ಕಾನೂನನ್ನು ಗೌರವಿಸುವವರಿಗೆ ನಾವು ಗೌರವಿಸುತ್ತೇವೆ:ಸಿಪಿಐ ತುಳಸಿಗೇರಿ

ತಾಳಿಕೋಟೆ:ಸೆ.10: ಹಬ್ಬ ಹರಿದಿನಗಳು ಜಾತ್ರೆ ಉತ್ಸವಗಳು ಯಾವುದೇ ಒಂದು ಕೋಮಿಗೆ ಸೇರಿದವುಗಳಲ್ಲಾ ಎಲ್ಲರೂ ಒಗ್ಗೂಡಿ ಆಚರಿಸಿಕೊಂಡು ಬರುವಂತಹ ಹಬ್ಬಗಳಾಗಿವೆ ಅವುಗಳಲ್ಲಿ ಗಣೇಶೋತ್ಸವ ಒಂದಾಗಿದೆ ಗಣೇಶ ಉತ್ಸವವವನ್ನು ಭಕ್ತಿಭಾವದೊಂದಿಗೆ ಆಚರಿಸಿಕೊಂಡು ಬರಬೇಕೆಂದು ಮುದ್ದೇಬಿಹಾಳ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ ಅವರು ನುಡಿದರು.

ಶನಿವಾರರಂದು ಬರಲಿರುವ ದಿ.18ರಿಂದ 27ರ ವರೆಗೆ ಜರುಗಲಿರುವ ಗಣೇಶ ಉತ್ಸವ ಕುರಿತು ಹಾಗೂ 28 ರಂದು ಜರುಗಲಿರುವ ಈದ್ ಮೀಲಾದ್ ಹಬ್ಬ ಆಚರಣೆ ಕುರಿತು ಕರೆಯಲಾದ ಶಾಂತಿ ಪಾಲನಾ ಸಭೆಯ ಸದಸ್ಯರನ್ನು ಹಾಗೂ ಗಣೇಶ ಉತ್ಸವ ಮಂಡಳಿಯವರನ್ನು ಅಲ್ಲದೇ ಎಲ್ಲ ಕೋಮಿನವರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ತಾಳಿಕೋಟೆ ಪಟ್ಟಣ ಈ ಹಿಂದೆ ಕೆಲವು ಘಟನೆಗಳಿಂದ ಕೆಂಪು ಚುಕ್ಕೆಯಲ್ಲಿ ಒಳಗೊಂಡಿತ್ತು ಈ ಕಾರಣದಿಂದಲೇ ಈ ಪಟ್ಟಣ ಕುರಿತು ನಾವು ಜಾಗೃತವಹಿಸಬೇಕಾಗಿದೆ ಈಗಾಗಲೇ ಎಲ್ಲರೂ ಶಾಂತಿ ಪ್ರೀಯರಾಗಿದ್ದರೂ ಕೂಡಾ ಇಲಾಖೆಯ ಸಂಬಂದಿತ ಕೆಲವು ಕಾನೂನುಗಳನ್ನು ತಮಗೆ ತಿಳಿಸಿ ಆ ರೀತಿ ನಡೆಯಬೇಕೆಂಬುದರ ಕುರಿತು ಇಂದಿನ ಸಭೆಯಲ್ಲಿ ಉತ್ಸವ ಕಮಿಟಿಯವರಿಗೂ ಸೂಚಿಸುತ್ತೇವೆಂದು ಹೇಳಿದ ಸಿಪಿಐ ತುಳಸಿಗೇರಿ ಅವರು ಗಣೇಶ ಉತ್ಸವದಲ್ಲಿ ಬ್ಯಾಂಜೋ ಇನ್ನಿತರ ಹಚ್ಚುವಂತಹ ವ್ಯವಸ್ಥೆಯಾಗಬಾರದು ಯಾಕೆಂದರೆ ಈ ಹಿಂದಿನಿಂದಲೂ ಈ ಕುರಿತು ಸುಪ್ರೀಮ್ ಕೋರ್ಟ ಆದೇಶ ಮಾಡಿದೆ ಬೆಳಗಾವಿ ಜಿಲ್ಲೆಯಲ್ಲಿಯೂ ಕೂಡಾ ನಾನು ಈ ಹಿಂದೆ ಸೇವೆ ಸಲ್ಲಿಸಿದ್ದರೂ ಅಲ್ಲಿಯೂ ಕೂಡಾ ಆ ವ್ಯವಸ್ಥೆಯನ್ನು ಕಾನೂನಿನನ್ವಯ ನಿಷೇದ ಹೇರಲಾಗಿದ್ದರೂ ಅದಕ್ಕೆ ತಕ್ಕಂತೆ ಇನ್ನೂಳಿದ ಮಾಯ್ಕ್ ಶಬ್ದಗಳು ಯಾವ ಪ್ರಮಾಣದಲ್ಲಿಡಬೇಕೆಂಬುದರ ಕುರಿತು ಅಲ್ಲಿಯ ಜನರಿಗೆ ಸೂಚಿಸಲಾಗಿದೆ ಅದರಂತೆ ತಮಗೂ ಕೂಡಾ ಇಂದು ತಿಳಿಸುತ್ತಿರುವ ನಾವು ಒಟ್ಟಿನಲ್ಲಿ ಶಾಂತತೆಯಿಂದ ಭಕ್ತಿಪೂರ್ವಕವಾಗಿದೆ ವಿಜೃಂಬಣೆಯಿಂದ ಗಣೇಶ ಉತ್ಸವವನ್ನು ಆಚರಿಸಿಕೊಂಡು ಬರಬೇಕೆಂದು ಕೆಲವು ಸಲಹೆ ಸೂಚನೆಗಳನ್ನು ನೀಡಿದರು.

