ಕಾಡಜ್ಜಿ ಜಿಎಡಿಯಲ್ಲಿ ಮತದಾನ ಜಾಗೃತಿ

ದಾವಣಗೆರೆ.ಏ.29; ಕಾಡಜ್ಜಿ ಗ್ರಾಮದ ಸರ್ಕಾರಿ ಆಯುರ್ವೇದ ಕ್ಷೇಮ ಕೇಂದ್ರದಲ್ಲಿ ಬುಧವಾರ ಮತದಾನ ಜಾಗೃತಿ ಅಭಿಯಾನ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮದ ಸಾರ್ವಜನಿಕರಿಗೆ ಕಡ್ಡಾಯವಾಗಿ ಮತದಾನ ಮಾಡಿ, ನನ್ನ ಮತ ನನ್ನ ಹಕ್ಕು, ನನ್ನ ನಡೆ ಮತಗಟ್ಟೆ ಕಡೆ, ಓದು ವ್ಯಕ್ತಿತ್ವವನ್ನು ರೂಪಿಸುತ್ತದೆ, ಮತದಾನ ದೇಶವನ್ನು ರೂಪಿಸುತ್ತದೆ ಎಂದು ಸ್ಥಳಿಯ ಉಪ ಮುಖ್ಯ ವೈದ್ಯಾಧಿಕಾರಿ ಡಾ.ಬಿ.ಎಚ್.ದ್ಯಾವನಗೌಡರ ತಿಳಿಸಿದರು. ಈ ವೇಳೆ ಯೋಗ ತರಬೇತುದಾರ ಆನಂದ ಕುಮಾರ, ಶೀಲಾ ಮಂಜಪ್ಪ, ರೇಖಾ ಇತರರು ಇದ್ದರು.