ಕಾಡನ್ನು ಉಳಿಸಿ, ನಾಡನ್ನು ಬೆಳಸಿ

ಬ್ರೈಟ್ ಮೂನ್ ಎಂಟರ್ಟೈನ್ಮೆಂಟ್ ಅರ್ಪಿಸುವ ಅಗ್ರಹಾರ ಸಿನಿಮಾ
ರಾಯಚೂರು,ಫೆ.೨೧- ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಪ್ರತಿಭೆಗಳು ಈ ಒಂದು ಅಗ್ರಹಾರ ಕಿರುಚಿತ್ರದ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರವೊಂದು ಕುತೂಹಲ ಹುಟ್ಟಿಸುವ ಅತ್ಯದ್ಭುವಾದ ಕಥೆಯನ್ನೊಳಗೊಂಡಿದೆ. ಎಲ್ಲ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿರುವಂತಹ ಚಿತ್ರ ಅದೇ ಈ ಚಿತ್ರ ಅಗ್ರಹಾರ.
ನಮ್ಮ ಜೀವನವು ಸಂಪೂರ್ಣವಾಗಿ ಪರಿಸರದ ಮೇಲೆ ಅವಲಂಬಿತವಾಗಿದೆ, ಏಕೆಂದರೆ ಆರೋಗ್ಯಕರ ಸಮಾಜವು ಶುದ್ಧ ಪರಿಸರದಿಂದ ಮಾತ್ರ ರೂಪುಗೊಳ್ಳುತ್ತದೆ. ಪರಿಸರವು ನಮಗೆ ಜೀವನ ನಡೆಸಲು ಉಪಯುಕ್ತವಾದ ಎಲ್ಲವನ್ನೂ ಉಡುಗೊರೆಯಾಗಿ ಒದಗಿಸುತ್ತದೆ. ಪರಿಸರದಿಂದ ನಾವು ಶುದ್ಧ ನೀರು, ಶುದ್ಧ ಗಾಳಿ, ಶುದ್ಧ ಆಹಾರ, ನೈಸರ್ಗಿಕ ಸಸ್ಯವರ್ಗ ಇತ್ಯಾದಿಗಳನ್ನು ಪಡೆಯುತ್ತೇವೆ. ನೈಸರ್ಗಿಕ ಪರಿಸರವನ್ನು ಮಾನವರು, ಪ್ರಾಣಿಗಳು, ಪಕ್ಷಿಗಳು ಮತ್ತು ಸಸ್ಯಗಳು ಭೂಮಿಯ ಮೇಲೆ ವಾಸಿಸಲು ಮತ್ತು ಬೆಳೆಯಲು ಸಹಾಯ ಮಾಡುವ ಪರಿಸರ ಎಂದು ಹೆಸರಿಸಲಾಗಿದೆ.
ಇದೆಲ್ಲವನ್ನೂ ಒಳಗೊಂಡಿರುವ ಒಂದು ಕಿರುಚಿತ್ರವೊಂದಿದೆ ಅದೇ ಅಗ್ರಹಾರ. ಕಾಡನ್ನ ಉಳಿಸೋರು ಇರುತ್ತಾರೆ ಹಾಗೆ ಅದನ್ನ ನಾಶ ಮಾಡೋರು ಕೂಡ ಇರುತ್ತಾರೆ. ಈ ಚಿತ್ರದಲ್ಲಿ ಅದೆಷ್ಟು ಅದ್ಭುತವಾಗಿ ನಟಿಸಿದ್ದಾರೆಂದರೆ ಪರಿಸರದ ಮೇಲೆ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಮತ್ತು ಗೌರವ ತುಂಬಿದೆ ಎಂದು ಗೊತ್ತಾಗುತ್ತಿದೆ.
