
ಸಂಜೆ ವಾಣಿ ವಾರ್ತೆ
ಕೊಟ್ಟೂರು, ಮಾ.04: ನೂತನ ವಿಜಯನಗರ ಜಿಲ್ಲೆಯಲ್ಲಿ ಎರಡು ಕುರುಬ ಸಂಘಗಳು ಅಸ್ವಿತ್ವಕ್ಕೆ ಬಂದಿದ್ದು, ಸಮಾಜದ ಹಿತದೃಷ್ಟಿಯಿಂದ ಸಮಂಜಸವಲ್ಲ. ಸೂಕ್ತವೂ ಅಲ್ಲ. ಕಾಗಿನೆಲೆ ಪೀಠದ ಜಗದ್ಗುರು ನಿರಂಜನಾನಂದ ಪುರಿ ಸ್ವಾಮಿಗಳ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಒಂದೇ ಸಂಘ ಇರುವುದಕ್ಕೆ ನಮ್ಮ ಸಹಮತವಿದೆ ಎಂದು ವಿಜಯನಗರ ಜಿಲ್ಲಾ ಕುರುಬರ ಸಂಘದ ನೂತನ ಅಧ್ಯಕ್ಷ ಎಲ್. ಸಿದ್ದನಗೌಡ ಹೇಳಿದರು.
ತಾಲೂಕಿನ ಗಾಣಗಟ್ಟೆ ಗ್ರಾಮದ ಮಾಯಮ್ಮ ದೇವಸ್ಥಾನದಲ್ಲಿ ವಿಜಯನಗರ ಜಿಲ್ಲಾ ಕುರುಬರ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಎರಡು ಕುರುಬ ಸಂಘಗಳಿರುವುದರಿಂದ ಸಮಾಜಕ್ಕೆ ಒಳಿತ್ತಲ್ಲ, ಇದರಿಂದ ನಮ್ಮನಮ್ಮಲ್ಲಿ ಒಡುಕು ಮೂಡುತ್ತದೆಯೇ ವಿನಾಹ ಅಭಿವೃದ್ದಿಯಾಗುವುದಿಲ್ಲ. ಆದ್ದರಿಂದ ಕಾಗಿನೆಲೆ ಜಗದ್ಗುರುಗಳು ಎರಡು ಸಂಘವನ್ನು ಒಂದುಗೂಡಿಸಲು ಮುಂದಾಗಬೇಕು ಎಂದು ಶ್ರೀಗಳಲ್ಲಿ ಮನವಿ ಮಾಡಿದರು.
ಕರ್ನಾಟಕ ರಾಜ್ಯ ಕುರುಬ ಸಂಘದ ನಿರ್ದೇಶಕ ಕಾವಲಿ ಹನುಮಂತಪ್ಪ ಮಾತಾನಾಡಿದ ನಮ್ಮಲ್ಲಿನ ಒಗ್ಗಟ್ಟು ಚದುರಿಹೋಗಿ ಎರಡು ಸಂಘ ಆಗುವುದರಿಂದ ಸಮಾಜಕ್ಕೆ ನಷ್ಟವಾಗುತ್ತದೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಆದ್ದರಿಂದ ಕಾಗಿನೆಲೆ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಗಳ ಸಂದೇಶಕ್ಕೆ ಎರಡು ಸಂಘಗಳು ಬದ್ದವಾಗಿ ನಡೆದುಕೊಂಡು ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಎಂದರು.
ಸಂಘದ ಕಾರ್ಯಾಧ್ಯಕ್ಷ ಪರಮೇಶ್ವರಪ್ಪ, ಕಾಗಿನೆಲೆ ಕನಕ ಪೀಠದ ಧರ್ಮದರ್ಶಿ ಗಾದಿಗನೂರು ಹಾಲಪ್ಪ, ಮಜ್ಜಿಗೆ ಬಸವರಾಜ್, ಮೂಗಪ್ಪ ಮುಂತಾದವರು ಮಾತನಾಡಿದರು. ಹಡಗಲಿ ತಾಲೂಕು ಕುರುಬ ಸಂಘದ ಅಧ್ಯಕ್ಷ ಬೀರಪ್ಪ, ಕೊಟ್ಟೂರು ತಾಲೂಕು ಕುರುಬ ಸಂಘದ ಅಧ್ಯಕ್ಷ ಮೂಗಪ್ಪ ಸೇರಿದಂತೆ ವಿಜಯನಗರ ಜಿಲ್ಲೆಯ ಎಲ್ಲಾ ತಾಲೂಕುಗಳಿಂದ ಸುಮಾರು ಮೂರು ನೂರು ಜನರು ಭಾಗವಹಿಸಿದ್ದರು.
