
ಔರಾದ :ಆ.6: ಆಧುನಿಕತೆಯ ಭರಾಟೆಯಲ್ಲಿ ಮರಗಳನ್ನು ಬೆಳೆಸುವುದನ್ನು ಪ್ರತಿಯೊಬ್ಬರೂ ಮರೆಯುತ್ತಿದ್ದಾರೆ. ಕಾಡು ಬೆಳೆದಾಗ ಮಾತ್ರ ನಾಡು ಉಳಿಯುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಎಂದು ಕಸಾಪ ಅಧ್ಯಕ್ಷ ಡಾ. ಶಾಲಿವಾನ ಉದಗಿರೆ ಹೇಳಿದರು.
ತಾಲೂಕಿನ ಗಣೇಶಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಸಾಪ ಆಯೋಜಿಸಿದ್ದ ಕಾಡು ಬೆಳೆಸಿ ನಾಡು ಉಳಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಸ್ವಾರ್ಥ ಚಿಂತನೆಗಳಿಂದ ನಾಡಿನ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಕಾಂಕ್ರಿಟ್ ನಾಡಿಗಾಗಿ ನೈಸರ್ಗಿಕ ಸಂಪತ್ತನ್ನು ಹಾಳು ಮಾಡಲಾಗುತ್ತಿದೆ. ಈ ಬಗ್ಗೆ ಎಚ್ಚತ್ತುಕೊಳ್ಳದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ, ಮೂಲತಃ ಮನುಷ್ಯ ಪ್ರಕೃತಿಯ ಆರಾಧಕ. ಆದರೆ, ದುರಾಸೆ ಅವನನ್ನು ಕೆಟ್ಟದಾರಿಗೆ ಕರೆದುಕೊಂಡು ಹೋಗುತ್ತಿದೆ, ಭೂಮಿಯ ಮೇಲೆ ಮನುಷ್ಯನಂತೆ ಎಲ್ಲ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕು ಇದೆ. ಪ್ರಕೃತಿ ನಾಶವಾದರೆ, ಪ್ರಾಣಿ ಪಕ್ಷಿಗಳ ಜೊತೆ ಮನುಷ್ಯನ ಅವನತಿಯಾಗುತ್ತದೆ ಆದ್ದರಿಂದ ಪ್ರತಿಯೊಬ್ಬರು ಗಿಡ ಮರಗಳನ್ನು ಪೆÇೀಷಿಸುವ ಮೂಲಕ ಅರಣ್ಯ ಸಂರಕ್ಷಣೆ ಮಾಡೋಣ ಎಂದರು.
ಶೈಕ್ಷಣಿಕವಾಗಿ, ಭೌತಿಕವಾಗಿ ಅತ್ಯುತ್ತಮ ಶಾಲೆ ನಿರ್ಮಾಣ ಮಾಡಿರುವ ಶಿಕ್ಷಕ ಸಂಜು ಬಿರಾದರ ಹಾಗೂ ಔರಾದ ಪೆÇಲೀಸ್ ಠಾಣೆಗೆ ಆಗಮಿಸಿರುವ ಔರಾದ ಪೆÇಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಉಪೇಂದ್ರಕುಮಾರ ರವರನ್ನು ವಿಶೇಷ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಸವರಾಜ ಪಾಟೀಲ ಬಸನಾಳ, ಸಂಜಯ ಮೇತ್ರೆ, ನಾರಾಯಣ ರಾಠೋಡ, ನೈಮೋದಿನ, ಪ್ರಕಾಶ ಬರದಾಪುರೆ, ಮುಖ್ಯ ಶಿಕ್ಷಕರಾದ ಶಿವಾಜಿರಾವ, ಪ್ರವೀಣಕುಮಾರ, ಸೇರಿದಂತೆ ಏಕಂಬಾ ವಲಯದ ಎಲ್ಲಾ ಶಿಕ್ಷಕರು, ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು