ಕಾಟಾಚಾರದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಿಂದ ಜನ ದೂರ

ಸಿಂಧನೂರ.ಜು.೧೭- ಜನರ ಸಮಸ್ಯೆಗಳನ್ನು ಹಳ್ಳಿಯ ಜನರು ಹಾಗು ಅಧಿಕಾರಿಗಳ ಎದುರಿನಲ್ಲಿ ಬಗೆಹರಿಸುವ ಸಲುವಾಗಿ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಎಂಬ ಜನ ಪರ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.
ಆರಂಭದಲ್ಲಿ ಶಾಸಕರು ಜಿಲ್ಲಾಧಿಕಾರಿಗಳು ಆಸಕ್ತಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಸಮಸ್ಯೆಗಳನ್ನು
ಸ್ಥಳಯದಲ್ಲಿಬಗೆಹರಿಸುತ್ತಿದ್ದರು ಇದರಿಂದ ಆರಂಭದಲ್ಲಿ ಕಾರ್ಯಕ್ರಮ ಜನಪ್ರಿಯತೆ ಗೊಂಡಿತ್ತು ಇತ್ತೀಚಿನ ದಿನಗಳಲ್ಲಿ ಶಾಸಕರು ಹಾಗು ಜಿಲ್ಲಾಧಿಕಾರಿಗಳು ಕಾರ್ಯಕ್ರಮಕ್ಕೆ ಆಸಕ್ತಿ ತೊರಿಸದೆ. ಬಾರದೆ ಇರುವದರಿಂದ. ಕೇವಲ ಅಧಿಕಾರಿಗಳಿಂದ ಕಾರ್ಯಕ್ರಮ ನಡೆಯುತ್ತಿರುವುದರಿಂದ ಬಂಧ ಪುಟ್ಟ ಹೊದ ಪುಟ್ಟ ಎನ್ನುವ ಕಾಟಾಚಾರದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮವಾಗಿದ್ದು.ನಮ್ಮ ಕೆಲಸ ಗಳು ಆಗುತ್ತಿಲ್ಲ ಎಂದು ಕಾರ್ಯಕ್ರಮ ಕ್ಕೆ ಬಂದ ಜನರು ಬೇಸರದ ಮಾತನಾಡುತ್ತಿರುವದು ಕಂಡುಬಂದಿದೆ.
ಪ್ರತಿ ತಿಂಗಳ ಮೂರನೆ ಶನಿವಾರ ದಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ರಾಜ್ಯಮಟ್ಟದ ಕಾರ್ಯಕ್ರಮ ವಾಗಿದ್ದು ಶಾಸಕರು ಜಿಲ್ಲಾಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜನರ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ಒದಗಿಸುತ್ತಿದ್ದರು.
ಶಾಸಕರು, ಜಿಲ್ಲಾಧಿಕಾರಿಗಳು ನಮ್ಮ ಹಳ್ಳಿಗೆ ಬರುತ್ತಾರೆಂಬ. ಸಂತೋಷದಿಂದ ಹಳ್ಳಿಯ ಜನರು ಅಂದು ಹಬ್ಬದಂತೆ ಸಂಭ್ರಮಿಸಿ ಶಾಸಕರು ಜಿಲ್ಲಾಧಿಕಾರಿಗಳನ್ನು ಅದ್ದೂರಿಯಾಗಿ ಸ್ವಾಗತಿಸುತ್ತಿದ್ದರು ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ವ್ಯಾಪಕ ಸುದ್ದಿ ಪ್ರಕಟವಾಗುತ್ತಿದ್ದು ಇದರಿಂದ ಕಾರ್ಯಕ್ರಮಕ್ಕೆ ನಿರೀಕ್ಷೆ ಮೀರಿ ಜನ ಸೇರುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಶಾಸಕರು ಹಾಗು ಜಿಲ್ಲಾಧಿಕಾರಿಗಳು ಕಾರ್ಯಕ್ರಮಕ್ಕೆ ಬರುತ್ತಿಲ್ಲ.
