ಕಾಡಿನ ವಿಚಿತ್ರಗಳ ಸುತ್ತಾ…..

ಕಾಡಿನಲ್ಲಿ ನಡೆಯುವ ವಿಚಿತ್ರ ಘಟನೆಗಳನ್ನು ಮುಂದಿಟ್ಟುಕೊಂಡು ಸಿನಿಮಾ ಮಾಡಲಾಗಿದೆ.ಅದುವೇ “ ಬ್ರೇಕ್ ಫೆಲ್ಯೂರ್”. ನಾಲ್ಕು ಮಂದಿ ಸ್ನೇಹಿತರು ಪ್ರಾಜೆಕ್ಟ್ ಒಂದರ ಮೇಲೆ ಕಾಡಿಗೆ ತೆರಳಿದಾಗ ವಿಚಿತ್ರ ವ್ಯಕ್ತಿಯೊಬ್ಬ ಕಾಟಕೊಡಲು ಆರಂಭಿಸುತ್ತಾನೆ. ಆತ ಯಾರು ಯಾಕಾಗಿ ಕಾಟ ಕೊಡಲು ಆರಂಭಿಸುತ್ತಾನೆ ಎನ್ನುವ ವಿಚಿತ್ರ ಘಟನೆಗಳ ಸುತ್ತಾ ಸಾಗುವ ಕಥಾಹಂದರ ಹೊಂದಿರುವ ಚಿತ್ರ ಇದು.

ದಾಂಡೇಲಿ ಸುತ್ತಮುತ್ತಲಿನ ಅರಣ್ಯದಲ್ಲಿ ಸುಮಾರು 35 ದಿನಗಳ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ತನ್ನ ಪೆÇೀಸ್ಟ್ ಪೆÇ್ರಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿದೆ.

ಅದಿತ್ ನವೀನ್ ನಾಯಕನಾಗಿ ಜೊತೆಗೆ ಚಿತ್ರದ ನಿರ್ದೇಶಕನಾಗೂ ಕೆಲಸ ಮಾಡಿದ್ದಾರೆ. ಚಿತ್ರದ ಟೀಸರ್ ಮತ್ತು ಹಾಡುಗಳ ಅನಾವರಣ ಇತ್ತೀಚೆಗೆ ನಡೆಯಿತು.

ಈ  ವೇಳೆ ಮಾತಿಗಿಳಿದ ನಿರ್ದೇಶಕ ಅದಿತ್ ನವೀನ್ ,ಎಲ್ಲರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಮುಂದೆ ಜನ ಹೇಗಿದೆ ಅಂತ ಹೇಳಬೇಕು. ಇದೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರವಾಗಿದ್ದು, ನಾಲ್ವರು ಬೇಜವಾಬ್ದಾರಿ ಹುಡುಗರು,  ಒಂದು ಡಾಕ್ಯುಮೆಂಟರಿ ಶೂಟ್ ಮಾಡಿಕೊಂಡು ಬರಲು ದಾಂಡೇಲಿಯ ಕಾಡಿಗೆÉ ಹೋದಾಗ ಅಲ್ಲಿ ಅವರಿಗೆದುರಾಗುವ ಭಯಾನಕ ವ್ಯಕ್ತಿಯೊಬ್ಬ ಇವರನ್ನು ಕೊಲ್ಲಲು ಮುಂದಾಗುತ್ತಾನೆ.ಆತ ಇವರನ್ನೇ ಏಕೆ ಟಾರ್ಗೆಟ್ ಮಾಡುತ್ತಾನೆ,

ಕೊನೆಗೆ ಅವರೆಲ್ಲ ಉಳಿಯುತ್ತಾರೋ, ಸಾಯುತ್ತಾರೋ ಇಲ್ವೋ ಎನ್ನುವುದೇ ಕ್ಲೈಮ್ಯಾಕ್ಸ್. ಸದ್ಯದಲ್ಲೇ ಚಿತ್ರ ಬಿಡುಗಡೆ ಮಾಡುವ ಉದ್ದೇಶವಿದೆ.ಇದೆ ನೀರು ಮತ್ತು ಆಹಾರ ಮನುಷ್ಯನ ಜೀವನದಲ್ಲಿ ಎಷ್ಟು ಮುಖ್ಯ ಅಂತ ಚಿತ್ರದಲ್ಲಿ ತೋರಿಸಿದ್ದೇವೆ ಎಂದರು.

