ಕಾಟನ್ ಮಿಲ್ ಗೆ ಬೆಂಕಿ :ಲಕ್ಷಾಂತರ ರೂಪಾಯಿ ಹತ್ತಿ ಸುಟ್ಟು ಭಸ್ಮ

ರಾಯಚೂರು, ಏ 04- ನಗರದ ಮಂಚಲಪುರ ರಸ್ತೆಯಲ್ಲಿ ಬರುವ ಜಿನ್ನಿಂಗ್ ಫ್ಯಾಕ್ಟರಿ ಮತ್ತು ಕಾಟನ್ ಪ್ರೆಸಿಂಗ್ ಮಿಲ್ ಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಹತ್ತಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ರಾಯಚೂರು ನಗರದಲ್ಲಿರುವ ಮಂಚಲಾಪುರ ರಸ್ತೆಯಲ್ಲಿ ಬರುವಂತಹ ರಾಜೇಂದ್ರ ಆಗ್ರೋ ಇಂಡಸ್ಟ್ರಿಸ್ ಕಾಟನ್ ಜಿನ್ನಿಂಗ್ ಮಿಲ್ ಮತ್ತು ಪ್ರೆಸಿಂಗ್ ಫ್ಯಾಕ್ಟರಿ ಒಳಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ, ರೈತರಿಂದ ಖರೀದಿಸಿದ್ದ ಲಕ್ಷಾಂತರ ರೂಪಾಯಿಯ ಹತ್ತಿ ಸುಟ್ಟು ಹೋಗಿದೆ.ಈ ಘಟನೆ ಬಗ್ಗೆ ಅಗ್ನಿ ಶಾಮಕ ಠಾಣೆಗೆ ಕರೇ ಮಾಡಿ ತಿಳಿಸಿದಾಗ ತಕ್ಷಣವೆ ಬಂದು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಬಗ್ಗೆ ನಗರದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.
ಪ್ರಾಥಮಿಕ ಹಂತದ ತನಿಖೆಯಲ್ಲಿ ಮಿಲ್ ಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎಂದು ತಿಳಿದು ಬಂದಿದೆ.