ಇನ್ನೋರ್ವ ಸ್ಥಳೀಯ ಪೊಲೀಸ್ ಠಾಣಾ ಪಿಎಸ್‍ಐ ರಾಮನಗೌಡ ಸಂಕನಾಳ ಅವರು ಮಾತನಾಡಿ ಮೇಲಾಧಿಕಾರಿಗಳಿಂದ ಗಣೇಶ ಉತ್ಸವ ಕುರಿತು ಆಗಮಿಸಲಾದಂತಹ ಕೆಲವು ಸೂಚನೆ ಪಟ್ಟಿಗಳನ್ನು ಓದಿ ತಿಳಿಸಿದರಲ್ಲದೇ ವಿದ್ಯುತ್ ಸಂಪರ್ಕವಾಗಲಿ ಪ್ರತಿಷ್ಠಾಪನಾ ಸ್ಥಳವಾಗಲಿ ಅನ್ಯರಿಗೆ ತೊಂದರೆ ನೀಡುವಂತಹ ವ್ಯವಸ್ಥೆಯಾಗದೇ ವ್ಯವಸ್ಥಿತ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೈದು ಕಾನೂನಿನ ಅನ್ವಯದಂತೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕು ಅದರಂತೆ ಮಾಯ್ಕ್ ಅನುಮತಿ ಇವೇಲ್ಲವನ್ನು ಪಡೆದುಕೊಂಡು ಉತ್ಸವವನ್ನು ಆಚರಿಸಲು ಮುಂದಾಗಿ ಎಂದು ಇನ್ನೂ ಕೆಲವು ಸಲಹೆ ಸೂಚನೆಗಳನ್ನು ಉಪಸ್ಥಿತ ಗಣೇಶ ಉತ್ಸವ ಮಂಡಳಿಯವರಿಗೆ ತಿಳಿಸಿದರು.

