ಕಾಗ್ರೆಸ್‌ನಿಂದ ಹಿಂದುಳಿದ ವರ್ಗದವರ ಕಡೆಗಣನೆ : ಈಶ್ವರಪ್ಪ

ಸಿಂಧನೂರು.ನ.೨೯ : ದೇಶದಲ್ಲಿ ೭೦ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ಹಿಂದುಳಿದ ವರ್ಗಗಳ ಹೆಸರು ಹೇಳಿ ರಾಜಕೀಯ ಮಾಡಿದೆ ಹೊರತು ಅವರನ್ನು ಮುಖ್ಯವಾಹನಿಗೆ ತಂದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಸಚಿವ ಕೆಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಹಿಂದುಳಿದ ವರ್ಗಗಳ ಮೋರ್ಚಾ ರಾಯಚೂರುಕೆ ಪ್ಪಳ, ಬಳ್ಳಾರಿ ಜಿಲ್ಲೆಗಳ ಹಿಂದುಳಿದ ವರ್ಗಗಳ ಪ್ರಮುಖರ ಸಭೆ ಉದ್ಘಾಟಿಸಿ ಮಾತನಾಡಿದ ಅವರು ೭೦ವರ್ಷ ಅಧಿಕಾರ ನಡೆಸಿದ ಕಾಂಗ್ರೆಸ್ ಪಕ್ಷ ೭೦ವರ್ಷದಲ್ಲಿ ೨೦ಕೋಟಿ ಮನೆಗಳ ಪೈಕಿ ೨ಕೋಟಿ ಮನೆಗಳಿಗೆ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸಿದ್ದು ಬಿಜೆಪಿ ಪಕ್ಷ ಪ್ರಧಾನಿ ನರೇಂದ್ರ ಮೋದಿ ೭ವರ್ಷಗಳಲ್ಲಿ ೭ಕೋಟಿ ಮನೆಗಳಿಗೆ ನಲ್ಲಿಗಳ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಿದೆ. ಅದು ಮನೆ ಮನೆಗೆ ಗಂಗೆ ಯೋಜನೆ ಮೂಲಕ ಎಂದರು.
ಬಿಜೆಪಿ ಪಕ್ಷ ಮುಂದುವರೆದ ಪಕ್ಷ ಹಿಂದುಳಿದ ವರ್ಗಗಳ ವಿರೋಧಿಯಾಗಿದೆ ಎಂದು ಕಾಂಗ್ರೆಸ್ ಪಕ್ಷ ಹಾಗೂ ಸಿದ್ದರಾಮಯ್ಯ ಅವರನ್ನು ಬಳಿಸಿಕೊಂಡು ಅಧಿಕಾರ ನಡೆಸುತ್ತಾ ಅವರನ್ನು ಕಡೆಗಣಿಸಿದ್ದಾರೆ ಹೊರತು ಅವರಿಗೆ ಯಾವುದೇ ಅಭಿವೃದ್ಧಿ ಮಾಡಿಲ್ಲ ಮತ್ತು ಮುಖ್ಯವಾಹಿನಿಗೆ ತಂದಿಲ್ಲ. ಬಿಜೆಪಿ ಪಕ್ಷ ಹಿಂದುಳಿದ ವರ್ಗಗಳನ್ನು ಸಂಘಟನೆ ಮಾಡುವ ಮೂಲಕ ಅವರಿಗೆ ಸಾಮಾಜಿಕ, ಶೈಕ್ಷಣಿ, ಆರ್ಥಿಕ ರಾಜಕೀಯ ಸ್ಥಾನಮಾನಗಳನ್ನು ಕೊಡಿಸುವ ನಿಟ್ಟಿನಲ್ಲಿ ರಾಜ್ಯಾಧ್ಯಂತ ಒಬಿಸಿ ಘಟಕಗಳ ಪದಾಧಿಕಾರಿಗಳ ಸಭೆ ನಡೆಸಿ ಡಿಸೆಂಬರ್ ೧೨ ಬೆಂಗಳೂರಿನ ಅರಮನೆ ಪ್ಯಾಲೇಸ್‌ನಲ್ಲಿ ಹಿಂದುಳಿದ ವರ್ಗಗಳ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಸುಮಾರು ೪೦ಕ್ಕು ಮೇಲ್ಪಟ್ಟು ಎಸ್‌ಇ ಮತ್ತು ಎಸ್‌ಟಿ ಹಾಗೂ ಹಿಂದುಳಿದ ವರ್ಗಗಳ ಜನತೆ ಸಚಿವ ಸ್ಥಾನ ನೀಡಿದ್ದಾರೆ. ಆದರೆ ಕಾಂಗ್ರೆಸ್ ಯಾಕೆ ಸಚಿವ ಸಂಪುಟದಲ್ಲಿ ಸೇರಿಸಿಕೊಂಡಿಲ್ಲ ಇನ್ನು ಮುಂದೆ ಹಿಂದುಳಿದ ವರ್ಗಗಳ ಜನಾಂಗದವರು ಕಾಂಗ್ರೆಸ್‌ನ್ನು ತೀರಸ್ಕರಿಸಿ ಬಿಜೆಪಿಯನ್ನು ಬೆಂಬಲಿಸಿದರೆ ಭವಿಷ್ಯದಲ್ಲಿ ನಿಮಗೆ ಸೂಕ್ತ ಸ್ಥಾನಮಾನಗಳು ದೊರಕಿ ಇತರರಂತೆ ಸಾಮಾಜದಲ್ಲಿ ಮುಖ್ಯವಾಹಿನಿಗೆ ಬರಬಹುದು.
ಬೆಂಗಳೂರಿನಲ್ಲಿ ನಡೆಯುವ ಒಬಿಸಿ ಜಾಗೃತಿ ಸಮಾವೇಶದ ಅಂಗವಾಇ ರಾಜ್ಯಾದ್ಯಂತ ಸಂಚರಿಸಿ ಒಬಿಸಿ ಮೋರ್ಚಾಗಳ ಮುಖಂಡರುಗಳು ಸಭೆ ನಡೆಸಿ ಬೆಂಗಳೂರಿಗೆ ಬರುವಂತೆ ಮನವಿ ಮಾಡಲಾಗುತ್ತಿದ್ದು ಈ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾರದಿರುವುದು ಬೇಸರ ತರಿಸಿದೆ, ಬೆಂಗಳೂರು ಸಮಾವೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಬಿಜೆಪಿ ಒಬಿಸಿ ರಾಜ್ಯಾಧ್ಯಕ್ಷ, ಮಾಜಿ ಶಾಸಕ ನಲಾ ನರೇಂದ್ರ ಬಾಬು ಕೋರಿದರು.
ಮಾಜಿ ಸಂಸದ ಕೆ. ವೀರೂಪಾಕ್ಷಪ್ಪ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೊಲ್ಲಾ ಶೇಷಗಿರಿ ರಾವ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವೀರೂಪಾಪುರ, ಮಾಜಿ ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮೀ, ಮಾಜಿ ಸದಸ್ಯರಾದ ಶಿವನಗೌಡ ಗೋರೆಬಾಳ, ಎಂ. ದೊಡ್ಡಬಸವರಾಜ, ಬಿಜೆಪಿ ತಾಲೂಕಾಧ್ಯಕ್ಷ ಹನುಮೇಶ ಸಾಲಗುಂದಾ, ಉಮೇಶ, ತಿಮ್ಮಪ್ಪ, ವೆಂಕಟೇಶ, ಶಿವಪ್ರಕಾಶ ಸೇರಿದಂತೆ ಅನೇಕರು ಇದ್ದರು.