
ಸಂಜೆವಾಣಿ ವಾರ್ತೆ
ಹನೂರು: ಆ.19:- ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ವಿಭಾಗ ವ್ಯಾಪ್ತಿಗೆ ಒಳಪಡುವ ಪೆÇನ್ನಾಚಿ ಗ್ರಾಮದ ಸುತ್ತಮುತ್ತ ರೈತರು ಸಾರ್ವಜನಿಕರಿಗೆ ತಲೆ ನೋವಾಗಿದ್ದ ಒಂಟಿ ಆನೆ ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದ್ದು ಆನೆಯನ್ನು ಸೆರೆಹಿಡಿಯಲಾಗಿದೆ.
ಪೆÇನ್ನಾಚಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಉಪಟಳ ಕೊಡುತ್ತಿದ್ದ ಪುಂಡಾನೆ ಸೆರೆ ಹಿಡಿಯಲು ನಾಗರಹೊಳೆ ಕುಶಾಲನಗರ ದುಬಾರೆ ಶಿಬಿರದಿಂದ ಆಗಮಿಸಿರುವ ಆನೆಗಳಾದ ಬಲರಾಮ, ಅರ್ಜುನ, ಅಶ್ವತ್ಥಾಮ, ಕರ್ಣ ಸೇರಿದಂತೆ 6 ಆನೆಗಳು ಕಾರ್ಯಚರಣೆಯಲ್ಲಿ ಭಾಗವಹಿಸಿ ಪುಂಡಾನೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಕಳೆದ ಮೂರು ನಾಲ್ಕು ತಿಂಗಳಿಂದ ಒಂಟಿ ಆನೆಯೊಂದು ಕಾಡಂಚಿನ ಜನರಿಗೆ ತೊಂದರೆ ಕೊಡುತ್ತಿತ್ತು ರೈತರು ಬೆಳೆದಿದ್ದ ಬೆಳೆಯನ್ನು ನಾಶ ಮಾಡುವುದರ ಜೊತೆಗೆ ಮನೆಗಳ ಬಳಿ ಬಂದು ಗೇಟ್ ಗೋಡೆ ಹಾಗೂ ಬೈಕ್ಗಳ ಮೇಲೆ ದಾಳಿ ಮಾಡಿ ಹಾನಿ ಮಾಡುತ್ತಿತ್ತು ಇದರಿಂದ ಹಲವಾರು ರೈತರಿಗೆ ಲಕ್ಷಾಂತರ ರೂಗಳಷ್ಟು ನಷ್ಟವಾಗಿದೆ.
ಇದರಿಂದ ಭಯಭೀತರಾಗಿದ್ದ ರೈತರು ಸಾರ್ವಜನಿಕರು ಆನೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯ ಮಾಡಿದ್ದರು. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶದಂತೆ ಒಂಟಿ ಆನೆಯನ್ನು ಸೆರೆ ಹಿಡಿಯುವ ಕಾರ್ಯಚರಣೆ ನಡೆಸಿದರು.
ಪೆÇನ್ನಾಚಿ ಗ್ರಾಮದಿಂದ ಶುಕ್ರವಾರ ಆನೆ ಸೆರೆ ಹಿಡಿಯುವ ಕಾರ್ಯಚರಣೆ ನಡೆಸಿದ ಅರಣ್ಯ ಇಲಾಖೆಯವರು ಮಧ್ಯಾಹ್ನ ವೇಳೆಗೆ ಗೇರಟ್ಟಿ ಕತ್ರಿ ಅರಣ್ಯ ವಲಯದಲ್ಲಿ ಪುಂಡಾಣಿ ಸಿಕ್ಕಿಬಿದ್ದಿದ್ದು ಅರವಳಕೆ ಮದ್ದು ನೀಡಿ ಆನೆಯನ್ನು ಸೆರೆ ಹಿಡಿಯಲಾಗಿದೆ. ನಂತರ ಅಲ್ಲಿಂದ ಆನೆಯನ್ನು ಗ್ರಾಮದ ಮುಖ್ಯ ರಸ್ತೆಗೆ ತರುವಷ್ಟರಲ್ಲಿ ಅರ್ಜುನ ಮತ್ತು ಬಲರಾಮ ಆನೆಯ ನೇತೃತ್ವದ ತಂಡ ಅರಣ್ಯ ಅಧಿಕಾರಿಗಳು ಹರ ಸಾಹಸವನ್ನು ಪಡಬೇಕಾಯಿತು.
ಬಿಗಿ ಪೆÇಲೀಸ್ ಬಂದೋಬಸ್ತ್ ವ್ಯವಸ್ಥೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ರಾತ್ರಿಯ ವೇಳೆಗೆ ಪುಂಡಾನೆಯನ್ನು ಕ್ರೈನ್ ಮೂಲಕ ಲಾರಿಗೆ ಹತ್ತಿಸಿ ನಂತರ ಅಲ್ಲಿಂದ ಆನೆ ಶಿಬಿರಕ್ಕೆ ರವಾನಿಸಲಾಗಿದೆ. ಇದೀಗ ಪೆÇನ್ನಾಚಿ ಗ್ರಾಮದ ಸುತ್ತಮುತ್ತ ಗ್ರಾಮಸ್ಥರು ನಿಟ್ಟಿಸಿರು ಬಿಟ್ಟಂತಾಗಿದೆ.