ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಕೋಲಾರ,ಏ,೩- ಅಗತ್ಯ ಜೀವ ರಕ್ಷಕ ಔಷದಿಗಳ ಬೆಲೆ ನಿಯಂತ್ರಣ ಜೊತೆಗೆ ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ಏ.೦೫ರ ಬುಧವಾರ ಆನೆ ಲದ್ದಿ ಸಮೇತ ರೈಲ್ವೇ ನಿಲ್ದಾಣ ಮುತ್ತಿಗೆ ಹಾಕಲು ಬಂಗಾರಪೇಟೆ ಗಡಿಭಾಗದ ಕದರಿನತ್ತ ನೊಂದ ರೈತg ತೋಟzಲ್ಲಿ ಕರೆದಿದ್ದ ಸಭೆಯಲ್ಲಿ ತೀರ್ಮಾನಿಸಲಾಯಿತು.
ಕಾಡಾನೆಗಳ ಹಾವಳಿ ತಡೆಗೆ ಜನರ ತೆರಿಗೆಯ ಕೋಟ್ಯಾಂತರ ರೂ ಹಣವನ್ನು ಸೋಲಾರ್ ತಂತಿ ಅಳವಡಿಕೆಯ ಅನುದಾನವನ್ನು ಸಮರ್ಪಕವಾಗಿ ಬಳಸದ ಜೊತೆಗೆ ಅಳವಡಿಸಿರುವ ಸೋಲಾರ್ ತಂತಿ ಸಮರ್ಪಕ ನಿರ್ವಹಣೆ ಇಲ್ಲದೆ ಕಂಬಗಳು ನೆಲಕ್ಕೆ ಹುರಳಿ ಬ್ಯಾಟರಿಗಳೂ ಇಲ್ಲದೆ ನೆಪ ಮಾತ್ರಕ್ಕೆ ಸೋಲಾರ್ ಅಳವಡಿಸಿ ಕಾಡಾನೆಗಳ ಹಾವಳಿ ನೆಪದಲ್ಲಿ ಕೋಟಿ ಕೋಟಿ ಹಣವನ್ನು ಅರಣ್ಯ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆಂದು ಕಾಮಸಮುದ್ರ ಹೋಬಳಿ ಅದ್ಯಕ್ಷ ಮುನಿಕೃಷ್ಣ ಅರಣ್ಯ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹದಗೆಟ್ಟಿರುವ ಶಿಕ್ಷಣ ಕ್ಷೇತ್ರದಿಂದ ಕಂಗಲಾಗಿರುವ ಬಡ ರೈತ ಕೂಲಿ ಕಾರ್ಮಿಕರು ದಿನದ ೨೪ ಗಂಟೆ ದುಡಿದರೂ ಗುಣಮಟ್ಟದ ಪೌಷ್ಠಿಕ ಆಹಾರ ಸೇವಿಸದೆ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಲು ಸಾದ್ಯವಾಗದೆ ಪರಿಸ್ಥಿತಿಯಲ್ಲಿರುವ ಸಮಯದಲ್ಲಿ ಕೇಂದ್ರ ಸರ್ಕಾರ ಆಹಾರ ಶಿಕ್ಷಣ ಕಸಿಯುವ ಜೊತೆಗೆ ಜನರ ಆರೋಗ್ಯವನ್ನು ಔಷಧಿಗಳ ಬೆಲೆ ಏರಿಕೆ ಮಾಡುವ ಮುಖಾಂತರ ಜನಸಾಮಾನ್ಯರ ಬದುಕಲು ಬಿಡದೆ ಸಾಯಲು ಬಿಡದೆ ಅಡ್ಡ ಗೋಡೆ ಮೇಲೆ ದೀಪ ಇಟ್ಟಂತೆ ಜನ ಸಾಮಾನ್ಯರನ್ನು ನಿಧಾನಗತಿಯ ವಿಷ ಹುಣಿಸುವ ಮುಖಾಂತರ ಬಡವರ ಬದುಕನ್ನು ಬೀದಿಗೆ ತಳ್ಳುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ನೊಂದ ರೈತ ಕದರಿನತ್ತ ಅಪ್ಪೋಜಿರಾವ್ ಮತ್ತು ನಾಗರಾಜ್ ಮಾತನಾಡಿ ಹತ್ತಾರು ವರ್ಷಗಳಿಂದ ಗಡಿಭಾಗದ ಕಾಡಾನೆಗಳ ಹಾವಳಿಯಿಂದ ರೈತರ ಪ್ರಾಣ ಬೆಳೆ ಹಾನಿಗೆ ಶಾಶ್ವತ ಪಡಿಹಾರ ನೀಡುವಲ್ಲಿ ಸ್ಥಳಿಯ ಜನಪ್ರತಿನಿದಿಗಳು ಅರಣ್ಯ ಇಲಾಖೆ ವಿಪಲವಾಗಿದೆ ಸಮಸ್ಯೆ ಆದಾಗ ಚುನಾವಣೆ ಹತ್ತಿರ ಬಂದಾಗ ಮೊಸಳೆ ಕಣ್ಣೀರು ಸುರಿಸಿ ಸಮಸ್ಯೆ ಬಗೆಹರಿಸುತ್ತೇನೆಂದು ಹೇಳಿ ನಾಪತ್ತೆ ಆಗುವ ಸುಳ್ಳು ಭರವಸೆಯ ರಾಜಕಾರಣಿಗಳ ವಿರುದ್ದ ನೊಂದ ರೈತರು ಶಾಪ ಹಾಕಿದರು.
ಒಂದು ಎಕರೆ ಬೆಳೆ ಮಾಡಬೇಕಾದರೆ ಹದಗೆಟ್ಟಿರುವ ಕೃಷಿ ಕ್ಷೇತ್ರದಲ್ಲಿ ೨ ಲಕ್ಷ ಖರ್ಚು ಬರುತ್ತದೆ, ಬೆಳೆ ಬಂದು ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದಾಗ ರಾತ್ರೋ ರಾತ್ರಿ ಕಾಡಾನೆಗಳ ಉಪಟಳಕ್ಕೆ ೩ ತಿಂಗಳ ಬೆಳೆ ೩ ನಿಮಿಷದಲ್ಲಿ ನಾಶ ಆಗುತ್ತಿದೆ. ಕಣ್ಣು ಮುಂದೆಯೇ ನಾಶ ಆಗಿರುವ ಬೆಳೆ ನೋಡಿ ರೈತ ಕಣ್ಣೀರು ಭೂಮಿಗೆ ಸುರಿಸಿ ಸರ್ಕಾರದ ಪರಿಹಾರಕ್ಕೆ ಬಿಕ್ಷೇ ಬೇಡುವಂತಾಗಿದೆ ರೈತರ ಬದುಕು ಸರ್ಕಾರಗಳಿಗೆ ರೈತ ರ ಮೇಲೆ ಕಾಳಜಿ ಇದ್ದರೆ ರೈತರ ಮಕ್ಕಳಾದರೆ ತಟ್ಟೆಯಲ್ಲಿ ತಿನ್ನುವ ಅನ್ನದ ಬೆಲೆ ಗೊತ್ತಿದ್ದರೆ ರೈತರ ಸಮಸ್ಯೆಗಳಿಗೆ ಶಾಶ್ವತ ಪಡಿಹಾರ ನೀಡಬೇಕೆಂದು ಒತ್ತಾಯಿಸಿದರು.
ಕಾಡಾನೆಗಳ ಹಾವಳಿ ಶಾಶ್ವತ ಪರಿಹಾರ ಅಗತ್ಯ ಔಷಧಿಗಳ ಬೆಲೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರವನ್ನು ಏ.೫ ರ ಬುಧವಾರ ಆನೆ ಲದ್ದಿ ಸಮೇತ ರೈಲ್ವೆ ನಿಲ್ದಾಣ ಮುತ್ತಿಗೆ ಹಾಕಿ ಸರ್ಕಾರವನ್ನು ಒತ್ತಾಯಿಸುವ ಹೋರಾಟಕ್ಕೆ ನೊಂದ ರೈತರು ಸಹಕರಿಸಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.