ಆ ಒಂದು ಊರಲ್ಲಿ ಹುಲಿಯು ಹಳ್ಳಿಯ ಜನರನ್ನ ಹಸು ಮೇಕೆ ಕುರಿಗಳನ್ನ ತಿಂದು ಆ ಊರಿನ ಜನಕ್ಕೆ ಪ್ರಾಣಭಯ ಹುಟ್ಟಿಸಿದ ಆ ಹುಲಿಯನ್ನು ಕೊಲ್ಲಬೇಕು ಹೇಗಾದರೂ ಮಾಡಿ ಎಂದು ಎಷ್ಟೇ ಪ್ರಯತ್ನ ಪಟ್ಟರು ಸಪಲ ಆಗದೆ ಸೋತಿರುತ್ತಾರೆ.
ಸುಂದರವಾದ ಕಾಡಲ್ಲಿ ಯಾರಿಗೂ ಯಾವುದೇ ತೊಂದರೆ ಆಗದಂತೆ ಪರಿಸರ ಉಳಿಸಬೇಕು ಹುಲಿಯನ್ನ ಉಳಿಸಬೇಕು ನನ್ನ ಪ್ರಾಣ ಹೋದ್ರು ಜನರನ್ನ ರಕ್ಷಿಸಬೇಕು ಅನ್ನೋ ಒಬ್ಬ ಪಾರೆಸ್ಟ್ ಆಫೀಸರ್ ಅನ್ನೋ ಪಾತ್ರದಲ್ಲಿ ಅರ್ಜುನ್ ಅವರು ಬೆಂಕಿಯತೆ ನಟಿಸಿ ಕಾಡನ್ನ ಹುಲಿಯನ್ನ ಉಳಿಸುವ ಪ್ರಯತ್ನದಲ್ಲಿ ಬಹಳಷ್ಟು ಹರಸಾಹಸ ಪಟ್ಟಿರುವುದು ಅದ್ಬುತವಾಗಿಸಿದೆ ಈ ಚಿತ್ರ.
ಊರಿನ ಯಜಮಾನನ ಪಾತ್ರದಲ್ಲಿ ನರಸಿಂಹ ಅನ್ನುವವರ ಪಾತ್ರವು ಕೂಡ ಸಾಕಷ್ಟು ವಿಭಿನ್ನ ರೀತಿಯಲ್ಲಿ ನಟಿಸಿ ಈ ಅಗ್ರಹಾರ ಚಿತ್ರಕ್ಕೆ ಒಂದು ಮೆರಗು ತರಿಸಿದ್ದಾರೆ. ಒಂದು ಚಿತ್ರ ಎಂದಮೇಲೆ ಅದರಲ್ಲಿ ಕಾಮಿಡಿ ಇರಲೇಬೇಕು ಅಲ್ವಾ ಆ ಕಾಮಿಡಿ ಪಾತ್ರದಲ್ಲಿ ನಂದ ಅನ್ನುವವರು ಎಲ್ಲರನ್ನು ತನ್ನ ಮಾತಿನಲ್ಲೇ ಗಮನ ಸೆಳೆದು ಈ ಚಿತ್ರ ನೋಡುವ ಎಲ್ಲರಿಗೂ ನಗು ತರಿಸಿದ್ದಾರೆ.ಇನ್ನೂ ಡಾ. ಪಾತ್ರದಲ್ಲಿ ಮಂಜುನಾಥ್ ರವರು ವಿಲನ್ ಪಾತ್ರದಲ್ಲಿ ಗಿರೀಶ್ ರವರು ಕೂಡ ಅದ್ಬುತ ಅಭಿನಯ ಮಾಡುವದರ ಮೂಲಕ ಈ ಚಿತ್ರಕ್ಕೆ ಕಳೆ ತುಂಬಿದ್ದಾರೆ.
ಯಾರೇ ಅಗ್ರಹಾರ ಚಿತ್ರ ನೋಡಲಿ ಅವರು ಅರ್ಧಕ್ಕೆ ಬಿಟ್ಟು ಏಳುವುದೇ ಇಲ್ಲಾ ಅಷ್ಟು ಆಸಕ್ತಿಯಿಂದ ಮುಂದೆ ಏನಾಗುವುದು ಮುಂದೆ ಏನಾಗುವುದು ಎನ್ನುವ ಕುತೂಹಲ ತುಂಬಿಸುವ ಚಿತ್ರ ಈ ಅಗ್ರಹಾರ.
ಅರ್ಜುನ್ ರವರ ಅಭಿನಯವಂತೂ ನೋಡುತ್ತಿದ್ದರೆ ಎಂತವರಿಗೂ ಕಾಡಿನ ಬಗ್ಗೆ ಪ್ರಾಣಿಗಳ ಬಗ್ಗೆ ಪ್ರೀತಿಯಂತೂ ತುಂಬಿಸಿಯೇ ಕಳಿಸುತ್ತಾರೆ.
