ಕಾಟಾಚಾರದ ಹಂಪಿ ಉತ್ಸವ ರದ್ದು ಮಾಡಿ

ಬಳ್ಳಾರಿ, ನ.7: ಈ ತಿಂಗಳ 13ರಂದು ಒಂದು ದಿನದ ಮಟ್ಟಿಗೆ ಅದು ಕಾಟಾಚಾರದಲ್ಲಿ ಹಂಪಿ ಉತ್ಸವ ನಡೆಸುವುದನ್ನು ಬಿಟ್ಟು ರದ್ದು ಮಾಡಿ ಎಂದು ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.
ಈ ಬಗ್ಗೆ ಇಂದು ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ವೇದಿಕೆಯ ಸಂಚಾಲಕ ಕೆ.ಜಗದೀಶ್, ಕಲಾವಿದರುಗಳಾದ ಸುಬ್ಬಣ್ಣ, ಬಿ.ಪ್ರಕಾಶ್, ಹನುಮಾವದೂತ, ಮುಖಂಡರುಗಳಾದ ಕಲ್ಲುಕಂಬ ಪಂಪಾಪತಿ, ಸಿದ್ಮಲ್ ಮಂಜುನಾಥ ಮೊದಲಾದವರು ಸಭೆ ಸೇರಿ ಚರ್ಚಿಸಿದರು.
ಕಾಟಾಚಾರಕ್ಕೆ ಹಂಪಿ ಉತ್ಸವ ನಡೆಸುವುದು ಬೇಡ, ಶೀಘ್ರವಾಗಿ ಕಲಾವಿದರ ಸಭೆ ಕರೆದು ಚರ್ಚಿಸಿ ಮುಂದಿನ ದಿನಗಳಲ್ಲಾದರೂ 3 ದಿನಗಳ ಕಾಲ ವ್ಯವಸ್ಥಿತವಾಗಿ ಹಮ್ಮಿಕೊಳ್ಳಬೇಕು. ಈ ತಿಂಗಳ 13ರಂದು ನಡೆಸುವ ಉತ್ಸವಕ್ಕೆ ಹಂಪಿ ಉತ್ಸವ ಎಂದು ಕರೆಯದೆ ಬೇಕಾದರೆ ಮಹಾಮಂಗಳಾರತಿ ಉತ್ಸವ ಎಂದು ಕರೆದುಕೊಳ್ಳಿ ಎಂದು ಈ ಕುರಿತಾದ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಭೆಯ ನಂತರ ಸಲ್ಲಿಸಲಾಯಿತು.
@12bc = ಪ್ರತಿಭಟನೆ
ನಾಳೆ ಬೆಳಿಗ್ಗೆ 11.30 ಗಂಟೆಯಿಂದ ನಗರದ ನಾರಾಯಣರಾವ್ ಉದ್ಯಾನವನದಿಂದ ಗಡಿಗಿ ಚೆನ್ನಪ್ಪ ವೃತ್ತದ ವರೆಗೆ ಈ ತಿಂಗಳ 11ರ ಉತ್ಸವ ರದ್ದು ಮಾಡಬೇಕೆಂದು ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಕೆ.ಜಗದೀಶ್ ತಿಳಿಸಿದ್ದಾರೆ.