ಯಾರೇ ಬಂದು ಪಿರ್ಯಾದಿ ನೀಡಿದರೂ ಎಸ್‌ಐಟಿಯವರು ಕಾನೂನಿನಂತೆ ಕ್ರಮ ವಹಿಸುವರು ಎಂದರು.
ಸೂಕ್ತ ಭದ್ರತೆ ನೀಡಿದರೆ ದೂರು ನೀಡಲು ಬರುವುದಾಗಿ ಯುವತಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಆ ಯುವತಿಯನ್ನು ಪತ್ತೆ ಮಾಡಿ ಸೂಕ್ತ ಭದ್ರತೆ ಒದಗಿಸಲುಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ. ಯುವತಿ ಹಾಗೂ ಅವರ ಪೋಷಕರಿಗೂ ಭದ್ರತೆ ಒದಗಿಸಲಾಗುವುದು. ಯಾವುದೇ ಆತಂಕ ಬೇಡ ಎಂದರು.