ಕಾಕರ್ಲತೋಟದ ಬಡ ಜನತೆಗೆ ಆಹಾರ ದಿನಸಿ ಕಿಟ್ ವಿತರಣೆ

ಬಳ್ಳಾರಿ, ಮೇ.28: ಕೋವಿಡ್ ನಿಯಂತ್ರಣದ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಒಳಗಾಗಿರುವ ನಗರ್ ಕಾಕರ್ಲ ತೋಟದ ಹನುಮಾನ್ ನಗರದ ಒಂದು‌ ನೂರು ಬಡ ಕುಟುಂಬಗಳಿಗೆ ಇಂದು ಜೈನ್ ಸಂಘಟನೆ ಜಿತು ನಿಂದ ಆಹಾರ ಧಾನ್ಯ ದಿನಸಿಯ ಕಿಟ್ ಗಳನ್ನು ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ, ಡಿವೈಎಸ್ಪಿ ರಮೇಶ್ ಅವರು ವಿತರಿಸಿದರು.
ನಿನ್ನೆ ದಿನ ಸಂಜೆ ರೆಡ್ ಕ್ರಾಸ್ ನಿಂದ ಸಂಕಷ್ಟದಲ್ಲಿರುವವರ ಬಗ್ಗೆ ಸರ್ವೇ ನಡೆಸಿ. ಅವರಿಗೆ ಟೋಕನ್ ನೀಡಿ ಇಂದು ಕಿಟ್ ವಿತರಿಸಲಾಯಿತು.
ಕಿಟ್ ನಲ್ಲಿ ಅಕ್ಕಿ, ಬೇಳೆ, ಅವಲಕ್ಕಿ, ಉಪ್ಪಿಟ್ಟಿನ ರವ, ಅಡುಗೆ ಎಣ್ಣೆ ಸೇರಿದಂತೆ 15 ಕಿಲೋದ ವಿವಿಧ ಸಾಮಾಗ್ರಿ ಇದ್ದವು.
ಈ ಸಂದರ್ಭದಲ್ಲಿ ಜಿತು ನ ಮುಖಂಡ ಭರತ್ ಜೈನ್, ರೆಡ್ ಕ್ರಾಸ್ ನ ಷಕೀಬ್ ಮೊದಲಾದವರು ಇದ್ದರು.