ಕಾಜಿರಂಗ ಉದ್ಯಾನವನದಲ್ಲಿ ಮೋದಿ ಸಫಾರಿ

ಗುವಹಟಿ,ಮಾ.೯- ಅಸ್ಸಾಂ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಚೊಚ್ಚಲ ಭೇಟಿಯ ಸಂದರ್ಭದಲ್ಲಿ ಆನೆ ಮತ್ತು ಜೀಪ್ ಸಫಾರಿ ನಡೆಸಿ ಪ್ರಾಣಿಗಳು ನೋಡಿ ಆನಂದಿಸಿದರು.ನಂತರ ರಾಷ್ಟ್ರೀಯ ಉದ್ಯಾನವನದ ಸೆಂಟ್ರಲ್ ಕೊಹೊರಾ ವ್ಯಾಪ್ತಿಯಲ್ಲಿರುವ ಮಿಹಿಮುಖ್ ಪ್ರದೇಶದಲ್ಲಿ ಜೀಪ್ ಸಫಾರಿ ನಡೆಸಿದರು ಎಂದು ಪ್ರಧಾನಮಂತ್ರಿಗಳ ಕಾರ್ಯಾಲಯ ತಿಳಿಸಿದೆ.೧೯೫೭ ರ ನಂತರ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ನಂತರ ಮೊದಲ ಪ್ರಧಾನಿ ಭೇಟಿಯಾಗಿದೆ ಇದಾಗಿದೆ. ಅಸ್ಸಾಂ ಮುಖ್ಯಮಂತ್ರಿ ಕಚೇರಿಯ ಪ್ರಕಾರ ೧೯೫೭ ರಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂದು ಹೇಳಿದ್ದಾರೆ.ಪ್ರಧಾನಿ ಅವರೊಂದಿಗೆ ಉದ್ಯಾನದ ನಿರ್ದೇಶಕಿ ಸೋನಾಲಿ ಘೋಷ್ ಮತ್ತು ಇತರ ಹಿರಿಯ ಅರಣ್ಯ ಅಧಿಕಾರಿಗಳು ಇದ್ದರು.

೧೮ ಸಾವಿರ ಕೋಟಿ ಕಾಮಗಾರಿಗೆ ಚಾಲನೆ

ಪ್ರಧಾನಿ ಮೋದಿ ಎರಡು ದಿನಗಳ ಅಸ್ಸಾಂ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ರೂ.೧೮,೦೦೦ ಕೋಟಿ ಮೌಲ್ಯದ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿದ್ದಾರೆ.ಈ ಯೋಜನೆಗಳನ್ನು ಅಸ್ಸಾಂ ಮತ್ತು ಕೇಂದ್ರ ಸರ್ಕಾರಗಳು ಕೈಗೊಳ್ಳುತ್ತಿವೆ. ಮೊದಲು ತೇಜ್‌ಪುರ ವಿಮಾನ ನಿಲ್ದಾಣಕ್ಕೆ ಬಂದಿಳಿದರು, ಅಲ್ಲಿ ಅವರನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸ್ವಾಗತಿಸಿದರು.ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಮೋದಿಪರಿವಾರ ಅಸ್ಸಾಂ ನಮ್ಮ ಪ್ರೀತಿಯ ಪ್ರಧಾನ ಮಂತ್ರಿನರೇಂದ್ರಮೋದಿ ಅವರನ್ನು ತಾಯಿ ಕಾಮಾಖ್ಯ ಮತ್ತು ಮಹಾಪುರುಷ ಶಂಕರದೇವರ ಭೂಮಿಗೆ ಸ್ವಾಗತಿಸಲು ರೋಮಾಂಚನಗೊಂಡಿದೆ” ಎಂದು ಹೇಳಿದ್ದಾರೆ.ತೇಜ್‌ಪುರದಿಂದ ಕಾಜಿರಂಗ ಇರುವ ಗೋಲಾಘಾಟ್ ಜಿಲ್ಲೆಗೆ ಹೆಲಿಕಾಪ್ಟರ್ ಹತ್ತಿದ ಮೋದಿ, ಯುನೆಸ್ಕೋ ವಿಶ್ವ ಪರಂಪರೆಯ ತಾಣದಲ್ಲಿ ರಾತ್ರಿ ಕಳೆದರು ಎಂದು ತಿಳಿಸಿದ್ದಾರೆ.