ಕಾಟಾಚಾರಕ್ಕೆ ಅಂಬೇಡ್ಕರವರ ಜಯಂತಿ :ಸಂಸ್ಥೆಯ ಪರವಾನಿಗೆ ರದ್ಧಿಗೆ ಒತ್ತಾಯ

ರಾಯಚೂರು.ಏ.೨೦-ಡಾ.ಬಿ.ಆರ್. ಅಂಬೇಡ್ಕರವರ ೧೩೦ ನೇ ಜನ್ಮ ದಿನಾಚರಣೆಯನ್ನು ಕಾಟಾಚಾರಕ್ಕಾಗಿ ಆಚರಿಸಿದ ಶಕ್ತಿನಗರದ ಡಿಎವಿ ಶಾಲೆಯ ಮುಖ್ಯಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಅಖಿಲ ಭಾರತ ಡಾ.ಬಿ.ಆರ್. ಅಂಬೇಡ್ಕರವರ ಸೈನ್ಯ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿರು.
ತಾಲೂಕಿನ ಶಕ್ತಿನಗರ ಹೋಬಳಿಯ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ವಾಸ ಅತುವಿನಲ್ಲಿರುವ ಕೆಪಿಸಿ ಮತ್ತು ಡಿಎವಿ ಶಾಲೆಯಲ್ಲಿ ಏ ೧ ರಂದು ಬೆರೆಳಣಿಕೆಯಷ್ಟು ಶಾಲಾ ಶಿಕ್ಷಕರು ಸೇರಿಕೊಂಡು ಮುಖ್ಯೋಪಾಧ್ಯಾಯರ ಅನುಪಸ್ಥಿತಿಯಲ್ಲಿ ಕಾಟಾಚಾರಕ್ಕಾಗಿ ಡಾ.ಬಿ.ಆರ್. ಅಂಬೇಡ್ಕರವರ ಜಯಂತಿಯನ್ನು ಆಚರಿಸಿದ್ದಾರೆಂದು ದೂರಿದರು.
ಏ ೧೨ ರಂದು ಯಾವುದೇ ಸರ್ಕಾರ ರಜೆ ಇಲ್ಲದಿದ್ದರು ಕ್ಷೇತ್ರ ಶಿಕ್ಷಣಾಧಿಕಾರಿ ಅನುಮತಿ ಇಲ್ಲದೇ ಸ್ಥಳೀಯ ರಜೆಯಲ್ಲಿ ಗೋಷಿಸಿ ಕಾನೂನು ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಶಿಕ್ಷಣ ಸಂಸ್ಥೆ ಮೂಲತ ಆಂದ್ರ ಪ್ರದೇಶದ ಸಂಸ್ಥೆಯಾಗಿದ್ದು ಇದರ ಸಂಸ್ಥೆಯ ಮುಖ್ಯಸ್ಥ ಬ್ರಾಹ್ಮಣ ಸಮಾಜದವರಾಗಿದ್ದು ಇವರಿಗೆ ಅಂಬೇಡ್ಕರ ಜಯಂತಿಯನ್ನು ಆಚರಿಸಲು ಇಷ್ಟವಿಲ್ಲದೆ ದಲಿತ ವಿರೋಧಿ, ಸಂವಿಧಾನದ ವಿರೋಧಿ ನೀತಿಯನ್ನು ಅನುಸರಿದುತ್ತಿದ್ದಾರೆಂದು ದೂರಿದರು.
ಕೂಡಲೇ ಈ ಶಿಕ್ಷಣ ಸಂಸ್ಥೆಯ ಪರವಾನಿಗೆ ರದ್ದು ಪಡಿಸಿ ಸಂಸ್ಥೆಯ ಮುಖ್ಯಸ್ಥನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಅಂಜಿನೇಯ, ದೇವದಾಸ, ಬಸವರಾಜ ಸೇರಿದತೆ ಇನ್ನಿತರರು ಉಪಸ್ಥಿತರಿದ್ದರು.