
ಜಗಳೂರು.ಮಾ.೯- ಕಾಡು ಪ್ರಾಣಿಗಳ ಉಪಟಳಕ್ಕೆ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ಒದಗಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬಣದಿಂದ ಪ್ರತಿಭಟನೆ ನಡೆಸಿದರು.ಪಟ್ಟಣದ ಪ್ರವಾಸಿ ಮಂದಿರದಿಂದ ಹೊರಟ ಪ್ರತಿಭಟನಾಕಾರರು ಮಹಾತ್ಮ ಗಾಂಧಿ ವೃತ್ತ,ಅಂಬೇಡ್ಕರ್ ವೃತ್ತದ ಮೂಲಕ ಮಿನಿ ವಿಧಾನಸೌದಕ್ಕೆ ತೆರಳಿ ನಂತರ ತಹಶೀಲ್ದಾರ್ ಸಂತೋಷ್ ಕುಮಾರ್ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಲಿಖಿತ ಮನವಿ ಸಲ್ಲಿಸಿದರು.ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿರಂಜೀವಿ ಸಿಎಂ ಹೊಳೆ ಮಾತನಾಡಿ,ತಾಲೂಕಿನ ರಂಗಯ್ಯನದುರ್ಗ ಅಭಯಾರಣ್ಯದ ಮಧ್ಯೆ ಹಾಗೂ ಅಂಚಿನಲ್ಲಿರುವ ಗ್ರಾಮಗಳ ಜಮೀನುಗಳಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಮೆಕ್ಕೆಜೋಳ, ಶೇಂಗಾ, ಹತ್ತಿ,ಸೇರಿದಂತೆ ಇತರೆ ಬೆಳೆಗಳು ನಾಶವಾಗಿದ್ದು.ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಭರವಸೆ ನೀಡಿದ್ದು ಇದುವರೆಗೂ ಸಿಕ್ಕಿಲ್ಲ,ಸರಕಾರದ ಆದೇಶದಂತೆ ಮೆಕ್ಕೆಜೋಳಕ್ಕೆ ಕ್ವಿಂಟಾಲ್ ಗೆ ₹1240 ಪರಿಹಾರ ಒದಗಿಸಬೇಕು.ಆದರೆ ಕೇವಲ ಕ್ವಿಂಟಾಲ್ ಗೆ ₹500 ರಿಂದ ₹ 600 ಪರಿಹಾರ ಒದಗಿಸಲಾಗಿದೆ. ಪ್ರತಿ ರೈತರಿಗೆ 15 ರಿಂದ 20 ಕ್ವಿಂಟಾಲ್ ಮೆಕ್ಕೆಜೋಳ ನಷ್ಟ ವಾಗಿದೆ ಆದರೆ ಕೇವಲ ಒಂದು ಕ್ವಿಂಟಾಲ್ ಗೆ ಪರಿಹಾರ ನೀಡುತ್ತಿರುವುದು ತೀವ್ರ ಅನ್ಯಾಯವಾಗಿದೆ ಎಂದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ್ ,ತಾಲೂಕು ಅಧ್ಯಕ್ಷ ಗಂಗಾಧರಪ್ಪ,ಪ್ರಧಾನ ಕಾರ್ಯದರ್ಶಿ ರಾಜನಹಟ್ಟಿ ರಾಜು,ಪದಾಧಿಕಾರಿಗಳಾದ ಶರಣಪ್ಪ,ಕೆಂಚಪ್ಪ,ತಿಪ್ಪೇಸ್ವಾಮಿ,ಪರಸಪ್ಪ,ಏಕಾಂತಪ್ಪ,ದೆವೇಂದ್ರಪ್ಪ,ಅಂಜಿನಪ್ಪ,ಸೇರಿದಂತೆ ಭಾಗವಹಿಸಿದ್ದರು.