ಇನ್ನೋರ್ವ ಉಪಸ್ಥಿತ ಪುರಸಭಾ ಮುಖ್ಯಾಧಿಕಾರಿ ಉದಯಕುಮಾರ ಘಟಕಾಂಬಳೆ ಅವರು ಮಾತನಾಡಿ ಪುರಸಭೆಯಿಂದಲೂ ಈ ಉತ್ಸವಕ್ಕಾಗಿ ಬೇಕಾಗುವಂತಹ ಅನುಮತಿ ಇನ್ನಿತರ ವ್ಯವಸ್ಥೆ ಪುರಸಭೆಯೂ ಮಾಡಿಕೊಡುತ್ತದೆ ಗಣೇಶ ವಿಸರ್ಜನೆ ಸ್ಥಳವನ್ನು ಈ ಹಿಂದೆ ಡೋಣಿ ನಧಿಯಲ್ಲಿ ಮಾಡಿದಂತೆ ಅಲ್ಲಿ ಹೊಂಡದ ವ್ಯವಸ್ಥೆ ಮಾಡಿಕೊಡಲಾಗುವದು ಯಾವುದೇ ವಿಳಂಬತೆ ಇಲ್ಲದೇ ಈ ಒಂದು ಉತ್ಸವ ಕಾರ್ಯದಲ್ಲಿ ಪುರಸಭೆಗೆ ಸಂಬಂದಿಸಿದ ವ್ಯವಸ್ಥೆಯನ್ನು ಮಾಡಿಕೊಡುತ್ತೇವೆಂದು ಹೇಳಿದರು.

ಇನ್ನೋರ್ವ ಕೆಪಿಟಿಸಿಎಲ್ ಅಧಿಕಾರಿ ಅವರು ಮಾತನಾಡಿ ವಿದ್ಯುತ್ ಸಂಪರ್ಕ ಕುರಿತು ವ್ಯವಸ್ಥಿತ ಸ್ಥಳವನ್ನು ಗುರುತಿಸಿಕೊಳ್ಳಬೇಕು ಯಾವುದೇ ತರಹದ ಅಪಘಾತ ಸಂಬವಿಸದಂತೆ ನೋಡಿಕೊಳ್ಳುವ ವ್ಯವಸ್ಥೆಯನ್ನು ಉತ್ಸವ ಸಮಿತಿಯವರು ಮಾಡಿಕೊಳ್ಳಬೇಕು ಆಯಾ ಬಡಾವಣೆಯ ಸಂಬಂದಿಸಿದ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವ ಸಂಘಟಿಕರು ಆಗಮಿಸಿ ವಿದ್ಯುತ್ ಸಂಪರ್ಕ ಕುರಿತು ತಿಳಿಸಿದಲ್ಲಿ ಅದಕ್ಕೆ ಸಂಬಂದಿಸಿದಂತೆ ನೋಡಿ ವಿದ್ಯುತ್ ಸಂಪರ್ಕ ಕಲ್ಪಿಸಿ ಕೊಡಲಾಗುವದಲ್ಲದೇ ಈ ಕುರಿತು ಇಲಾಖೆಯ ವತಿಯಿಂದ ನೀಡಲಾಗುತ್ತಿರುವ ವ್ಯವಸ್ಥೆಯನ್ನು ಮಾಡಿಕೊಡುವದಾಗಿ ಬರವಸೆ ನೀಡಿದರು.

