ಕಾಡಾಧ್ಯಕ್ಷರಾದ ಕೊಲ್ಲಾ ಜೋಳ, ಬೆಳೆ ವೀಕ್ಷಣೆ

ಸಿಂಧನೂರು,ನ.೨೦- ಗೊಮರ್ಸಿ ಮಾಡಶಿರವಾರ ಬೆಳಗುರ್ಕಿ ಗ್ರಾಮಗಳಲ್ಲಿ ರೈತರು ಜೋಳ ಬೆಳೆದಿದ್ದು ಬೆಳೆಗಳಿಗೆ ಸಮರ್ಪಕ ನೀರು ತಲುಪುತ್ತಿವೆ ಇಲ್ಲವೆ ಎನ್ನುವದರ ಬಗ್ಗೆ ಅಧಿಕಾರಿಗಳೊಂದಿಗೆ ಕಾಡಾ ಅಧ್ಯಕ್ಷರಾದ ಕೊಲ್ಲಾ ಶೇಷ ಗಿರಿರಾವ್ ಕಾಲುವೆಯ ಮೇಲೆ ಬೈಕ್‌ನಲ್ಲಿ ತಿರುಗಾಡಿ ವೀಕ್ಷಣೆ ಮಾಡಿದರು.
ತಾಲೂಕಿನ ಕೆಳ ಭಾಗದ ರೈತರ ಜೋಳದ ಬೆಳೆಗೆ ನೀರು ತಲುಪದೆ ಬೆಳೆ ಒಣಗುತ್ತಿವೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪ ಮಾಡಿ ತಹಸೀಲ್ದಾರ್ ಕಛೇರಿಯ ಮುಂದೆ ಪ್ರತಿಭಟನೆಯನ್ನು ಮಾಡಿ ತಹಸೀಲ್ದಾರ್ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ತುಂಗಭದ್ರ ಎಡದಂಡೆ ಕಾಲುವೆಯ ೫೪ ಉಪ ಕಾಲುವೆ ವ್ಯಾಪ್ತಿಯಲ್ಲಿ ಬರುವ ಗೊಮರ್ಸಿ ಮಾಡಶಿರವಾರ ಬೆಳಗುರ್ಕಿ ಗ್ರಾಮಗಳ ರೈತರ ಜೋಳ ಬೆಳೆದಿದ್ದು, ಸರಿಯಾಗಿ ನೀರು ಸಿಗದೆ ಬೆಳೆ ಒಣಗುತ್ತಿವೆ ಎನ್ನುವ ಆರೋಪ ಕೇಳಿ ಬರುತ್ತಿದ್ದು, ಯಾವದೇ ಕಾರಣಕ್ಕೂ ಜೋಳದ ಬೆಳೆ ಒಣಗಲು ನಾನು ಬಿಡುವುದಿಲ್ಲ. ಹಗಲು ರಾತ್ರಿ ನಿರಂತರ ನೀರು ಕಾಲುವೆಗೆ ಬಿಟ್ಟು ಬೆಳೆ ರಕ್ಷಣೆ ಮಾಡುವಂತೆ ಸ್ಥಳದಲ್ಲಿದ್ದ ನೀರಾವರಿಯ ಇಲಾಖೆಯ ಅಧಿಕಾರಿಯಾದ ರಘುರಾಮಗೆ ಖಡಕ್ ಎಚ್ಚರಿಕೆಯನ್ನು ಕಾಡಾ ಅಧ್ಯಕ್ಷರು ನೀಡಿದರು.
ಕಾಡಾ ಅಧ್ಯಕ್ಷರಾದ ಕೊಲ್ಲಾ ಶೇಷಗಿರಿರಾವ್ ನಮ್ಮ ಗ್ರಾಮಕ್ಕೆ ಬಂದು ಅದು ಬೈಕ್ ಮೇಲೆ ಕಾಲುವೆ ಮೇಲೆ ತಿರುಗಾಡಿ ನಮ್ಮ ಸಮಸ್ಯೆಯನ್ನು ಆಲಿಸಿದ್ದು ಇದೆ. ಪ್ರಥಮ ಇಲ್ಲಿತನಕ ಯಾವ ರಾಜಕಾರಣಿಗಳು ಬಂದಿಲ್ಲ. ಕಾಡಾ ಅಧ್ಯಕ್ಷರಿಗೆ ಅಭಿನಂದನೆಗಳನ್ನು ಸಲ್ಲಿಸುವದಾಗಿ ರೈತರು ಪತ್ರಿಕೆ ತಿಳಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಕೆಲ ರೈತರು ಇನ್ನು ನಮಗೆ ನೀರು ಸಿಗದ ಕಾರಣ ಬೆಳೆ ಒಣಗಿದ್ದು ನಮಗೂ ನೀರು ಕೊಟ್ಟು ನಮ್ಮ ಬೆಳೆಗಳನ್ನು ಕಾಪಾಡುವಂತೆ ಕಾಡಾ ಅಧ್ಯಕ್ಷರಲ್ಲಿ ರೈತರು ಮನವಿ ಮಾಡಿ ಒಣಗಿದ ಜೋಳದ ಬೆಳೆಯನ್ನು ತೊರಿಸಿದಾಗ ಸಮರ್ಪಕ ನೀರು ಪೂರೈಸುವ ಮೂಲಕ ಎಲ್ಲರ ಬೆಳೆಗಳನ್ನು ರಕ್ಷಣೆ ಮಾಡುವ ಜವಾಬ್ದಾರಿಯು ನನ್ನದು ಎಂದು ಕೊಲ್ಲಾ ಶೇಷ ಗಿರಿರಾವ್ ರೈತರಿಗೆ ಭರವಸೆ ಹೇಳಿದರು.
ನಗರ ಯೋಜನೆಯ ಪ್ರಾಧಿಕಾರದ ಅಧ್ಯಕ್ಷರಾದ ಮಧ್ವರಾಜ ಆಚಾರ್ಯ ರೈತರಾದ ದೊರೆ ಬಾಬು ಯುನೀಷ ಜಾಗೀರದ್ದಾರ್ ಸಂಗಮೇಶ, ವಿರೇಶಗೌಡ, ಮುದುಕಪ್ಪ, ರಮೇಶ, ಲಿಂಗಾರೆಡ್ಡಿ, ನಾಗರಾಜ ಮಡಿವಾಳ ಲಕ್ಷ್ಮೀಪತಿ ಸೇರಿದಂತೆ ಹಲವಾರು ರೈತರು ಇದ್ದರು.