ಕಾಂತರಾಜು ವರದಿ ಜಾರಿಗೆ ಆಗ್ರಹ

ಸಂಜೆವಾಣಿ ನ್ಯೂಸ್
ಮೈಸೂರು: ಡಿ.28:- ಜಾತಿ ಆಧರಿಸಿದ ಮೀಸಲಾತಿ ಜಾರಿ ದೇಶದಾದ್ಯಂತ ಚರ್ಚೆಗೆ ಕಾರಣವಾಗಿದೆ. ಈ ರೀತಿಯ ವರದಿಯಲ್ಲಿಯೇ ಮೂಲ ನಿವಾಸಿಗಳು, ಬಹು ಸಂಖ್ಯಾತರ ಭವಿಷ್ಯ ಅಡಗಿದೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ಅವರು ಕಾಂತರಾಜ ಜಾತಿ ಗಣತಿ ವರದಿಯನ್ನು ಜಾರಿಗೊಳಿಸಬೇಕೆಂದು ಪ್ರಗತಿಪರ ಚಿಂತಕ ಪೆÇ್ರ. ಮಹೇಶ್ಚಂದ್ರಗುರು ಆಗ್ರಹಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಡನೆ ಮಾತನಾಡಿ, ಈ ದಿನಗಳಲ್ಲಿ ನವ ಮಂಡಲ್ ಚಳವಳಿ ನಡೆಯಬೇಕಾದ ಅಗತ್ಯವಿದೆ. ಧರ್ಮಾತೀತ, ಜಾತ್ಯತೀತವಾಗಿ ಎಲ್ಲರಿಗೂ ಸವಲತ್ತು ಸಿಗಬೇಕಾದರೆ ಇಡೀ ದೇಶದಾದ್ಯಂತ ಜಾತಿ ಗಣತಿ ನಡೆಯಬೇಕು. ಅದಕ್ಕೆ ಅನುಗುಣವಾಗಿ ಎಲ್ಲರಿಗೂ ಸವಲತ್ತು ಸಿಗಬೇಕು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸಹಾ ಸಾಮಾಜಿಕ, ಆರ್ಥಿಕ ಸಮಾನತೆಗೆ ಬದ್ಧರಾಗಿರಬೇಕೆಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾಜಿ ಮೇಯರ್ ಪುರುಷೋತ್ತಮ್ ಮಾತನಾಡಿ, ಕಾಂತರಾಜು ವರದಿ ಜಾರಿಗೊಳಿಸುವ ಸಾಮಥ್ರ್ಯ ಕೇಲವ ಸಿಎಂ ಸಿದ್ದರಾಮಯ್ಯ ಅವರಿಗೆ ಮಾತ್ರ ಇದೆ. ಇನ್ನು, ವರದಿ ಬಿಡುಗಡೆ ಮೊದಲೇ ಅದನ್ನು ವಿರೋಧಿಸುವುದು ಬೇಡ. ಬಳಿಕವಷ್ಟೇ ಚರ್ಚೆ ನಡೆಯಲಿ ಎಂದು ಆಗ್ರಹಿಸಿದರು.
ಇದೇ ವೇಳೆ, ನಂಜನಗೂಡಿನಲ್ಲಿ ಮಹಿಷನ ರಂಗೋಲಿಯನ್ನು ಚಪ್ಪಲಿ ಕಾಲಿನಿಂದ ತುಳಿದು ಅಪಮಾನಿಸಿರುವುದು ಸರಿಯಲ್ಲ. ಇದನ್ನು ವಿರೋಧಿಸಿದ ಕೆಲವರ ಮೇಲೆ ದೂರು ನೀಡಲಾಗಿದೆ. ನಾವೂ ಸಹಾ ಪ್ರತಿ ದೂರು ನೀಡಲಿದ್ದೇವೆ.
ಘಟನೆಗೆ ಕಾರಣರಾದವರ ವಿರುದ್ಧ ಪೆÇಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮುಖಂಡರಾದ ಸಿದ್ದಸ್ವಾಮಿ, ಸೋಮಯ್ಯ ಮಲೆಯೂರು, ಜವರಪ್ಪ ಹಾಗೂ ಇನ್ನಿತರರು ಹಾಜರಿದ್ದರು.