ಕಾಡು ಬೆಳೆಸಿದರೆ ಸಮೃದ್ಧ ಮಳೆ

ಸಂಜೆವಾಣಿವಾರ್ತೆ

ಹರಪನಹಳ್ಳಿ.ಜೂ.೬; ತಾಲೂಕಿನ ಅರಸೀಕೆರೆ ಪೊಲೀಸ್ ಠಾಣಾ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪೊಲೀಸ್ ಠಾಣಾ ಮೈದಾನದಲ್ಲಿ ಸಸಿಗಳನ್ನು ನೆಡಲಾಯಿತು.ಈ ಸಂದರ್ಭದಲ್ಲಿ ಪಿ.ಎಸ್.ಐ. ಕೆ.ರಂಗಯ್ಯ ಸಸಿ ನೆಟ್ಟು ಮಾತನಾಡಿದ ಅವರು ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು ಕಾಡು ಬೆಳೆಸಿ ನಾಡು ಉಳಿಸಬೇಕಾಗಿದೆ ಕಾಡು ಬೆಳೆಸಿದರೆ ಸಮೃದ್ಧ ಮಳೆ ಬೆಳೆಯಾಗುತ್ತದೆ.ಹಾಗಾಗಿ ಪ್ರತಿಯೊಬ್ಬರು ಗಿಡ ನೆಟ್ಟು ಕಾಡು ಬೆಳೆಸಿ ನಾಡು ಉಳಿಸಬೇಕೆಂದು ಹೇಳಿದರು.ಇದೇ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ ಕೂಲಹಳ್ಳಿ ಕೊಟ್ರೇಶ್, ಮಂಜುನಾಥ್, ರೋಹಿತ್, ನಟರಾಜ್, ವಸಂತ್,ಹನುಮಂತಪ್ಪ, ನಿಂಗಪ್ಪ ಹಾಜರಿದ್ದರು.