ಕಾಂಪೆÇೀಂಡ್ ನಿರ್ಮಿಸುವ ಕಾಮಗಾರಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಜಿಲ್ಲಾಧಿಕಾರಿ ಭೂಮಿಪೂಜೆ

ಸಂಜೆವಾಣಿ ವಾರ್ತೆ
ಮೇಲುಕೋಟೆ ಡಿ.11:- ಚೆಲುವನಾರಾಯಣನ ಭಕ್ತರಿಗಾಗಿ ನಿರ್ಮಿಸಿರುವ ಅನ್ನದಾನ ಭವನಕ್ಕೆ ಕಾಂಪೆÇೀಂಡ್ ನಿರ್ಮಿಸುವ ಕಾಮಗಾರಿಗೆ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮತ್ತು ಜಿಲ್ಲಾಧಿಕಾರಿ ಡಾ.ಕುಮಾರ್ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮುಂಬರುವ ವೈರಮುಡಿ ಉತ್ಸವದ ವೇಳೆಗೆ ಅನ್ನದಾನ ಭವನವನ್ನು ವ್ಯವಸ್ಥಿತವಾಗಿ ಆರಂಭಿಸಲಾಗುತ್ತದೆ. ಮೇಲುಕೋಟೆಯಲ್ಲಿ ಭಕ್ತರಿಗೆ ಮೂಲಭೂತ ಸೌಕರ್ಯಸಹ ಕಲ್ಪಿಸಿ..ವೈರಮುಡಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಯೋಜನಾವರದಿಯಲ್ಲಿರುವಂತೆ ಅನ್ನದಾನ ಭವನದ ಕಾಂಪೆÇೀಂಡ್ ಕಾಮಗಾರಿ ಮಾಡಿ ಅಪರ ಜಿಲ್ಲಾಧಿಕಾರಿಗಳು ಪರಿಶೀಲಿಸಿ ನಿರ್ದೇಶಿಸಿರುವಂತೆ ಕಾಂಪೆÇೀಂಡ್ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಮಾಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ದಂಪತಿಸಮೇತ ಭಾಗವಹಿಸಿ ಭೂಮಿಪೂಜೆ ನೆರವೇರಿಸಿದ ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ ಮೇಲುಕೋಟೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಮಾಡಲು ಜಿಲ್ಲಾಡಳಿತ ಯೋಜಿಸಿ ನೀಲನಕ್ಷೆ ತಯಾರಿಸುತ್ತಿದೆ..ಮೇಲುಕೋಟೆ ದೇವಾಲಯದ ಆಸ್ತಿ ಸಂರಕ್ಷಣೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ.ಅನ್ನದಾನ ಭವನವನ್ನು ಅಪರ ಜಿಲ್ಲಾ ಧಿಕಾರಿ ಡಾ.ಹೆಚ್.ಎಲ್ ನಾಗರಾಜು ಪರಿಶೀಲಿಸಿ ಕಾಂಪೆÇೀಂಡ್ ನಿರ್ಮಿಸಲು ನೀಲನಕ್ಷೆ ತಯಾರಿಸಿದ್ದಾರೆ ಅದರಂತೆ ಕಾಂಪೆÇೀಂಡ್ ನಿರ್ಮಾಣಮಾಡಿ ಎಂದು ಸೂಚಿಸಿದರು. ಈ ವೇಳೆ ಇನ್ ದೇವಾಲಯದ ಇಒ ಮಹೇಶ್. ಇನ್ಪೋಸಿಸ್ ಮ್ಯಾನೇಜರ್ ಡಾ.ಪ್ರೀತಿ ಮಹದೇವ್ , ಈಶ ಮುರುಳಿ ,ಗ್ರಾ.ಪಂ ಮಾಜಿ ಅಧ್ಯಕ್ಷೆ ಜಯಲಕ್ಷ್ಮಿ , ನ್ಯಾಮನಹಳ್ಳಿ ಶಿವರಾಮೇಗೌಡ. ಮಾಯಣ್ಣ , ಮೇಲುಕೋಟೆ ವಿಎಸ್ ಎಸ್.ಎನ್. ಅಧ್ಯಕ್ಷ ಯೋಗನರಸಿಂಹಗೌಡ , ಹೇಮಂತ್ , ನಾಗೇಗೌಡ . ಲಕ್ಷ್ಮೀನರಸಿಂಹ ಗೌಡ , ಯೋಗಣ್ಣ ಮತ್ತು ರಾಮಣ್ಣ , ಕದಲಗೆರೆ ನವೀನ್ ಇತರರು ಭಾಗವಹಿಸಿದ್ದರು.