ಕಾಂತಾ ಕಾಲೋನಿಯಲ್ಲಿ ಸರಣಿಗಳ್ಳತನ: 18 ತೊಲೆ ಚಿನ್ನ ಕಳವು

ಕಲಬುರಗಿ,ಮೇ.2-ನಗರದ ಕಾಂತಾ ಕಾಲೋನಿಯಲ್ಲಿ ಕಳ್ಳರು ಮೂರು ಮನೆಗಳ ಬೀಗ ಮುರಿದು 18 ತೊಲೆ ಚಿನ್ನ ಕಳವು ಮಾಡಿದ್ದಾರೆ.
ಕಂಡಕ್ಟರ್, ನಿವೃತ್ತ ಕಂಡಕ್ಟರ್ ಮತ್ತು ಕಾರ್ಮಿಕ ಅಧಿಕಾರಿಯೊಬ್ಬರ ಮನೆ ಬೀಗ ಮುರಿದು ಚಿನ್ನ ಕಳವು ಮಾಡಿಕೊಂಡು ಹೋಗಲಾಗಿದೆ.
ಸುದ್ದಿ ತಿಳಿದು ಅಶೋಕನಗರ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.