ಕಾನಹೊಸಹಳ್ಳಿ ನಾಡ ಕಚೇರಿಯಲ್ಲಿ ಮಹಾವೀರ ಜಯಂತಿ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಏ.5 :-  ತಾಲೂಕಿನ ಕಾನಹೊಸಹಳ್ಳಿ ನಾಡ ಕಚೇರಿಯಲ್ಲಿ ಭಗವಾನ್ ಮಹಾವೀರ ಜಯಂತಿಯನ್ನು ಮಂಗಳವಾರ ಆಚರಿಸಲಾಯಿತು.
ಮಹಾವೀರರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಕಂದಾಯ ನಿರೀಕ್ಷಕ ಆಲೂರು ತಿಪ್ಪೇಸ್ವಾಮಿ ಮಾತನಾಡಿ, ಭಗವಾನ್ ಮಹಾವೀರರು ಜೈನ ಧರ್ಮದ ಪ್ರಚಾಕರಾಗಿ ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಾನ್ ಸಂತರು. ಅವರು ರಾಜ ವೈಭೋಗ ಮತ್ತು ಸಾಂಸಾರಿಕವನ್ನು ತ್ಯಜಿಸಿ ಸರಳ ಜೀವನಕ್ಕೆ ಮುಂದಾದ ಮಹಾನ್ ತ್ಯಾಗಿಯಾಗಿದ್ದಾರೆ ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಿಗರಾದ ಚನ್ನಬಸಯ್ಯ, ಚೈತ್ರಾ, ಶ್ರೀನಿವಾಸ ಕೊಂಡಿ, ಸಂಪ್ರೀತಾ, ಸಿಬ್ಬಂದಿ ಬೋರಪ್ಪ, ಲೋಕಿಕೆರೆ ಶಾಂತಕುಮಾರ್, ಹನುಮಂತಪ್ಪ ಇದ್ದರು.