ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕಾಂಗ್ರೇಸ್ ಪಕ್ಷದಿಂದ ಸನ್ಮಾನ

????????????????????????????????????

ಸಿರುಗುಪ್ಪ ಜ 12 : ನಗರದ ಶ್ರೀಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಆಯ್ಕೆಯಾದ ಕಾಂಗ್ರೇಸ್ ಬೆಂಬಲಿತ ನೂತನ ಗ್ರಾಮ ಪಂಚಾಯಿತಿ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮಕ್ಕೆ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಟಿ.ಎಂ.ಚಂದ್ರಶೇಖರಯ್ಯಸ್ವಾಮಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಕಾಂಗ್ರೇಸ್ ಪಕ್ಷ ಸಿದ್ದಾಂತ, ತತ್ವ, ಬಡವರ, ಹಿಂದುಳೀದವರ ಪಕ್ಷವಾಗಿದೆ, ಇಂದು ನಡೆಸುವ ಬಿಜೆಪಿ ಸರ್ಕಾರವು ಶ್ರೀಮಂತ, ವ್ಯಾಪಾರಿಗಳ ಪಕ್ಷವಾಗಿದೆ, ಹಣಹೊಂದಿದವರು ನಡೆಸುವ ಪಕ್ಷ ಬಿಜೆಪಿ ಪಕ್ಷವಾಗಿದೆ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಕಾಯ್ದೆಗಳ ವಿರುದ್ದ ಹಗಲು ರಾತ್ರಿ ಎನ್ನದೆ ರೈತರು ಹೊರಾಟ ನಡೆಸುತ್ತಿದ್ದರು ಸರ್ಕಾರ ಮಾತ್ರ ಅವರ ಮಾತು ಕೇಳುತ್ತಿಲ್ಲ, ಅದೇ ಒಬ್ಬ ಶ್ರೀಮಂತನ ಮನೆಯಲ್ಲಿ ಸಂಭ್ರಮ ಕಾರ್ಯ ಇದೆ ಎಂದರೆ ಅಲ್ಲಿಗೆ ಸರ್ಕಾರವೇ ಬಂದು ಸಂಭ್ರಮದಲ್ಲಿ ಭಾಗಿಯಾಗುತ್ತದೆ, ಬಿಜೆಪಿ ಸರ್ಕಾರವು ನೇರವಾಗಿ ಮತದಾರರ ಮುಂದೆ ಬಂದು ಗೆಲ್ಲದೆ ವಾಮ ಮಾರ್ಗವನ್ನು ಹುಡುಕುತ್ತಿದೆ, ಆದ್ದರಿಂದ ಗ್ರಾಮೀಣ ಭಾಗದಲ್ಲಿ ವಿಜೇತರಾದ ಕಾಂಗ್ರೇಸ್ ಅಭ್ಯರ್ಥಿಗಳು ಸ್ಥಾನ ಸಿಕ್ಕಿಲ್ಲ ಎಂದು ಪಕ್ಷವನ್ನು ತೊರೆಯದೆ ಕಾಂಗ್ರೇಸ್ ಪಕ್ಷಕ್ಕೆ ನಿಷ್ಠೆಯಾಗಿರುವಂತೆ ತಿಳಿಸಿದರು.
ಮಾಜಿ ಶಾಸಕ ಬಿ.ಎಂ.ನಾಗರಾಜ ಮಾತನಾಡಿ ಈ ಹಿಂದೆ ನಮ್ಮ ಕಾಂಗ್ರೇಸ್ ಸರ್ಕಾರದ ಆಡಳಿತ ಅವಧಿಯಲ್ಲಿ ಮಾಡಿದ ಅಭಿವೃದ್ದಿ ಪರ ಕಾರ್ಯಗಳು ಮನಗೊಂಡು 26 ಗ್ರಾಮ ಪಂಚಾಯಿತಿಯಲ್ಲಿ 16ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗಳಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಿರುವುದಕ್ಕೆ ಸಾಕ್ಷಿಯಾಗಿದೆ, ಕಾಂಗ್ರೇಸ್ ಪಕ್ಷದಲ್ಲಿ ಎಲ್ಲಾರ ಹಿರಿಯರ ಮಾರ್ಗದರ್ಶನದಲ್ಲಿ ಯುವ ಕಾರ್ಯಕರ್ತರು ಒಗ್ಗಟಿನಿಂದಾಗಿ ಕೆಲಸ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನಿಯವಾಗಿದೆ.
