ಕಾಂತಾರ ಬಳಿಕ ಬನಾರಸ್ ಕಾತುರ ಹೆಚ್ಚಳ

ಯುವ ನಟ ಝೈದ್ ಖಾನ್ ನಾಯಕನಾಗಿ ಬೆಳ್ಳಿ ತೆರೆಗೆ ಪ್ರವೇಶ ಮಾಡುತ್ತಿರುವ ” ಬನಾರಸ್” ಚಿತ್ರದ ಬಗ್ಗೆ ಕಾತುರ ಹೆಚ್ಚಾಗಿದ್ದು ರಾಜ್ಯದ ಜೊತೆಗೆ ಗಡಿಯಾಚೆಯೂ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ

ಹೊಸ ನಟ ಎನ್ನುವುದಕ್ಕಿಂತ ಹೆಚ್ಚಾಗಿ‌ ಉತ್ತಮ ಕಥೆ ,ಹೊಸತನದ ನಿರೂಪಣೆ ಇರುವ ಚಿತ್ರಕ್ಕೆ ಜಯತೀರ್ಥ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಝೈದ್ ಗೆ ನಾಯಕಿಯಾಗಿ ಸೋನಲ್ ಮಾಂಟೋರಿಯಾ ಕಾಣಿಸಿಕೊಂಡಿದ್ದು ಯುವ ಜೋಡಿ ಚಿತ್ರದಲ್ಲಿ ಮೋಡಿ ಮಾಡಿದೆ. ಕನ್ನಡ, ತೆಲುಗು,ತಮಿಳು,ಮಲೆಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಚಿತ್ರ ಏಕಕಾಲಕ್ಕೆ ನಾಳೆ ತೆರೆಗೆ ಬರಲಿದೆ.

ನಟ  ಝೈದ್ ಖಾನ್ ಮಾತನಾಡಿ  ಚಿತ್ರ ಐದು ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ಹೊಸಬ ಕಲಾವಿದ ಬೆಳೆಸಿ , ಹಾರೈಸಿ ಚಿತ್ರರಂಗವನ್ನೇ ಉಸಿರಾಗಿಸಿಕೊಳ್ಳುವ   ಆಸೆ ವ್ಯಕ್ತಪಡಿಸಿದರು.

ನಿರ್ದೇಶಕ ಜಯತೀರ್ಥ ಮಾಹಿತಿ ನೀಡಿ ದೇಶಾದಾದ್ಯಂತ  ಪ್ರವಾಸ ಮಾಡಿ ಚಿತ್ರದ ಬಗ್ಗೆ ಪ್ರಚಾರ ಮಾಡಿದ್ದು ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಜಿಎಫ್, ಕಾಂತಾರ ಚಿತ್ರದ ನಂತರ ಉತ್ತಮ‌‌ ಪ್ರತಿಕ್ರಿಯೆ  ವ್ಯಕ್ತವಾಗಿದೆ.ಒಳ್ಳೆಯ ಸಿನಿಮಾಗಳ ಬಗ್ಗೆ ಎಲ್ಲಾ ಕಡೆ  ಉತ್ತಮ ಅಭಿಪ್ರಾಯಗಳಿವೆ. ಬನಾರಸ್ ಪ್ರೇಕ್ಷಕರ ನಿರೀಕ್ಷೆಗೆ ಮೋಸ ಮಾಡದು ಎಂದರು.

ಚಿತ್ರದ ಹಿಂದೆ  ಮೂರು ವರ್ಷದ ಶ್ರಮ ಇದೆ. ಕನಸು ಜನರಿಗೆ ತಲುಪಿಸುವ ಸಮಯ ಬಂದಿದೆ. ಎಲ್ಲಾ ಭಾಷೆಯಲ್ಲಿಯೂ ಚಿತ್ರಕ್ಕೆ ಉತ್ತಮ‌ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿದೇಶಗಳಲ್ಲಿ ಒಂದು ವಾರದ ನಂತರ ಚಿತ್ರ ಬಿಡುಗಡೆಯಾಗಲಿದೆ ಎನ್ನುವ ಮಾಹಿತಿ ಹಂಚಿಕೊಂಡರು.

ಕಲಾವಿದ ಸುಜಯ್ ಶಾಸ್ತ್ರಿ  ಚಿತ್ರೀಕರಣಕ್ಕೆ ಕಾಶಿಗೆ ಹೋದಾಗ ಚಿತ್ರತಂಡಕ್ಕೆ  ಎನರ್ಜಿ ಕೊಟ್ಟಿದೆ. ಒಳ್ಳೆಯ ಸಿನಿಮಾದ ಭಾಗ ಆಗಿರುವುದು ಖುಷಿಯ ಸಂಗತಿ ಎಂದರು

ನಿರ್ಮಾಪಕ ತಿಲಕ್ ರಾಜ್ ಬಲ್ಲಾಳ್  ಮಾತನಾಡಿ, ಚಿತ್ರದ ಪ್ರಚಾರಕ್ಕೆ ಹೋದ‌ಕಡೆಯಲ್ಲೆಲ್ಲಾ ಉತ್ತಮ‌ ಅಭಿಪ್ರಾಯ ಬಂದಿದೆ.ಚಿತ್ರಕ್ಕೆ ಒಳ್ಳೆ ಆಫರ್‌ಬಂದಿದೆ.. ನಾಯಕನಲ್ಲಿ ಸಾಧಿಸುವ ಹಸಿವು ಇದೆ ಸಿನಿಮಾ ಎಂದರು.

ವಿತರಕ ಸುಪ್ರೀತ್ ಮಾತನಾಡಿ, ಬನಾರಸ್ ಚಿತ್ರದ‌ ಬಗ್ಗೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಮಲ್ಪಿಪ್ಲೆಕ್ಸ್ ಸೇರಿದಂತೆ ಎಲ್ಲೆಡೆ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ ಎಂದರು.

ನಾಯಕಿ ಸೋನಲ್ ಮಾಂಟೇರಿಯೋ, ನಾಯಕ ಝೈದ್ ಖಾನ್ ಮತ್ತು ನಿರ್ದೇಶಕ ಜಯತೀರ್ಥ ಸೇರಿದಂತೆ ಇಡೀ ತಂಡ ಚಿತ್ರವನ್ನು ಜನರಿಗೆ ತಲುಪಿಸಲು  ಹಲವು ದಿನದಿಂದ‌ ನಿತಂತರವಾಗಿ ಕೆಲಸ ಮಾಡಿದೆ.