ಆ ಮಾತಿನ ಘಾಟಿ ಗತ್ತು ಗಮ್ಮತ್ತು ಆ ಪೌರುಷ, ಕಾನೂನಿನ ಪ್ರಕಾರವೇ ಹೋಗುವ ಆ ನಿಷ್ಠೆ ಪ್ರಾಮಾಣಿಕತೆ, ಪ್ರಾಣದ ಭಯವೇ ಇಲ್ಲದಂತೆ ಜನರ ಪ್ರಾಣಕ್ಕೆ ಪರಿಸರಕ್ಕೆ ಅದೆಷ್ಟು ಗೌರವ ಕೊಟ್ಟು ಬೆಂಕಿಯ ಹಾಗೆ ಮಿಂಚಿ ಇದಕ್ಕೊಂದು ಅರ್ಥಪೂರ್ಣ ಕಥೆಗೆ ಮೆರಗು ಕೊಟ್ಟಿದ್ದಾರೆ.
ಈ ಚಿತ್ರವು ಅತ್ಯದ್ಭುತವಾದ ಕಥೆ ಹಾಗೂ ಪರಿಸರ ಪ್ರಾಣಿಗಳ ಹಿತರಕ್ಷಣೆಯನ್ನು ಒಳಗೊಂಡಿದೆ.
ನೋಡಿದರು ಮತ್ತೆ ನೋಡೋಣ ಅನ್ನುವ ಅಭಿನಯ ಪಾತ್ರಗಳು ಕಾಮಿಡಿ, ಭಯ ಆತಂಕ ಎಲ್ಲವೂ ಕುತೂಹಲಕರವಾಗಿ ನೋಡುಗರ ಮನಗೆದ್ದಿದೆ. ಇಷ್ಟು ಅದ್ಭುತವಾಗಿ ನಿರ್ದೇಶನ ಮಾಡಿರುವ ನವೀನ್ ರವರಿಗೆ ಧನ್ಯವಾದಗಳನ್ನ ಈ ಚಿತ್ರವನ್ನು ನೋಡುವ ಪ್ರತಿಯೊಬ್ಬರು ತಿಳಿಸಬೇಕು.
ಇಷ್ಟು ಒಳ್ಳೆ ಕಥೆಯನ್ನ ನಮಗಾಗಿ ಸೃಷ್ಟಿಸಿ ಪರಿಸರ ಪ್ರಾಣಿಗಳ ಬೆಲೆಯನ್ನ ಮನಮುಟ್ಟುವಹಾಗೆ ಬರೆದು ನಿರ್ದೇಶಿಸಿ ನಮಗೆಲ್ಲ ನೋಡುವ ಭಾಗ್ಯ ಕೊಟ್ಟಿರುವ ಕಿರುಚಿತ್ರ ನಿರ್ದೇಶಕರಾದ ನವೀನ್ ರವರಿಗೆ ಅಭಿನಂದನೆಗಳು. ಎಷ್ಟೋ ಪ್ರತಿಭೆಗಳು ಇನ್ನೂ ಎಲೆಮರೆಯ ಕಾಯಿಯಂತೆ ಮರೀಚಿಕೆಯಾಗಿಯೇ ಉಳಿದಿದ್ದಾರೆ. ಅಂತವರಲ್ಲಿ ಇವರುಗಳು ಕೂಡ. ಕಲೆ ಎಂಬುವುದು ಎಲ್ಲರಿಗೂ ಒಲೆಯುವುದಿಲ್ಲ ಆದರೆ ಇವರೆಲ್ಲರಿಗೂ ಈ ಅದ್ಬುತ ಕಲೆಗೂ ನಮ್ಮೆಲ್ಲರ ಪ್ರೋತ್ಸಾಹ ಸದಾ ನೀಡೋಣ ಸ್ಥಳಿಯರನ್ನ ಮೊದಲು ಬೆಳೆಸೋಣ ಈ ಕಲೆಗೆ ಎಲ್ಲರೂ ಅಭಿನಂದಿಸೋಣ.
ಬ್ರೈಟ್ಮೂನ್ ಎಂಟರ್ಟೈನ್ಮೆಂಟ್ (ಃಡಿighಣಒooಟಿಓ ಓಟಿಣeಡಿಣಚಿiಟಿmeಟಿಣ ) ಈ ಲಿಂಕ್ ನಲ್ಲಿ ನಿಮಗೆ ಅಗ್ರಹಾರ ಚಿತ್ರವನ್ನು ನೋಡುವ ಅವಕಾಶವಿರುತ್ತದೆ, ಎಲ್ಲರೂ ಚಿತ್ರ ನೋಡಿ ಕಲಾವಿದರನ್ನು ಪ್ರೋತ್ಸಾಹಿಸಿ.
ಕಾಡನ್ನು ಉಳಿಸಿ, ನಾಡನ್ನು ಬೆಳಸಿ.

ಚಿತ್ರದ ವಿಮರ್ಶೆ

ಸರಸ್ವತಿ ಕೆ ನಾಗರಾಜ್
ಲೇಖಕಿ ಹಿರಿಯೂರು.

ಚಿತ್ರದ ವಿಮರ್ಶೆ

ಸರಸ್ವತಿ ಕೆ ನಾಗರಾಜ್
ಲೇಖಕಿ ಹಿರಿಯೂರು.