ಕಾಣಿಯೂರಿನಲ್ಲಿ ಅಂಗಡಿಗಳಿಂದ ಕಳ್ಳತನ

ಕಡಬ, ಎ.೫- ಕಡಬ ತಾಲೂಕಿನ.ಕಾಣಿಯೂರು ಪೇಟಯಲ್ಲಿನ ಮೂರು ಅಂಗಡಿಗಳಿಗೆ ಕಳ್ಳರು ಬೀಗ ಮುರಿದು ಕಳ್ಳತನ ನಡೆಸಿದ ಘಟನೆ ಮೆ ೨ರಂದು ರಾತ್ರಿ ನಡೆದಿದೆ. ಸೋಮವರ ಘಟನೆ ಬೆಳಕಿಗೆ ಬಂದಿದೆ.
ಸೆಲೂನು, ಮತ್ತು ಜ್ಯೂಸ್ ಅಂಗಡಿಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ತಡಕಾಡಿದ್ದಾರೆ. ಅದರೆ ಯಾವೂದೆ ವಸ್ತು, ನಗದು ಅಲ್ಲಿರಲಿಲ್ಲ, ಈ ಅಂಗಡಿಗಳ ಪಕ್ಕದಲ್ಲಿದ್ದ ಚಿಕನ್ ಸೆಂಟರ್ ಗೆ ನುಗ್ಗಿದ ಕಳ್ಳರು ಕೋಳಿಯೊಂದಕ್ಕೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾರೆ. ಕ್ಯಾಸ್ ಕೌಂಟರ್ ನಲ್ಲಿದ್ದ ಅಲ್ಪಮೊತ್ತವನ್ನು ಕದ್ದೊಯ್ಯಿದ್ದಾರೆ. ಇದೇ ಅಂಗಡಿಯಲ್ಲಿ ಮೊಬೈಲ್ ನಂರನ್ನು ಚೀಟಿಯಲ್ಲಿ ಬರೆದಿಟ್ಜು , ಇದು ಕಳ್ಳನ ನಂ ಎಂದು ನಮೂದಿಸಲಾಗಿದೆ. ಸ್ಥಳಕ್ಕೆ ಬೆಳ್ಳಾರೆ ಪೊಲೀಸ್ ಠಾಣೆಯ ಎಸ್ ಐ ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಭೇಟಿ ಪರಿಶೀಲನೆ ನಡೆಸಿದ್ದಾರೆ.