
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ 6 :- ಎರಡು ತಿಂಗಳ ಹಿಂದಷ್ಟೇ ಬೆಳೆದ ಮೆಕ್ಕೆಜೋಳದ ಬೆಳೆ ಇನ್ನೇನು ಕಾಳುಕಟ್ಟುವ ಹಂತದಲ್ಲಿರುವಾಗ ರೈತರ ಬೆಳೆಗಳನ್ನು ಇಂದು ನಸುಕಿನ ಜಾವದಲ್ಲಿ ಕಾಡಂದಿ ದಾಳಿ ನಡೆಸಿ ಬೆಳೆ ನಾಶ ಮಾಡಿರುವ ಘಟನೆ ತಾಲೂಕಿನ ಜಂಗಮಸೋವೇನಹಳ್ಳಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಜರುಗಿದೆ.
ತಾಲೂಕಿನ ಜಂಗಮ ಸೋವೇನಹಳ್ಳಿ ಗ್ರಾಮದ ಶೆಟ್ರು ಶಂಕ್ರಿ ವೀರಪ್ಪ ಅವರ ಎರಡು ಎಕರೆ ಜಮೀನಿನಲ್ಲಿ ಎರಡು ತಿಂಗಳ ಹಿಂದಷ್ಟೇ ಬೆಳೆದ ಮೆಕ್ಕೆಜೋಳದ ಕಾಳು ಕಟ್ಟುವ ಹಂತದಲ್ಲಿರುವ ಬೆಳೆಯನ್ನು ಕಾಡಂದಿ ದಾಳಿ ನಡೆಸಿ ಇಂದು ನಸುಕಿನ ಜಾವ ಹಾಳು ಮಾಡಿದ್ದು ಅದರಂತೆ ಅಕ್ಕಪಕ್ಕದ ಜಮೀನುಗಳಾದ ಗ್ರಾಮದ ನಂದಿ ದೇವೇಂದ್ರಪ್ಪ ಗಂದೂಡಿ ಕೊಟ್ರಪ್ಪ ಬಂಡ್ರಿ ಚಿನ್ನಪ್ಪ ವಡ್ಡರಹಳ್ಳಿ ಅಜ್ಜಪ್ಪ ಕೆರನಹಳ್ಳಿ ಗಣೇಶ ಇನ್ನಿತರ ರೈತರ ಬೆಳೆಗಳನ್ನ ಸಹ ನಾಶ ಮಾಡಿದೆ ಎಂದು ಹೇಳಲಾಗುತ್ತಿದ್ದು ಕಾಡಂದಿ ದಾಳಿಯಿಂದ ಹಾಕಿದ ಬಂಡವಾಳ ದಕ್ಕದೆ ಕಾಳು ಮೊದಲೇ ಬೆಳೆ ಕಳಕೊಂಡ ರೈತರ ಗೋಳು ಮುಗಿಲು ಮುಟ್ಟಿದೆ. ಕಾಡಂದಿ ದಾಳಿಯಿಂದ ಬೆಳೆ ಕಳಕೊಂಡ ರೈತರಿಗೆ ಪರಿಹಾರ ಒದಗಿಸುವಂತೆ ಸಂಬಂದಿಸಿದ ಅರಣ್ಯ ಇಲಾಖೆಗೆ ಮನವಿ ಜಂಗಮಸೊವೇನಹಳ್ಳಿ ರೈತರು ಮನವಿ ಮಾಡಿದ್ದಾರೆ.
One attachment • Scanned by Gmail