ಕಾದಂಬರಿ ಆದಾರಿತ ಮಗ್ಗಿ ಪುಸ್ತಕ

ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳು ಕಡಿಮೆಯಾಗಿವೆ.ಹಾಗೊಂದು ಹೀಗೊಂದು ಸೆಟ್ಟೇರುತ್ತಿದ್ದು ಅದರ ಸಾಲಿಗೆ ಮತ್ತೊಂದು ಸೇರ್ಪಡೆ ” ಮಗ್ಗಿ ಪುಸ್ತಕ”.
ಎಚ್.ಸಿ.ಹರೀಶ್ ಅವರ ಅವನಿ ಕಾದಂಬರಿ ಆಧರಿಸಿ ಚಿತ್ರ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿದೆ. ದಸರಾ ಹಿನ್ನೆಲೆಯಲ್ಲಿ ಚಿತ್ರದ ಫಸ್ಟ್ ಲುಕ್ ನ್ನು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಾಶಯ ತಿಳಿಸಿದ್ದಾರೆ.
ಚಿನ್ನಾಸ್ವಾಮಿ ಯತಿರಾಜ್ ಸ್ನೇಹಿತರ ಜೊತೆಗೂಡಿ ಚಿತ್ರ ನಿರ್ಮಿಸುತ್ತಿದ್ದಾರೆ. ಕಾದಂಬರಿಕಾರ ಎಚ್ ಸಿ ಹರೀಶ್ ಅವರೇ ಮಗ್ಗಿ ಪುಸ್ತಕ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ರಂಜನ್ ಸಜ್ಜು, ಶ್ರೀರಕ್ಷಾ,ಹಿರಿಯ ಕಲಾವಿದರಾದ ಮೈಸೂರು ರಮಾನಂದ, ರಂಗಾಯಣ ರಘು, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ಬಿರಾದಾರ, ಮಿಮಿಕ್ರಿ ಗೋಪಿ, ಚಂದ್ರಪ್ರಭಾ, ವಾಣಿ, ರಾನ್ವಿ ಶೇಖರ್, ಕೃಷ್ಣ ಮಹೇಶ್, ವರದ, ಶ್ರೀನಿವಾಸ್ ಗೌಡ, ಮೂಗು ಸುರೇಶ್ ಸೇರಿದಂತೆ ಹಲವರು ತಾರಾಬಳಗದಲ್ಲಿದ್ದಾರೆ. ಮೈಸೂರು, ಮಂಗಳೂರು, ಎಚ್ ಡಿ ಕೋಟೆ, ನಂಜನಗೂಡು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ.
ನಂದಕುಮಾರ್ ಛಾಯಾಗ್ರಹಣ, ಯಶಸ್ ನಾಚಪ್ಪ ಸಂಗೀತವಿದೆ.. ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷಕ್ಕೆ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.