ಕಾಂಬೋಡಿಯಾದಲ್ಲಿ ೬೦ ಮಂದಿ ಭಾರತೀಯರ ರಕ್ಷಣೆ

ನವದೆಹಲಿ.ಮೇ.೨೪- ಉದ್ಯೋಗ ಪಡೆಯುವ ಆಸೆಯಲ್ಲಿ ಕಾಂಬೋಡಿಯಾದಲ್ಲಿ ಮೋಸದ ಜಾಲಕ್ಕೆ ಸಿಲುಕಿದ್ದ ೬೦ ಮಂದಿ ಭಾರತೀಯರನ್ನ
ಇಲ್ಲಿನ ಭಾರತೀಯ ರಾಯಭಾರ ಕಚೇರಿ ರಕ್ಷಣೆ ಮಾಡಿದೆ. ೬೦ ಮಂದಿಯ ಮೊದಲ ತಂಡ ಭಾರತಕ್ಕೆ ಮರಳಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ.
ಉದ್ಯೋಗ ಅರಸಿ ಭಾರತೀಯ ಯುವಕರು ಕಾಂಬೋಡಿಯಾಗೆ ತೆರೆಳಿದ್ದರು. ಕಾಂಬೋಡಿಯಾಗೆ ತೆರೆಳಿದ ನಂತರ ಈ ಯುವಕರಿಗೆ ಮೋಸದ
ಜಾಲಕ್ಕೆ ಸಿಲುಕಿರುವುದು ಗೊತ್ತಾಗಿದೆ.
ಕಾಂಬೋಡಿಯಾ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಸಿಹಾನೌಕ್ವಿಲ್ಲೆನಲ್ಲಿ ಭಾರತೀಯ ರಾಯಭಾರಿ ಅಧಿಕಾರಿಗಳು ಜಿನ್‌ಬೆ-೪ ಎಂಬ ಸ್ಥಳದಲ್ಲಿ
ಈ ಯುವಕರನ್ನ ರಕ್ಷಣೆ ಮಾಡಿದ್ದಾರೆ.
ಇನ್ನು ಮುಂದೆ ಉದ್ಯೋಗಕ್ಕಾಗಿ ಕಾಂಬೋಡಿಯಾಕ್ಕೆ ಹೋಗುವ ಭಾರತೀಯರು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮೋದಿಸಿದ ಅಧಿಕೃತ ಏಜೆಂಟರ
ಮೂಲಕ ಮಾತ್ರವೇ ಉದ್ಯೋಗ ಪಡೆದುಕೊಳ್ಳಬೇಕು. ಕಾಂಬೋಡಿಯಾದಲ್ಲಿ ಉದ್ಯೋಗ ಹುಡುಕುತ್ತಿರುವ ಭಾರತೀಯರು ಅನಧಿಕೃತ ಏಜೆಂಟ್‌ಗಳಿಂದ ಮೋಸ ಹೋಗದಂತೆ ಸಲಹೆ ನೀಡಿದೆ.
ವಿದೇಶದಲ್ಲಿರುವ ಭಾರತೀಯರ ರಕ್ಷಣೆಗೆ ನಮ್ಮ ಅಧಿಕಾರಿಗಳು ಸದಾ ಬದ್ಧರಾಗಿರುತ್ತಾರೆ. ಸದ್ಯ ಮೋಸದ ಜಾಲಕ್ಕೆ ಸಿಲುಕಿದ್ದ ೬೦ ಭಾರತೀಯರನ್ನ ರಕ್ಷಣೆ ಮಾಡಿದ್ದೇವೆ.
ಅವರಿಂದು ಸ್ವದೇಶಕ್ಕೆ ಮರಳಿದ್ದಾರೆ. ನಮ್ಮ ಅಧಿಕಾರಿಗಳ ತಂಡಕ್ಕೆ ನಾವು ಧನ್ಯವಾದ ಹೇಳುತ್ತೇವೆ ಎಂದು ಕಾಂಬೋಡಿಯಾದಲ್ಲಿರುವ ಭಾರತೀಯ ರಾಯಭಾರ ಕಚೇರಿ
ಎಕ್ಸ್‌ನಲ್ಲಿ ತಿಳಿಸಿದೆ.