ಕಾಡಾನೆ ಉಪಟಳಕ್ಕೆ ರೈತ ಕಂಗಾಲು: ಲಕ್ಷಾಂತರ ರೂ. ನಷ್ಟ

ಸಂಜೆವಾಣಿ ವಾರ್ತೆ
ಹನೂರು ಆ.03:- ತಾಲೂಕಿನ ಪೆÇನ್ನಾಚಿ ಗ್ರಾಮದ ತೋಟಕ್ಕೆ ರಾತ್ರಿ ಸಮಯದಲ್ಲಿ ನುಗ್ಗಿದ ಒಂಟಿ ಕಾಡಾನೆ ಅಲ್ಲಿ ಬೆಳೆಯಲಾಗಿದ್ದ ತೆಂಗಿನ ಮರ ಮಾವಿನ ಬಾಳೆ ಮರಗಳನ್ನು ಸಂಪೂರ್ಣವಾಗಿ ನಾಶ ಮಾಡಿದ್ದು ಇದರಿಂದ ಮಾಲೀಕರಿಗೆ ಲಕ್ಷಾಂತರ ರೂ. ಹಾನಿಯಾಗಿದೆ.
ತಾಲೂಕಿನ ಪೆÇನ್ನಾಚಿ ಗ್ರಾಮದ ರಾ.ಮಾದಪ್ಪ ಬಿನ್ ಬಸಪ್ಪ ಎಂಬುವರ ತೋಟಕ್ಕೆ ಮಂಗಳವಾರ ರಾತ್ರಿ ಸಮಯದಲ್ಲಿ ನುಗ್ಗಿದ ಕಾಡಾನೆ ಸುಮಾರು ನಾಲ್ಕೈದು ತೆಂಗಿನ ಹತ್ತು ಬಾಳೆ ಮರ ಮಾವಿನ ಮರ ಹಾಗೂ ತೇಗಿನ ಮರವನ್ನು ಸಂಪೂರ್ಣವಾಗಿ ಮರಿದು ಕೆಳಕ್ಕೆ ಉರುಳಿಸಿ ಸಂಪೂರ್ಣವಾಗಿ ನಾಶ ಮಾಡಿದೆ.
ಕಳೆದ ಮೂರು ನಾಲ್ಕು ದಿನಗಳ ಹಿಂದೆಯು ಸಹ ರಾತ್ರಿ ಸಮಯದಲ್ಲಿ ಒಂಟಿ ಕಾಡಾನೆ ತೋಟಕ್ಕೆ ನುಗ್ಗಿ 25 ತೆಂಗಿನ ಮರ ನಾಲ್ಕು ಮಾವಿನ ಮರ ಹಾಗೂ ತೇಗಿನ ಮರವನ್ನು ಸಂಪೂರ್ಣವಾಗಿ ಮರಿದು ಕೆಳಕ್ಕೆ ಉರುಳಿಸಿ ನಾಶ ಮಾಡಿದೆ.
ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ಪೆÇನ್ನಾಚಿ ಗ್ರಾಮದ ಸುತ್ತಮುತ್ತ ಆನೆ ದಾಳಿಯ ಕಾಟ ಹೆಚ್ಚಾಗಿದೆ. ಇದರಿಂದ ಈ ಭಾಗದ ಜಮೀನಿನಲ್ಲಿ ಬೆಳೆಯುವ ಫಸಲುಗಳು ತೋಟದ ಫಸಲುಗಳು ಎಲ್ಲಾ ನಾಶವಾಗುತ್ತಿರುವುದು ದಿನನಿತ್ಯದ ಸಮಸ್ಯೆಯಾಗಿ ಕಾಡುವುದಲ್ಲದೆ ಇದರಿಂದ ರೈತರಿಗೆ ಸಿಗುತ್ತಿದ್ದ ಲಕ್ಷಾಂತರ ರೂ. ಆದಾಯ ಕಳೆದುಕೊಂಡಂತಾಗಿದೆ.
ಆನೆ ದಾಳಿ ಉಪಟಳದ ಬಗ್ಗೆ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಿಳಿಸಿದ್ದರು ಸಹ ಆನೆಯನ್ನು ಹಿಡಿದು ಬೇರೆಡೆಗೆ ಸ್ಥಳಾಂತರಿಸುವ ಅಥವಾ ಇದರಿಂದ ರಕ್ಷಣೆ ಮಾಡುವಂತಹ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರುತ್ತಿದ್ದಾರೆ ಎಂಬುದು ಸ್ಥಳೀಯ ರೈತರ ಆರೋಪವಾಗಿದೆ.