2018ರ ವಿಧಾನಸಭಾ ಪರಾಜಿತ ಅಭ್ಯರ್ಥಿ ಕಾಂಗ್ರೇಸ್ ಮುಖಂಡ ಮುರುಳಿಕೃಷ್ಣ ಮಾತನಾಡಿ ಗ್ರಾಮಪಂಚಾಯಿತಿ ಚುನಾವಣೆಯು ಮುಂದೆ ನಡೆಯುವ ಎಲ್ಲಾ ಚುನಾವಣೆಗಳಿಗೆ ಬುನಾದಿಯಾಗಿದೆ, ತಾಲೂಕಿನ ಗ್ರಾಮೀಣ ಭಾಗದಲ್ಲಿ ಕಾಂಗ್ರೇಸ್ ಪಕ್ಷವನ್ನು ಬೂತಮಟ್ಟದಲ್ಲಿ ಜಯಬೇರಿಗಳಿಸುವಂತೆ ಮಾಡಿದ ಪಕ್ಷದ ಹಿರಿಯ ಮುಖಂಡರಿಗೂ, ಗೆಲ್ಲುವಿಗಾಗಿ ಹಲಿರುಳು ಶ್ರಮಿಸಿದ ಕಾರ್ಯಕರ್ತರಿಗೆ, ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಮತನೀಡಿದ ಮತದಾರಿಗೆ ಅಭಿನಂದನೆಗಳನ್ನು ಸಲ್ಲಿಸಿದರು,ಮೀಸಲಾತಿಯಡಿಯಲ್ಲಿ ಅಧಿಕಾರಿಕ್ಕಾಗಿ ಬೇರೆಯವರ ಆಮಿಷಕ್ಕೆ ಒಳಗಾಗಿ ಪಕ್ಷಾಂತರವಾಗದೆ ದೃಢ ನಿರ್ದಾರದಿಂದ ಕಾಂಗ್ರೇಸ್ ಪಕ್ಷದ ಸಂಘಟನೆಯಲ್ಲಿ ಪಾಲ್ಗೊಳ್ಳುವಂತೆ ವಿಜೇತ ಅಭ್ಯರ್ಥಿಗಳಿಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಕಾಂಗ್ರೇಸ್ ಬೆಂಬಲಿತ ನೂತನ ವಿಜೇತ ಅಭ್ಯರ್ಥಿಗಳಿಗೆ ಕಾಂಗ್ರೇಸ್ ಪಕ್ಷದಿಂದ ಸನ್ಮಾನಿಸಿ ಗೌರವಿಸಿದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಪಕ್ಷದ ಉಪಾಧ್ಯಕ್ಷೆ ಲಕ್ಷ್ಮೀ ಉಮೇಶ, ತಾಲೂಕು ಕಾಂಗ್ರೇಸ್ ಪಕ್ಷದ ಅಧ್ಯಕ್ಷ ಕರಿಬಸಪ್ಪ, ತೆಕ್ಕಲಕೋಟೆ ಬ್ಲಾಕ್ ಕಾಂಗ್ರೇಸ್ ಪಕ್ಷದ ಉಪಾಧ್ಯಕ್ಷೆ ಶೈಲಾಜ, ನಗರಸಭೆ ಅಧ್ಯಕ್ಷ ಡಿ.ನಾಗರಾಜ, ಕಾಂಗ್ರೇಸ್‍ನ ಮುಖಂಡರಾದ ಗೋಪಾಲಕೃಷ್ಣರೆಡ್ಡಿ ಗೌಡ, ಕರ್ಣಂಸಿದ್ದನಗೌಡ, ವಕೀಲ ಮಲ್ಲಿಕಾರ್ಜುನ ಸ್ವಾಮಿ, ಶಿವಶಂಕರಗೌಡ, ಹೆಚ್.ಎಂ.ಮಲ್ಲಿಕಾರ್ಜುನ, ದೇವರಮನೆ ನಾಗಪ್ಪ, ರಾಮಸ್ವಾಮಿ ಸಾಹುಕಾರ, ನರಸಿಂಹನಾಯಕ, ಬಿ.ಎಂ.ಸತೀಶ, ಗಟ್ಟಿರಾಮಲಿಂಗಪ್ಪ, ವೆಂಕಟರಾಮರೆಡ್ಡಿ, ಪಂಪಯ್ಯಸ್ವಾಮಿ, ಬಿ.ಕೆ.ರಘು, ನೂರುಲ್ ಖಾನ್, ಎಂ.ವೀರನಗೌಡ, ಟಿ.ಎಂ.ಸಿದ್ದರಾಮಯ್ಯಸ್ವಾಮಿ, ರಾಯುಡು, ಮಹೇಶಗೌಡ ಇದ್ದರು.