ಕಾಂಗ್ರೇಸ್ ಪಕ್ಷ ಸೂರ್ಯ, ಚಂದ್ರ ಗ್ರಹಣದಂತೆ ದೇಶಕ್ಕೆ ಮಾರಕ


ಚಿತ್ರದುರ್ಗ,ಡಿ.6: ಸೂರ್ಯ ಹಾಗೂ ಚಂದ್ರ ಗ್ರಹಣ ಯಾವ ರೀತಿ ಕೆಟ್ಟದನ್ನು‌ ಸೃಷ್ಠಿ ಮಾಡುತ್ತವೆಯೋ ಅದೇ ರೀತಿ ಕಾಂಗ್ರೇಸ್ ಪಕ್ಷವೂ ಕೂಡ ರಾಜ್ಯ ಹಾಗೂ ದೇಶಕ್ಕೆ ಮಾರಕವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಕಿಡಿಕಾರಿದರು.
ನಗರದಲ್ಲಿ ಇಂದು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ 65 ನೇ ಪುಣ್ಯ ಸ್ಮರಣೆ ನಿಮಿತ್ತ ನಗರದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಹಣಗಳು ಯಾವ ರೀತಿ ಬಂದು ಹೋಗುತ್ತವೋ ಅದೇ ಕಾಂಗ್ರೇಸ್ ಪಕ್ಷ ಬಂದು ಹೋಗುತ್ತದೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ. ಅಭಿವೃದ್ಧಿ ಕಾರ್ಯಗಳಿಗೆ ತಡೆಗೋಡೆ ಆಗಿ ನಿಲ್ಲುವಂತಹ ಪಕ್ಷ. ಇವರಿಂದ ದೇಶ ಹಾಗೂ ರಾಜ್ಯ ಅಭಿವೃದ್ಧಿ ಸಾಧ್ಯವಿಲ್ಲ. ಹಾಗಾಗಿ ಬಿಜೆಪಿ ಪಕ್ಷಕ್ಕೆ ಜನರ ಆಶಿರ್ವಾದ ಇದ್ದು, ರಾಜ್ಯದಲ್ಲಿ 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ನಡೆಯುತ್ತಿದ್ದು, 20 ಸ್ಥಾನಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಇದರಲ್ಲಿ 15 ಸ್ಥಾನಗಳನ್ನು ನಾವು ಗೆಲ್ಲಲಿದ್ದೆವೆ ಎಂದು ಹೇಳಿದರು.ಕಾಂಗ್ರೇಸ್ ಪಕ್ಷ ಪ್ರಸ್ತುತ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ಹರ ಸಾಹಸ ಪಡುತ್ತಿದೆ. ಇವರುಗಳಿಗೆ ಜನರು ಇಂದಿನ ವಿಧಾನ ಪರಿಷತ್ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದು, ಬಿಜೆಪಿ ಚಿತ್ರದುರ್ಗದಲ್ಲಿ ನವೀನ್ ಸೇರಿದಂತೆ 15 ಸ್ಥಾನಗಳನ್ನು ಗೆಲ್ಲಲಿದೆ ಎಂದರು.ಈ ವೇಳೆ ಕೇಂದ್ರ ಸಚಿವ ನಾರಾಯಣಸ್ವಾಮಿ, ಶಾಸಕ ಜಿ‌.ಹೆಚ್.ತಿಪ್ಪಾರೆಡ್ಡಿ, ಕೆ.ಎಸ್.ನವೀನ್ ಸೇರಿದಂತೆ ಇತರರು‌ ಹಾಜರಿದ್ದರು.