ಸಾರ್ವಜನಿಕ ಗಣೇಶ ಉತ್ಸವ ಮಂಡಳಿಯ ಹಿರಿಯರಾದ ಕಾಶಿನಾಥ ಮುರಾಳ ಹಾಗೂ ಹಿಂದೂ ಮಹಾ ಗಣಪತಿ ಮಹಾ ಮಂಡಳಿಯ ರಾಘವೇಂದ್ರ ವಿಜಾಪೂರ, ಕುಮಾರಗೌಡ ಪಾಟೀಲ, ಅವರು ಮಾತನಾಡಿ ಹಿಂದಿನಿಂದಲೂ ಗಣೇಶ ಉತ್ಸವದಲ್ಲಿ ಯಾರಿಗೂ ಆತಂಕವಾಗದಂತೆ ಹಾಗೂ ಪೊಲೀಸ್ ಇಲಾಖೆ ನೀಡಿರುವ ಕಾನೂನಿನ ಅನ್ವಯದಂತೆ ನಾವು ಸಮಿತಿಯವರು ನಡೆದುಕೊಳ್ಳುತ್ತೇವೆ ತಾವು ತಿಳಿಸಿದಂತೆ ಬ್ಯಾಂಜೋ ಇನ್ನಿತರ ಹೆಚ್ಚಿಗೆ ದ್ವನಿ ಮಾಡುವಂತಹ ದ್ವನಿವರ್ದಕ ಬಳೆಸಬಾರದೆಂಬುದಂತೆ ನಾವು ಏಚ್ಚರವಹಿಸಿಕೊಂಡು ಕಾರ್ಯೋನ್ಮುಖರಾಗುತ್ತೇವೆ ಎಲ್ಲ ಕೋಮಿನವರೊಂದಿಗೆ ಯಾವುದೇ ತರಹದ ಬೇಧಭಾವವಿಲ್ಲದೇ ನಾವೇಲ್ಲರೂ ಒಂದೇ ಎಂಬ ಈ ಹಿಂದಿನಿಂದಲೂ ಸಾಗಿಬಂದಂತೆ ಸಾಗುತ್ತೇವೆ ಪೊಲೀಸ್ ಅಧಿಕಾರಿಗಳ ಹಾಗೂ ಪೊಲೀಸ್ ಇಲಾಖೆಯ ಸಹಕಾರ ನಮ್ಮೇಲ್ಲರ ಮೇಲಿರಲಿ ನಾವೂ ಕೂಡಾ ತಮ್ಮ ಕಾನೂನಿನಂತೆ ಸಹಕರಿಸುತ್ತೇವೆಂದರು.

ಈ ಸಮಯದಲ್ಲಿ ಎ.ಎಂ.ಪಟೇಲ, ಎಂ.ಎಸ್.ಸರಶೆಟ್ಟಿ, ವಿಜಯಸಿಂಗ್ ಹಜೇರಿ, ಶ್ರೀಮತಿ ನೀಲಮ್ಮ ಪಾಟೀಲ, ಡಿ.ವ್ಹಿ.ಪಾಟೀಲ, ಪರಶುರಾಮ ತಂಗಡಗಿ, ಸದ್ದಾಂ ಹೊನ್ನಳ್ಳಿ, ಮಂಜು ಶೆಟ್ಟಿ, ಎಸ್.ಎನ್.ಡಿಸಲೆ, ವಿಠ್ಠಲ ಮೋಹಿತೆ, ನಾಗರಾಜ ಪತ್ತಾರ, ಪ್ರವೀಣ್ ಕಿರಣಗಿ, ಜೈಭೀಮ ಮುತ್ತಗಿ, ನಿಸಾರ ಬೇಪಾರಿ, ಈಶ್ವರ ಹೂಗಾರ, ಅಬುಬಕರ ಲಾಹೋರಿ, ನಬಿರಸೂಲ ಲಾಹೋರಿ, ಇಮಾಮ ಕಾಳಗಿ, ಎಂ.ಎಚ್.ಕೇಂಭಾವಿ, ಇಬ್ರಾಹಿಂ ಮನ್ಸೂರ, ರಾಜು ಪವಾರ, ಶಂಕರ ಚವ್ಹಾಣ, ನೇಮೂ ರಾಠೋಡ, ವಿರೇಶ ಚವ್ಹಾಣ, ಪ್ರಶಾಂತ ಚವ್ಹಾಣ, ಶ್ರೀಧರ ಜಾಧವ, ಪ್ರಭುಗೌಡ ಬಿರಾದಾರ, ನಿಂಗನಗೌಡ ಪಾಟೀಲ, ಬಸವರಾಜ ನವಲೆ, ನಿಂಗಯ್ಯ ಹಿರೇಮಠ, ಕಾಶಿನಾಥ ಅರಳಿಚಂಡಿ, ಮೊದಲಾದವರು ಉಪಸ್ಥಿತರಿದ್ದರು.

ಮಹೇಶ ಚಲವಾದಿ ಸ್ವಾಗತಿಸಿ ನಿರೂಪಿಸಿದರು.