ನಾಯಕಿ ಕೃತಿ ಗೌಡ, ಜೀವನದಲ್ಲಿ ಬ್ರೇಕ್ ಫೇಲ್ಯೂರ್ ಆಗಿರುತ್ತೆ, ಅದೇನೆಂದು ಚಿತ್ರದಲ್ಲಿ ಹೇಳಿದೆ. ದಟ್ಟ ಕಾಡಿನಲ್ಲಿ ನಮಗೆ ಆಹಾರ, ನೀರಿನ ಬೆಲೆ ಏನೆಂದು ಗೊತ್ತಾಯ್ತು. ಐದನೇ ಚಿತ್ರ, ರಿಲೀಸ್ ಆಗ್ತಿರುವ ಮೊದಲ ಚಿತ್ರ ಎಂದರು.

ನಿರ್ಮಾಪಕ ಡಾ.ಅಬ್ದುಲ್‍ಘನಿ, ಸಿನಿಮಾ ನಿರ್ಮಾಣ ಮಾಡಬೇಕೆನ್ನುವುದು ನನ್ನ ಆಶಯವಾಗಿತ್ತು. ಇದೇ ಸಂದರ್ಭದಲ್ಲಿ ನಿರ್ದೇಶಕ ನವೀನ್ ಹೇಳಿದ ಕಥೆ ಇಷ್ಟವಾಗಿ ಸಣ್ಣದಾಗಿ ಚಿತ್ರವನ್ನ ಆರಂಭಿಸಿದೆವು. ನಂತರ ಅದು ದೊಡ್ಡದಾಯಿತು. ಕಲಾವಿದರೆಲ್ಲರ ಸಹಕಾರದಿಂದ ಚಿತ್ರ ರೆಡಿಯಾಗಿದ್ದು, ಸದ್ಯದಲ್ಲೇ ಚಿತ್ರವನ್ನು ರಿಲೀಸ್ ಮಾಡೋ ಪ್ಲಾನ್ ಇದೆ ಎಂದು ಹೇಳಿದರು.

ಉಗ್ರಂರವಿ ಚಿತ್ರದಲ್ಲಿ ಇವರನ್ನೆಲ್ಲ ಕೊಲ್ಲಲು ಬರುವ ಆಗುಂತಕನಾಗಿ ವಿಶೇಷ ಪಾತ್ರ ನಿರ್ವಹಿಸಿದ್ದಾರೆ. ಕವಿನ್ ಹಾಗೂ ಅಭುಷೇಕ್ ಜಿ.ರಾಯ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ರಿಷಿಕೇಶ್ ಕ್ಯಾಮೆರಾ ವರ್ಕ್ ಈ ಚಿತ್ರಕ್ಕಿದೆ.

ಅದಿತ್ ನವೀನ್, ಸುರೇಶ್, ರಾಜ್ ಆರ್ಯನ್ ಜೊತೆಗೆ ಕೃತಿ ಗೌಡ, ಅಂಜಲಿ, ರೇಚಲ್ ಚಿತ್ರದ ನಾಯಕಿಯರಾಗಿ ನಟಿಸಿದ್ದು, ಕೆವಿನ್ ಎಂ. ಹಾಗೂ ಅಭಿಷೇಕ್‍ರಾಯ್ ಈ ಚಿತ್ರದ 2 ಹಾಡುಗಳಿಗೆ ಮ್ಯೂಸಿಕ್ ಕಂಪೆÇೀಜ್ ಮಾಡಿದ್ದಾರೆ. ರಿಶಿಕೇಶ್ ಚಿತ್ರದ ಕ್ಯಾಮೆರಾ ವರ್ಕ್ ನಿಭಾಯಿಸಿದ್ದಾರೆ.