ಕಾಡಾನೆಗಳಿಂದ ಕೃಷಿಗೆ ಹಾನಿ

ಸುಳ್ಯ, ಜು.೧೯- ಆನೆಗಳ ಹಿಂಡು ವ್ಯಾಪಕವಾಗಿ ಕೃಷಿ ಹಾನಿ ಮಾಡಿ ಅಪಾರ ನಷ್ಟ ಸಂಭವಿಸಿದ ಘಟನೆ ಸೋಮವಾರ ಬೆಳಗ್ಗೆ ಮಾವಂಜಿ ಭಾಗದಲ್ಲಿ ನಡೆದಿದೆ.
ಒಂದು ಮರಿ ಹಾಗು ಮೂರು ದೊಡ್ಡ ಆನೆಗಳ ಹಿಂಡು ತೋಟಕ್ಕೆ ನುಗ್ಗಿದ್ದು ಸೀತಾರಾಮ ಮಣಿಯಾಣಿ ಅವರ ತೋಟದಲ್ಲಿ ಬಾಳೆ, ತೆಂಗು ಸೇರಿ ಕೃಷಿ ಹಾನಿ ಮಾಡಿದೆ. ಅಯ್ಯಪ್ಪ ಬೆಳ್ಚಪಾಡ ಎಂಬವರ ಗದ್ದೆಯ ಮೂಲಕ ಹಾದು ಹೋಗಿದೆ. ಮಂಡೆಕೋಲು ಗ್ರಾಮದಲ್ಲಿ ಕಾಡಾನೆ ಹಾಳಿ ನಿರಂತರ ಮುಂದುವರಿದಿದ್ದು ಮಳೆಗಾಲ ಆರಂಭವಾದ ಬಳಿಕ ಆನೆ ಹಾವಳಿ ಇನ್ನಷ್ಟು ತೀವ್ರಗೊಂಡಿದೆ. ರವಿವಾರ ಸಂಜೆಯ ವೇಳೆಗೆ ಮಾವಂಜಿ ಭಾಗಕ್ಕೆ ಆನೆಗಳು ದಾಳಿಯಿಟ್ಟಿದೆ. ಆನೆಗಳನ್ನು ಕಾಡಿಗೆ ಅಟ್ಟಿದರೂ ಮತ್ತೆ ಮರಳಿ ಬರುತಿವೆ. ಮರಿ ಆನೆಯೂ ಇರುವ ಕಾರಣ ಆನೆಗಳು ದೂರ ಸರಿಯುವುದಿಲ್ಲ. ಮತ್ತೆ ಮತ್ತೆ ಊರಿನತ್ತ ನುಗ್ಗಿ ಬರುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.