ಗಾಣಗಟ್ಟೆ ಗ್ರಾಮದಲ್ಲಿ ಶುಕ್ರವಾರ ನೂತನ ವಿಜಯನಗರ ಜಿಲ್ಲೆ ಕುರುಬರ ಸಂಘದ ಅಧ್ಯಕ್ಷ ಎಲ್. ಸಿದ್ದನಗೌಡ ನೇತೃತ್ವದಲ್ಲಿ ಸಂಘದ ೩೭ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದಾಗ ಶ್ರೀಪೀಠದ ಧರ್ಮದರ್ಶಿ ಗಾದಿಗನೂರು ಹಾಲಪ್ಪ, ರಾಜ್ಯ ಕುರುಬರ ಸಂಘದ ನಿರ್ದೇಶಕರಾದ ಕಾವಲಿ ಹನುಮಂತಪ್ಪ, ಮರಿ ರಾಮಪ್ಪ. ಪರಮೇಶ್ವರಪ್ಪ ಮುಂತಾದವರಿದ್ದರು.
ನಾವು ವಿಜಯನಗರ ಜಿಲ್ಲೆ ಪ್ರತಿ ತಾಲೂಕಿಗೆ ಹೋಗಿ ಅಲ್ಲಿನ ಜನರನ್ನು ಸಂಪರ್ಕಿಸಿ ಜಿಲ್ಲಾ ಕುರುಬರ ಸಂಘ ವಿಜಯನಗರ ಜಿಲ್ಲೆವನ್ನು ಸ್ಥಾಪಿಸಿ, ಪದಾಧಿಕಾರಿಗಳನ್ನು ನೇಮಕಮಾಡಿ ನನ್ನನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಜಿಲ್ಲೆಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಸದಸ್ಯರನ್ನು ನೇಮಕಮಾಡಿ ಎರಡು ವರ್ಷದ ನಂತರ ಜಿಲ್ಲಾಧ್ಯಕ್ಷರ ಚುನಾವಣೆ ಮಾಡಿ ಅಧ್ಯಕ್ಷರನ್ನು ಆಯ್ಕೆಮಾಡಲಾಗುತ್ತದೆ.
ಜಿಲ್ಲೆಯಲ್ಲಿ ಎರಡು ಕುರುಬ ಸಂಘವಿರುವುದು ನಮಗೂ ಇಷ್ಟವಿಲ್ಲ. ಸಮಾಜವೂ ಇದನ್ನು ಸ್ವೀಕರಿಸುವುದಿಲ್ಲ. ಸಮಾಜದ ಒಡೆಯುವುದು ನಮ್ಮ ಸಂಘಕ್ಕೂ ಬೇಕಾಗಿಲ್ಲ. ಕಾಗಿನೆಲೆ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದು ಒಮ್ಮತದ ಪದಾಧಿಕಾರಿಗಳು ಮತ್ತು ಅಧ್ಯಕ್ಷರ ಆಯ್ಕೆ ಮಾಡಿದರೆ ಅದಕ್ಕೆ ನಾವು ಸಮ್ಮತಿಸಿ ಒಪ್ಪುತ್ತೇವೆ.
ನೂತನ ವಿಜಯನಗರ ಜಿಲ್ಲೆಗೆ ಕಾಗಿನೆಲೆ ಪೀಠದ ಧರ್ಮದರ್ಶಿಯಾಗಿ ಕುರಿ ಶಿವಮೂರ್ತಿ ಅವರನ್ನು ಶ್ರೀಗಳು ನೇಮಕಮಾಡಬೇಕೆಂಬುದು ನಮ್ಮೆಲ್ಲರ ಅನಿಸಿಕೆ, ಒಮ್ಮತಾಭಿಪ್ರಾಯ ಹಾಗೂ ನಮ್ಮ ಸಂಘದ ನಿರ್ಧಾರ.
ಜಿಲ್ಲೆಯ ಸಮಾಜದ ಪ್ರಮುಖರನ್ನು ಸಂಪರ್ಕಿಸದೆ ಏಕಪಕ್ಷೀಯವಾಗಿ ಕೇವಲ ಬೆರಳೆಣಿಯಷ್ಟು ಜನ ಬೆಂಗಳೂರಿನ ಕುರುಬ ಸಂಘದಲ್ಲಿ ಅಧ್ಯಕ್ಷರನ್ನು ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದರಿಂದ ಗೊಂದಲದಿಂದಾಗಿ ಜಿಲ್ಲೆಯಲ್ಲಿ ಎರಡು ಕುರುಬ ಸಂಘಗಳು ಹುಟ್ಟಿಕೊಂಡವು.
ಅಯ್ಯಾಳಿ ತಿಮ್ಮಪ್ಪ. ಅಧ್ಯಕ್ಷರು.
ಜಿಲ್ಲಾ ಕುರುಬರ ಸಂಘ ವಿಜಯನಗರ ಹೊಸಪೇಟೆ.