ಕಾಂಗ್ರೇಸ್ ಸಂಸ್ಥಾಪನಾ ದಿನಾಚರ

????????????????????????????????????

ಸಿರುಗುಪ್ಪ, ಡಿ.29: ನಗರದ ಕಾಂಗ್ರೇಸ್ ಪಕ್ಷದ ಕಚೇರಿಯಲ್ಲಿ ಸೋಮವಾರ ತಾಲೂಕ ಕಾಂಗ್ರೇಸ್ ಪಕ್ಷದ ವತಿಯಿಂದ 136ನೇ ಕಾಂಗ್ರೇಸ್ ಪಕ್ಷ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಮಹಾತ್ಮ ಗಾಂಧೀಜಿ ಹಾಗೂ ಜವಹರ್ ಲಾಲ್ ನೆಹರು ಅವರ ಭಾವಚಿತ್ರಗಳಿಗೆ ಮಾಜಿ ಶಾಸಕ ಬಿ.ಎಮ್.ನಾಗರಾಜ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು 1885ರಲ್ಲಿ ಅಲನ್ ಆಕ್ಟೇವಿಯನ್ ಹ್ಯೂಮ್ ಅವರು ದಾದಾಭಾಯಿ ನವರೋಜಿಯವರ ನೇತೃತ್ವದಲ್ಲಿ ಸ್ಥಾಪಿಸಿದ್ದು ಸ್ವಾತಂತ್ರ ಸಂಗ್ರಾಮದಿಂದ ಇಂದಿನವರೆಗೂ ದೇಶದಲ್ಲಿ ಸಾಮಾಜಿಕ ಬದ್ದತೆಯಿಂದ ಕಾರ್ಯನಿರ್ವಹಿಸಿಕೊಂಡು ಬಂದಿದೆ ದೇಶಕ್ಕೆ ಕಾಂಗ್ರೇಸ್ ಪಕ್ಷದ ಕೊಡುಗೆ ಅಪಾರವಾದದ್ದು ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೇಸ್ ತಾಲೂಕು ಅಧ್ಯಕ್ಷ ಎನ್.ಕರಿಬಸಪ್ಪ, ಒ.ಬಿ.ಸಿ.ಘಟಕದ ತಾಲೂಕ ಅಧ್ಯಕ್ಷ ಕಾಯಿಪಲ್ಲೆ ನಾಗರಾಜ, ನಗರಸಭೆ ಅಧ್ಯಕ್ಷ ಡಿ.ನಾಗರಾಜ, ಯುವ ಕಾಂಗ್ರೇಸ್ ಘಟಕದ ಅಧ್ಯಕ್ಷ ಪವನ್ ದೇಸಾಯಿ ನಗರಸಭೆ ಸದಸ್ಯರಾದ ಆರ್.ನಾಗರಾಜ, ಮೋದಿನ್, ಟಿ.ನಜೀರ್, ವಿ.ಪರಶುರಾಮ್, ಜಾಜಿರಾಮ್, ಗಣೇಶ, ಮಹೇಶಗೌಡ, ಮುಖಂಡರಾದ ಮುಲ್ಲಾಬಾಬು, ಸಣ್ಣ ವೆಂಕಟೇಶ, ಮುತ್ತಾಲಯ್ಯಶೆಟ್ಟಿ, ಕೋಟಿರೆಡ್ಡಿ, ನಜೀರ್, ಖಲೀಮುಲ್ಲಾ ಇದ್ದರು.