ಕಾಡು ಹಂದಿ ದಾಳಿಗೆ ರೈತ ಬಲಿ

ಕಾಳಗಿ,ಏ.30-ತಾಲ್ಲೂಕಿನ ತೇಗಲತಿಪ್ಪಿ ಗ್ರಾಮದಲ್ಲಿ ಕಾಡು ಹಂದಿ ದಾಳಿಗೆ ರೈತ ಬಲಿಯಾಗಿದ್ದಾನೆ. ಗುರುನಾಥ ಶರಣಪ್ಪ ಮೋತಕಪಳ್ಳಿ ಕಾಡು ಹಂದಿ ದಾಳಿಗೆ ಬಲಿಯಾದವರು.
ನಿನ್ನೆ ಬೆಳಗಿನಜಾವ ತೊಗರಿ ಕೊಯಿಲು ಸುಡಲೆಂದು ಹೊಲಕ್ಕೆ ಹೋಗಿದ್ದಾಗ ಕಾಡು ಹಂದಿ ದಾಳಿ ಮಾಡಿದ್ದು, ಕಣ್ಣು ಕಿತ್ತು ಹೋಗಿ ಎರಡೂ ಕೈಕಾಲುಗಳಿಗೆ ಗಂಭೀರ ಗಾಯವಾಗಿತ್ತು. ಚಿಕಿತ್ಸೆಗೆಂದು ಕಾಳಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗ ಮಧ್ಯದಲ್ಲಿಯೇ ಮೃತಪಟ್ಟಿದ್ದಾರೆ.
ಮೃತ ರೈತನ ಕುಟುಂಬಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ ಆಗ್ರಹಿಸಿದ್ದಾರೆ.