ಈ ಬಗ್ಗೆ ಮಾತನಾಡಿದ ರೈತ ರಾ.ಮಾದಪ್ಪ ಅವರು ನಮ್ಮ ಜಮೀನಿನಲ್ಲಿ ರಾತ್ರಿ ಒಂಟಿ ಆನೆ ದಾಳಿ ಮಾಡಿ ತೆಂಗಿನ ಮರ ಮತ್ತು ಬಾಳೆ ಮರಗಳನ್ನು ಉರುಳಿಸಿ ಸಂಪೂರ್ಣ ನಾಶ ಮಾಡಿದೆ. ಕಳೆದ ಮೂರು ನಾಲ್ಕು ದಿನಗಳ ಹಿಂದೆಯೂ ಸಹ ಒಂಟಿ ಆನೆ ದಾಳಿ ಮಾಡಿ 25 ತೆಂಗಿನ ಮರ ನಾಲ್ಕು ಮಾವಿನ ಮರ ತೇಗಿನ ಮರಗಳನ್ನು ನಾಶ ಮಾಡಿತ್ತು.
ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ತಿಳಿಸಿದ್ದರೂ ಸಹ ಆನೆ ದಾಳಿಯಿಂದ ನಾಶವಾಗುತ್ತಿರುವ ನಮ್ಮ ಜಮೀನಿಗೆ ಯಾವುದೇ ರೀತಿ ರಕ್ಷಣೆ ಸಿಗುತ್ತಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ನನ್ನ ಜಮೀನಿನಲ್ಲಿ ಹಾಳಾಗಿರುವ ಬೆಳೆಗಳಿಗೆ ಪರಿಹಾರ ಕೊಡಿಸಿಕೊಡಬೇಕು. ಹಾಗೂ ಆನೆಯನ್ನು ಹಿಡಿದು ಬೇರಡೆಗೆ ಸ್ಥಳಾಂತರಿಸಬೇಕು ಇದರಿಂದ ಈ ಭಾಗದ ಜನರಿಗೆ ರಕ್ಷಣೆ ಸಿಗುವಂತಾಗಬೇಕು ಎಂದು ತಿಳಿಸಿದ್ದಾರೆ.
ಪೆÇನ್ನಾಚಿ ಗ್ರಾಮದ ರಾ.ಮದಪ್ಪ ಅವರ ಜಮೀನಿನಲ್ಲಿ ಮೇಲೆ ಹಾದು ಹೋಗಿರುವ ವಿದ್ಯುತ್ ತಂತಿ ಜೋತು ಬಿದ್ದಿದ್ದು ಕೈಗೆಟಕುವ ಅಂತರದಲ್ಲಿದ್ದು ಆನೆಯಂತಹ ಪ್ರಾಣಿಗಳು ಆ ಮಾರ್ಗವಾಗಿ ಬಂದಾಗ ತಗುಲುವ ಸಾಧ್ಯತೆ ಕಾಣುತ್ತದೆ. ಇದರಿಂದ ಆನೆ ಮೃತಪಡಬಹುದು ಎಂಬುದು ಗೊತ್ತಾಗುತ್ತದೆ.
ಜಮೀನಿನ ಮೇಲೆ ಹಾದು ಹೋಗಿರುವ ಹೈ ಪವರ್ ವಿದ್ಯುತ್ ತಂತಿಯು ಜಮೀನಿನ ಬಿಂದುವಿನಲ್ಲಿ ಕಟ್ಟೆಯ ಮೇಲೆ ನಿಂತರೆ ಕೈಗೆಟಕುವ ಮಟ್ಟದಲ್ಲಿ ತಾಗುತ್ತದೆ. ಇದರಿಂದ ಅವಘಡಗಳು ಸಂಭವಿಸುವ ಸಾಧ್ಯತೆ ಇದ್ದು. ಈ ಬಗ್ಗೆ ಸಂಬಂಧಪಟ್ಟ ವಿದ್ಯುತ್ ಇಲಾಖೆಯ ಅಧಿಕಾರಿ ಸಿಬ್ಬಂದಿಗಳ ಗಮನಕ್ಕೆ ತಿಳಿಸಿದ್ದರು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲ.
ಆಕಸ್ಮಿಕವಾಗಿ ಜೋತು ಬಿದ್ದಿರುವ ಹೈ ಪವರ್ ವಿದ್ಯುತ್ ತಂತಿಗಳು ತಗುಲಿ ಆನೆಯಂತಹ ಪ್ರಾಣಿಗಳು ಆಕಸ್ಮಿಕವಾಗಿ ಈ ಮಾರ್ಗವಾಗಿ ಬಂದಾಗ ಇದಕ್ಕೆ ವಿದ್ಯುತ್ ತಗೋಳಿ ಹವಗಡಗಳು ಸಂಭವಿಸಿದರೆ ಇದಕ್ಕೆ ವಿದ್ಯುತ್ ಇಲಾಖೆಯವರೇ ಹೊಣೆಯಾಗ ಬೇಕಾಗುತ್ತದೆ. ಇನ್ನಾದರೂ ಎಚ್ಚೆತ್ತು ವಿದ್ಯುತ್ ಇಲಾಖೆಯವರು ಜ್ಯೋತಿ ಬಿದ್ದಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕಾಗಿದೆ.