ಕಾಂತರಾಜ್ ವರದಿ ಜಾರಿಗೆ ಆಗ್ರಹಿಸಿ ಒತ್ತಾಯ

(ಸಂಜೆವಾಣಿ ವಾರ್ತೆ)
ಸಿಂಧನೂರು.ಡಿ.೨೯- ಕಾಂತರಾಜ್ ವರದಿ ಜಾರಿಗೆ ಆಗ್ರಹಿಸಿ ತಾಲೂಕ ಹಿಂದುಳಿದ ವರ್ಗಗಳ ಒಕ್ಕೂಟದಿಂದ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.
ನಗರದ ಪ್ರವಾಸಿ ಮಂದಿರದಿಂದ ಕಾಲ್ನಡಿಗೆಯಲ್ಲಿ ತಹಶಿಲ್ ಕಛೇರಿಗೆ ಆಗಮಿಸಿದ ಹಿಂದುಳಿದ ವರ್ಗಗಳ ಒಕ್ಕೂಟದ ವತಿಯಿಂದ ಕಾಂತರಾಜ್ ಆಯೋಗದ ಆರ್ಥಿಕ, ಶೈಕ್ಷಣಿಕ ವರದಿಯನ್ನು ಸ್ವೀಕರಿಸಬೇಕು ಬೇಕೆ-ಬೇಕು ನ್ಯಾಯಬೇಕು. ಈ ಕೂಡಲೆ ಕಾಂತರಾಜ ಸಮೀಕ್ಷೆ ವರದಿಯನ್ನು ಸ್ವೀಕರಿಸಬೇಕು ಎಂದು ಒತ್ತಾಯಿಸಿದರು. ಹಿಂದುಳಿದ ವರ್ಗಗಳನ್ನು ರಾಜಕೀಯವಾಗಿ, ಶೈಕ್ಷಣಿಕ ವಾಗಿ ಹತ್ತಿಕ್ಕಬೇಕು ಎಂಬ ದುರುದ್ದೇಶದಿಂದ ಈ ಕುತಂತ್ರ ನಡೆದಿದೆ. ನಾವು ಜಾತುಯಿಂದ ಬೇರೆ ಅಲ್ಲ ನಾವೆಲ್ಲಾ ಹಿಂದುಳಿದ ವರ್ಗಗಳ ಎಂದರು.ಸುಮಾರು ೧೬೮ ಕೋಟಿ ರೂ. ವ್ಯಯ ಮಾಡಿ ರಚಿಸಿದ ೫೮ ಅಂಶಗಳನ್ನು ಒಳಗೊಂಡ ಒಂದು ಸುದೀರ್ಘ ವರದಿಯನ್ನು ತಯಾರಿಸಲಾಗಿದೆ.
ಈ ದೇಶದಲ್ಲಿ ಸಮ ಸಮಾಜ ನಿರ್ಮಾಣ ವಾಗಲು ಹಿಂದುಳಿದ ವರ್ಗಗಳಿಗೆ ಎಲ್ಲಾ ವರ್ಗದಲ್ಲಿ ಮೀಸಲಾತಿ ಯನ್ನು ನೀಡಬೇಕು ಮತ್ತು ವರರದಿಯಲ್ಲನ ಅಂಶಗಳನ್ನು ತಿದ್ದುಪಡಿ ಮಾಡದೇ ಯಥವತ್ತಾಗಿ ಜಾರಿಗೆ ತರಬೇಕು ಎಂದು ಹಿಂದುಳಿ ವರ್ಗಗಳಾದ ಕುರುಬ ಸಮಾಜ, ಯಾದವ ಸಮಾಜ, ಮಡಿವಾಳ ಸಮಾಜ, ಗಂಗಾಮತ, ಸವಿತಾ, ಮರಾಠ, ನೇಕಾರ, ಯಳವರು, ಜೋಗೆರ, ಈಡಿಗ, ಉಪ್ಪಾರ, ಕುಂಬಾರ, ಕಂಬಾರ, ದೇವಾಂಗ, ಹಡಪದ, ವಿಶ್ವಕರ್ಮ, ಪದ್ಮಸಾಲಿ, ಸಾಸರ ವಿವಿಧ ಸಮಾಜಗಳ ಮುಖಂಡರು, ಪದಾಧಿಕಾರಿಗಳು ಒಳಗೊಂಡು ನೂರಾರು ಜನ ಪಾಲ್ಗೊಂಡಿದ್ದರು.
ಹಿಂದುಳಿದ ವರ್ಗಗಳ ಮುಖಂಡರಾದ ಕೆ.ಕರಿಯಪ್ಪ, ಭೀಮಣ್ಣ ಸಂಗಟಿ, ಹಿಂದುಳಿದ ವರ್ಗಗಳ ತಾಲೂಕ ಅಧ್ಯಕ್ಷ ಎಂ.ದೊಡ್ಡ ಬಸವರಾಜ, ಕಾರ್ಯಾದ್ಯಕ್ಷ ಎಂ.ಶ್ರೀನಿವಾಸಗೌಡ, ಪ್ರಧಾನ ಕಾರ್ಯದರ್ಶಿ ನಿರುಪಾದೆಪ್ಪ ವಕೀಲರು ಗುಡಿಹಾಳ, ಹಂಪಣ್ಣ, ಕೆ.ರಾಜಶೇಖರ, ಶೇಖರಗೌಡ ದೇವರಮನಿ, ನಿಂಗಪ್ಪ ಗೋಸಬಾಳ, ಕಿಚ್ಚಾ ಸುರೇಶ, ಹನುಮೇಶ ಬಾಗೋಡಿ, ಬಾಪುಗೌಡ ದೇವರಮನಿ, ದುಗ್ಗಪ್ಪ ಸುಕಾಲಪೇಟೆ, ಸಿದ್ದೇಶ್ವರ ಗುರಿಕಾರ, ಚನ್ನಬಸಣ್ಣ, ಲಿಂಗಪ್ಪ ಹೊಸಳ್ಳಿ, ಮುದಕಣ್ಣ ಸಾಸಲಮರಿ, ವಿರೇಶ ಯಾದವ್ ಬಸವರಾಜ ಕುರುಕುಂದ, ನಾಗರಾಜ ಬಾದರ್ಲಿ, ಶರಣಪ್ಪ ಚಿರತನಾಳ, ಬಸವರಾಜ ಊಟಕನೂರು ಸೇರಿದಂತೆ ಹಲವರು ಮನವಿ ಸಲ್ಲಿಸಿದರು.