ಕಾಟಾಪೂರ ಆಸ್ಪತ್ರೆ: ಸೆ.17ರಂದು ಉಚಿತ ಆರೋಗ್ಯ ಶಿಬಿರ

ಚಿಂಚೋಳಿ,ಸೆ.15- ಇದೆ ಬರುವ ಸೆಪ್ಟೆಂಬರ್ 17 ರಂದು ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಹುಟ್ಟು ಹಬ್ಬದ ಅಂಗವಾಗಿ ಕಾಟಾಪೂರ ಆಸ್ಪತ್ರೆ ಮತ್ತು ಅತ್ತೆಯ ಹಾಸ್ಪಿಟಲ್ ಹಾಗೂ ಸ್ಕ್ಯಾನಿಂಗ್ ಸೆಂಟರ್ ವತಿಯಿಂದ ಚಿಂಚೋಳಿ ತಾಲೂಕಿನ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಕಾಟಾಪೂರ ಆಸ್ಪತ್ರೆ ವ್ಯವಸ್ಥಾಪಕರಾದ ಶ್ರೀಹರಿ ಕಾಟಾಪೂರ ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಈ ಶಿಬಿರದಲ್ಲಿ ಸ್ತ್ರೀರೋಗ ತಜ್ಞರಿಂದ 9ನೇ ತಿಂಗಳ ಗರ್ಭಿಣಿಯರಿಗೆ ಉಚಿತ ಆರೋಗ್ಯ ತಪಾಸಣೆ, ಉಚಿತ ಸ್ಕ್ಯಾನಿಂಗ್ ಮತ್ತು ರಕ್ತ ಪರೀಕ್ಷೆ (ಊಃ% & ಖಃS) ಮಾಡಲಾಗುತ್ತದೆ. ತಾಲೂಕಿನ ಜನರು ಉಚಿತ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕೆದು ಅವರು ಹೇಳಿದರು.