ಕಾಟಾಚಾರಕ್ಕೆ ಜಯಂತಿ ಆಚರಣೆ: ಮಲಕಾರಿ

ಧಾರವಾಡ, ನ12: ದಾಸ ಶ್ರೇಷ್ಠ ಕನಕದಾಸರ ಹಾಗೂ ವೀರ ಮಾತೆ ಒನಕೆ ಓಬವ್ವರ ಜಯಂತಿಯನ್ನು ಕಾಟಾಚಾರಕ್ಕೆ ಮಾಡಿ ಮುಗಿಸಿದ ಜಿಲ್ಲಾಡಳಿತ ಕನಕದಾಸರ ಹಾಗೂ ಒಬ್ಬವ್ವರ ಕಾರ್ಯಕ್ರಮಗಳಿಗೆ ಗೈರಾಗುವ ಮೂಲಕ ಮಲತಾಯಿ ಧೋರಣೆಯನ್ನು ವ್ಯಕ್ತಪಡಿಸಿದ ಜನಪ್ರತಿನಿಧಿಗಳ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ಮಲಕಾರಿ ಹೇಳಿದ್ದಾರೆ.
ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಧಾರವಾಡ ನಗರದ ಆಲೂರು ವೆಂಕಟರಾಯರ ಭವನದಲ್ಲಿ ನಡೆದ ಒನಕೆ ಓಬವ್ವ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗವಹಿಸದೇ ಇರುವ ಕಾರಣ ಸಭಿಕರು ಆಕ್ರೋಶಗೊಂಡ ನಂತರ ಜಿಲ್ಲಾ ಪಂಚಾಯತ ಸಿ ಇ ಓ ಅವರು ಪಾಲ್ಗೊಂಡರು.
ಇನ್ನು ಕನಕದಾಸರ ಜಯಂತಿಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಕೇವಲ ಕಾಟಾಚಾರಕ್ಕೆ ಆಗಮಿಸಿ ಪುಷ್ಪಾರ್ಚನೆ ಮಾಡಿ ತೆರಳಿದರು ಎಂದು ಬಸವರಾಜ ಮಲಕಾರಿ ಹಾಗೂ ರಮೇಶ ನಲವಡಿ ದೂರಿದ್ದಾರೆ.