ಕಾಡಾನೆ ದಾಳಿಗೆ ಈರುಳ್ಳಿ ತೋಟ ನಾಶ

ಸಂಜೆವಾಣಿ ವಾರ್ತೆ
ಹನೂರು: ಜು.19:- ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಗತ್ತಾಪುರ ಗ್ರಾಮದಲ್ಲಿ ಕಾಡಾನೆಯೊಂದು ಈರುಳ್ಳಿ ತೋಟಕ್ಕೆ ನುಗ್ಗಿ ಕೈಗೆ ಬಂದಿದ್ದ ಈರುಳ್ಳಿ ಫಸಲು, ತುಳಿದು ನಾಶ ಮಾಡಿರುವ ಘಟನೆ, ನಡೆದಿದೆ.
ಗ್ರಾಮದ ನಿವಾಸಿ ಸೈಯದ್ ಎಜಾಸ್ ಎಂಬುವರಿಗೆ ಸೇರಿದ ಜಮೀನಿನಲ್ಲಿ ಸೋಮವಾರ ತಡರಾತ್ರಿ 10 ಗಂಟೆ ಸಮಯದಲ್ಲಿ ಜರುಗಿದೆ.
ಕೆಲವೇ ದಿನದಲ್ಲಿ ಕಟಾವು ಮಾಡಲು ಸಿದ್ದವಿದ್ದ ಈರುಳ್ಳಿ ಫಸಲು ನುಗ್ಗಿದ ಆನೆ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಅರ್ಧ ಎಕರೆ ಪ್ರದೇಶದ ಈರುಳಿ ಫಸಲನ್ನು ತುಳಿದು ದ್ವಂಸ ಮಾಡಿದೆ.
ಅದೃಷ್ಟವಶಾತ್ ತೋಟದ ಮನೆಯಲ್ಲಿ ಯಾರು ಇಲ್ಲದಿರುವುದರಿಂದ ಯಾವುದೇ ರೀತಿಯ ಅನಾಹುತಗಳನ್ನು ಸಂಭವಿಸಿಲ್ಲ ಎಂದು ಹೇಳಲಾಗಿದ್ದು, ಕಷ್ಟಪಟ್ಟು ಬೆಳದಿದ್ದ ಈರುಳ್ಳಿ ಫಸಲನ್ನು ನಾಶಮಾಡಿದ್ದು, ಈ ಭಾಗದಲ್ಲಿ ರೈತರ ಬೆಳೆಗಳ ಮೇಲೆ ನಿರಂತರ ಆನೆ ದಾಳಿ ನಡೆಸುತ್ತಿದ್ದು, ರೈತರಿಗೆ ಅಪಾರ ಪ್ರಮಾಣದ ಬೆಳೆಗಳು ನಷ್ಟವಾಗುತ್ತಿದೆ. ಆನೆ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಿಲ್ಲ ಎಂದು ರೈತ ಸೈಯದ್ ಎಜಾಸ್ ರವರು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಅರಣ್ಯ ಇಲಾಖೆಯವರು ಇತ್ತಕಡೆ ಗಮನ ನೀಡಿ ಕ್ರಮ ವಹಿಸದೇ ಕ್ರಮ, ಮತ್ತು ಈರುಳ್ಳಿ ಬೆಳೆಗೆ ಸೂಕ್ತಪರಿಹಾರವನ್ನು ನೀಡಬೇಕೆಂದು ಮನವಿ ಕೂಡ ಮಾಡಿದ್ದಾರೆ.