ಕಾಡು ಹಂದಿಗಳ ದಾಳಿ: ಒಂದು ಎಕರೆ ಕಬ್ಬು ಸರ್ವನಾಶ – ಕಂಗಾಲಾದ ರೈತ

ಬೀದರ್:ಜು.24: ಬೀದರ ಜಿಲ್ಲೆಯಲ್ಲಿ ಸತತವಾಗಿ ನಾಲ್ಕು ಐದು ದಿವಸ ದಿಂದ ಜಿಟಿ ಜಿಟಿ ಮಳೆ ಬೀಳುತ್ತಿದ್ದ ರೈತರು ಹೊಲದಲ್ಲಿ ಹಂದಿ ಕಬ್ಬು ಮುರಿದು ಹಾಳು ಮಾಡಿದ ಘಟನೆ ಬೀದರ ಜಿಲ್ಲೆಯಲ್ಲಿ ಹಲವು ರೈತರ ಹೊಲದಲ್ಲಿ ನಡೆದಿದ್ದೆ. ಬೆಳೆದ ಬೆಳೆ ಸಂಪೂರ್ಣ ನೀರಿನಲ್ಲಿ ಮುಳಿಗಿ ಬೆಳೆ ಸರ್ವನಾಶ ಆಗಿದ್ದು.ಜಿಲ್ಲೆಯಲ್ಲಿ ರೈತರು ಬಹಳ ಅಷ್ಟು ಕಷ್ಟ ಅನುಭವಿಸಿದ್ದಾರೆ.

ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಕಂದಗೂಳ ಗ್ರಾಮದ ಅಣ್ಣೆಪ ತಂದೆ ಹಣಮಂತಪ್ಪಾ ನಾಗನಕೇರಾ ಎಂಬ ರೈತರ ಹೊಲದ ಸರ್ವೆ ನಂ 73ರಲ್ಲಿ ಸುಮಾರು 5 ಎಕ್ಕರೆ ಕಬ್ಬು ಬೆಳೆದಿದ್ದಾನೆ.ಬೆಳೆದಿರುವ ಕಬ್ಬಿನ ಹೊಲಕ್ಕೆ ನಿನ್ನೆ ರಾತ್ರಿ ಕಾಡು ಹಂದಿಗಳು ದಾಳಿ ಮಾಡಿ ಒಂದು ಎಕ್ಕರೆಗಿಂತ ಅಧಿಕ ಪ್ರಮಾಣದ ಕಬ್ಬಿನ ಬೆಳೆಯನ್ನು ಬೆಳಸಲಾಗಿದೆ ಕಬ್ಬು ಸಂಪೂರ್ಣವಾಗಿ ನಾಶ ಪಡಿಸಿವೆ ಕಾಡು ಹಂದಿಗಳು.

ಈ ಒಂದು ಎಕ್ಕರೆ ಕಬ್ಬಿನ ಬೆಳೆ ನಾಶದಿಂದ ಅಂದಾಜು 1ಲಕ್ಷ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ.ಸಾಲ ಮಾಡಿ ಹಗಲು ರಾತ್ರಿ ಎನ್ನದೆ ಕಷ್ಟಪಟ್ಟು ಕಬ್ಬು ಬೆಳಸಿದ ಕಬ್ಬು ,ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದ್ದೆ ಒಂದೆಡೆ ಸತತ ವಾಗಿ ಸುರಿದ ಮಳೆಯಿಂದ ಮುಂಗಾರು ಬೆಳೆ ಸೋಯಾ ಹೆಸರು ಉದ್ದು ಸೇರಿದಂತೆ ವಿವಿಧ ಮುಂಗಾರು ಬೆಳೆ ಜಲಾವೃತ ಬಾಗಿದ್ದೆ ಇನ್ನೋಂದಡೆ ಹಂದಿ ಹಾವಳಿ ಹೆಚ್ಚಾಗಿದೆ ಹೀಗಾಗಿ ರೈತರು ಸಂಕ್ಷಟದಲ್ಲಿದ್ದಾರೆ ಅರಣ್ಯ ಅರಣ್ಯ ಅಧಿಕಾರುಗಳು ರೈತರ ನಷ್ಟಕ್ಕೆ ಪರಿಹಾರ ಕೋಡುತ್ತಾರ ಕಾದ್ದು ನೋಡಬೇಕು.