ಅಲ್ಲದೆ ಪತ್ರಕರ್ತರನ್ನು ಕಾರ್ಯಕ್ರಮಕ್ಕೆ ಕರೆದೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿದ ಕಾರಣ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳಲ್ಲಿ ಸುದ್ದಿ ಬಾರದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಜನ ಬರುತ್ತಿಲ್ಲ ಜನ ಬರಲಿ ಬಿಡಲಿ ನಾವು ಮಾತ್ರ ಕಾರ್ಯಕ್ರಮ ಮಾಡಲೇ ಬೇಕು ಎನ್ನುವ ಮನೋಭಾವ ನೆ ಅಧಿಕಾರಗಳಲ್ಲಿ ಬಂದು ಬಿಟ್ಟಿದೆಅಂಗವಿಕಲರು ವೃದ್ಧರು ಕಣ್ಣು ಕಾಣದವರು ಮಹಿಳೆಯರು ಸೇರಿದಂತೆ ಸಾರ್ವಜನಿಕರು ಕೆಲಸ ಬಗಸೆ ಬಿಟ್ಟು ಹಣ ಖರ್ಚಮಾಡಿ ಸಮಯ ವ್ಯರ್ಥ ಮಾಡಿಕೊಂಡು ದೂರದ ಹಳ್ಳಿ ಹಾಗು ಕ್ಯಾಂಪಗಳಿಂದ ತಾಲುಕಾ ಕಛೇರಿಗಳಿಗೆ ಬಂದು ಕಷ್ಷ ಪಟ್ಟು ತಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗುವುದನ್ನು ತಪ್ಪಿಸುವ ಸಲುವಾಗಿ ಸರ್ಕಾರ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಯೋಜನೆಯ ನ್ನು ಜಾರಿಗೆ ತಂದಿದ್ದು ತಿಂಗಳ ಮುರನೆಯ ಶನಿವಾರ ದಂದು ಶಾಸಕರು ಜಿಲ್ಲಾಧಿಕಾರಿಗಳು ಅಧಿಕಾರಗಳು ಜನರ ಸಮ್ಮುಖದಲ್ಲಿ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ದು ಈ ಯೋಜನೆಯ ಉದ್ದೇಶವಾಗಿದೆ.
ಇತ್ತೀಚಿಗೆ ಶಾಸಕರು ಜಿಲ್ಲಾಧಿಕಾರಿಗಳು ಹಳ್ಳಿಯ ಕಡೆ ಕಾರ್ಯಕ್ರಮ ಕ್ಕೆ ಬಾರದೆ ಇರುವದರಿಂದ ಸ್ಥಳೀಯ ಅಧಿಕಾರಿಗಳಿಂದ ಜನರ ಸಮಸ್ಯೆಗಳಿಗೆ ಪರಿಹಾರ ಸಿಗದೆ ಬಂದ ದಾರಿಗೆ ಸುಂಕ ಇಲ್ಲ ಎನ್ನುವಂತೆ ಮರಳಿ ಮನೆಗೆ ಹೋಗುತ್ತಿದ್ದಾರೆ ಜಿಲ್ಲಾಧಿಕಾರಿಗಳು ಶಾಸಕರು ಬಂದರೆ ಕೆಲಸ ಮಾಡಲಾರದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಜನರ ಕೆಲಸ ಮಾಡಿ ಕೊಡುತ್ತಿದ್ದರು ಜನ ಸಹ ಖುಷಿ ದಿಂದ ಹೋಗುತ್ತಿದ್ದರು ಜೊತೆಗೆ ಕಾರ್ಯಕ್ರಮ ಕ್ಕೆ ಬಂದಂತಹ ಜನ ಹಾಗು ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು.
ಶಾಸಕರು ಜಿಲ್ಲಾಧಿಕಾರಿಗಳು ಬಾರದೆ ಇರುವದರಿಂದ ಜನ ಸಹ ಬರುತ್ತಿಲ್ಲ ಕರಿಯದೆ ಪತ್ರಕರ್ತರು ಬರುತ್ತಿಲ್ಲ ಬಂದತಹ ಜನ ಹಾಗು ಅಧಿಕಾರಿಗಳಿಗೆ ಊಟದ ವ್ಯವಸ್ಥೆ ಇರುವುದಿಲ್ಲ ಹಾಗಾದರೆ ಸರ್ಕಾರ ಮಹತ್ವಾಕಾಂಕ್ಷೆ ಯೋಜನೆ ಯಶಸ್ಸಿ ಯಾಗಲು ಹೇಗೆ ಸಾಧ್ಯ ಇನ್ನು ಮುಂದೆಯಾದರು ಶಾಸಕರು ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಯೋಜನೆಯ ಯಶಸ್ಸಿಯಾಗಲು ಸಾಧ್ಯ ಇಲ್ಲದಿದ್ದರೆ ಇದೊಂದು ಕಾಟಾಚಾರದ ಕಾರ್ಯಕ್ರಮವಾಗುತ್ತದೆ.